ಆರ್ಸಿಬಿ ತಂಡದ ಡೈರೆಕ್ಟರ್ ಮೈಕ್ ಹೆಸನ್ ಈ ಸುಳಿವನ್ನು ನೀಡಿದ್ದಾರೆ. ಫಾಫ್ ಡು ಪ್ಲೆಸಿಸ್ ಒಬ್ಬ ಅನುಭವಿ ಆಟಗಾರ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಪಳಗಿದ್ದಾರೆ. ಅಲ್ಲದೆ ರಾಷ್ಟ್ರೀಯ ತಂಡದ ನಾಯಕನಾಗಿಯೂ ಸೇವೆ ಸಲ್ಲಿಸಿದ್ದಾರೆ ಎಂದಿದ್ದಾರೆ.
ಮೆಗಾ ಹರಾಜಿಗೂ ಮುನ್ನ ಯಾರನ್ನೆಲ್ಲಾ ಖರೀದಿಸಬೇಕು ಎಂಬುದರ ಕುರಿತು ಚರ್ಚೆ ನಡೆಸಿದ ವಿಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಆರ್ಸಿಬಿ ಪೋಸ್ಟ್ ಮಾಡಿದೆ. ಹರಾಜಿಗೂ ಮುನ್ನವೇ ಫಾಫ್ ಡು ಪ್ಲೆಸಿಸ್ರನ್ನು ಖರೀದಿಸಲು ಮ್ಯಾನೇಜ್ಮೆಂಟ್ ಪ್ಲಾನ್ ರೂಪಿಸಿತ್ತು. ಅದರಂತೆ ಡು ಪ್ಲೆಸಿಸ್ರನ್ನು ಖರೀದಿಸಿದೆ.
ಡು ಪ್ಲೆಸಿಸ್ರ ಆಟದ ಕೌಶಲದ ಕುರಿತು ಮಾತನಾಡಿದ್ದಾರೆ. ಐಪಿಎಲ್ನಲ್ಲೂ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಹಾಗಾಗಿ ಅವರನ್ನ ತಂಡಕ್ಕೆ ಖರೀದಿಸಲು ಮೆಗಾ ಪ್ಲಾನ್ ಹಾಕಿಕೊಂಡಿದ್ದ ರೆಡ್ ಆರ್ಮಿ, ಅವರಿಗಾಗಿ ದೊಡ್ಡ ಮೊತ್ತವನ್ನೇ ತೆಗೆದಿಡಲು ನಿರ್ಧರಿಸಿತ್ತು.
ಇದೆಲ್ಲವನ್ನೂ ನೋಡುತ್ತಿದ್ದರೆ ಡು ಪ್ಲೆಸಿಸ್ಗೆ ನಾಯಕನ ಪಟ್ಟ ಕಟ್ಟೋದು ನಿಶ್ಚಿತ ಎಂದು ಹೇಳಲಾಗ್ತಿದೆ.
ಖರೀದಿಯಲ್ಲಿ ಉಳಿದ ಆಟಗಾರರಿದ್ದರೂ ಆತನ ಖರೀದಿಗೆ ಯೋಜನೆ ಹಾಕಿದ್ದು ಯಾಕೆ ಎಂಬ ಪ್ರಶ್ನೆ ಕೂಡ ಉದ್ಭವವಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು