December 23, 2024

Newsnap Kannada

The World at your finger tips!

ukren 5

ಉಕ್ರೇನ್ ನಿಂದ ಕರುನಾಡಿಗೆ ಕಾಲಿಟ್ಟು ನಿಟ್ಟುಸಿರು ಬಿಟ್ಟ ಕನ್ನಡಿಗರು: ಬಿಜೆಪಿ ನಾಯಕರ ಸ್ವಾಗತ

Spread the love

ಉಕ್ರೇನ್​ನಲ್ಲಿ ಸಿಲುಕಿದ್ದ ಭಾರತೀಯರನ್ನು ಇಂದು ಮುಂಜಾನೆ ರೊಮೇನಿಯಾದ ಬುಕಾರೆಸ್ಟ್​ನಿಂದ 250 ಮಂದಿ ಭಾರತೀಯರನ್ನು ಹೊತ್ತ 2ನೇ ವಿಮಾನ ದೆಹಲಿ ತಲುಪಿದೆ.

ಈ 2ನೇ ವಿಮಾನದಲ್ಲಿ 13 ಜನ ಕನ್ನಡಿಗರು ಕೂಡ ಸುರಕ್ಷಿತವಾಗಿ ತಾಯ್ನಾಡು ತಲುಪಿದ್ದಾರೆ.

ದೆಹಲಿಗೆ ಆಗಮಿಸಿದ ಕನ್ನಡಿಗರಿಗೆ ಕರ್ನಾಟಕ ಭವನದಲ್ಲಿ ಉಳಿದುಕೊಳ್ಳೋಕೆ ವ್ಯವಸ್ಥೆ ಮಾಡಲಾಗಿತ್ತು. ಆ ಬಳಿಕ ಅವರನ್ನು ಬೆಂಗಳೂರಿಗೆ ಕಳಿಸಿಕೊಡುವ ಎಲ್ಲಾ ಏರ್ಪಾಟುಗಳನ್ನು ಮಾಡಲಾಗಿತ್ತು.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿದ್ಯಾರ್ಥಿಗಳನ್ನು ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್​ ಜೋಶಿ, ಹಾಗೂ ರಾಜ್ಯ ಕಂದಾಯ ಸಚಿವ ಆರ್​.ಅಶೋಕ್​ ತುಂಬು ಹೃದಯದಿಂದ ಬರಮಾಡಿಕೊಂಡಿದ್ದಾರೆ.

ಧನ್ಯತಾ ಭಾವ ಹೊತ್ತು ವಿಮಾನದಿಂದ ಇಳಿದ ವಿದ್ಯಾರ್ಥಿಗಳು ಉಭಯ ನಾಯಕರಿಗೆ ಗುಲಾಬಿ ಹೂ ನೀಡಿ ಧನ್ಯವಾದ ತಿಳಿಸಿದ್ದಾರೆ.

ಆ ಬಳಿಕ ಆರ್​. ಅಶೋಕ್​​ ವಿದ್ಯಾರ್ಥಿಗಳ ಜೊತೆ ಕುಳಿತು ಕೆಲ ಹೊತ್ತು ಚರ್ಚೆ ನಡೆಸಿದ್ದ, ಉಕ್ರೇನ್​ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!