ಅಮೆರಿಕ (America) ಸೇನೆ ರಷ್ಯಾ – ಉಕ್ರೇನ್ ಯುದ್ಧದಲ್ಲಿ ಭಾಗಿ ಆಗಲ್ಲ: ಪುಟಿನ್​​ಗೆ ಬೈಡನ್

Team Newsnap
1 Min Read

ಅಮೆರಿಕ (America) ಸೇನೆ ಯುದ್ಧದಲ್ಲಿ ಭಾಗಿ ಆಗುವುದಿಲ್ಲ. ಆದರೆ ಉಕ್ರೇನ್ ಗೆ ಬೆಂಬಲ ಇದೆ ಎಂದ ಜೋ ಬೈಡನ್ ಭರವಸೆ ನೀಡಿದ್ದಾರೆ

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 6 ದಿನಗಳ ಹಿಂದೆ ತಪ್ಪು ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ನಾವು (ರಷ್ಯಾ) ಉಕ್ರೇನ್​ನನ್ನು ಹಿಮ್ಮೆಟ್ಟಿಸುತ್ತೇವೆ ಎಂದು ರಷ್ಯಾ ಭಾವಿಸಿತ್ತು. ಉಕ್ರೇನ್ ಜನರು ರಷ್ಯಾಕ್ಕೆ ಉತ್ತರವನ್ನು ನೀಡುತ್ತಿದ್ದಾರೆ, ಉಕ್ರೇನಿಯರು ಧೈರ್ಯ ತೋರಿಸಿದ್ದಾರೆ. ಉಕ್ರೇನ್ ಜನರೊಂದಿಗೆ ಅಮೆರಿಕ ನಿಂತಿದೆ ಎಂದು ಅಮೇರಿಕಾಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಉಕ್ರೇನ್-ರಷ್ಯಾ ಯುದ್ಧದ ಬೆನ್ನಲ್ಲೇ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು, ‘ಸ್ಟೇಟ್ ಆಫ್ ಯೂನಿಯನ್’ (ಎಸ್ಒಟಿಯು) ಅನ್ನು ಉದ್ದೇಶಿಸಿ ಅಧ್ಯಕ್ಷ ಬೈಡನ್ ಮಾತನಾಡಿದರು.

ರಷ್ಯಾ ಪ್ರಪಂಚದ ಅಡಿಪಾಯವನ್ನು ಅಲುಗಾಡಿಸಲು ಪ್ರಯತ್ನಿಸಿದೆ. ರಷ್ಯಾ ಪ್ರಪಂಚದ ಅಡಿಪಾಯವನ್ನು ಅಲುಗಾಡಿಸಲು ಪ್ರಯತ್ನಿಸಿದೆ. ಪುಟಿನ್ ಯುದ್ಧಭೂಮಿಯಲ್ಲಿ ಪ್ರವೀಣರಿರಬಹುದು, ಆದರೆ ಮುಂದಿನ ದಿನಗಳಲ್ಲಿ ಅವರು ಅದಕ್ಕೆ ಬೆಲೆಯನ್ನು ತೆತ್ತುತ್ತಾರೆ. ನಾವು ರಷ್ಯಾದ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರುತ್ತಿದ್ದೇವೆ. ಅಮೆರಿಕಾ ಮಾತ್ರವಲ್ಲ, ವಿಶ್ವದ ಅನೇಕ ದೇಶಗಳು ಉಕ್ರೇನ್‌ನೊಂದಿಗೆ ನಿಂತಿವೆ.

ಈ ಸಮಯದಲ್ಲಿ ಅಮೆರಿಕದ ವಾಯುನೆಲೆಗಳಿಗೆ ರಷ್ಯಾ ವಿಮಾನಗಳು ಪ್ರವೇಶಿಸಲು ಅವಕಾಶ ನೀಡುವುದಿಲ್ಲ. ಅಮೆರಿಕ ಏರ್​ಸ್ಪೇಸ್​ಗೆ ರಷ್ಯಾಗೆ ನೋ ಎಂಟ್ರಿ ಎಂದಿದೆ . ಅಮೆರಿಕ ಮತ್ತು ನಮ್ಮ ಮಿತ್ರರಾಷ್ಟ್ರಗಳು ನ್ಯಾಟೋದ ಪ್ರತಿಯೊಂದು ಇಂಚಿನ್ನೂ ಸಾಮೂಹಿಕ ಶಕ್ತಿಯೊಂದಿಗೆ ರಕ್ಷಿಸುತ್ತವೆ ಎಂದು ಭರವಸೆ ನೀಡಿದರು.

Share This Article
Leave a comment