ತಮಿಳುನಾಡಿನಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಪಕ್ಷಗಳು ಹಲವು ವಾರ್ಡ್ಗಳಲ್ಲಿ ತೃತೀಯ ಲಿಂಗಿಗಳಿಗೆ ಟಿಕೆಟ್ ನೀಡಿವೆ.
ತಮಿಳುನಾಡಿನ 12,838 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇದರಲ್ಲಿ 1,374 ನಗರಪಾಲಿಕೆ ವಾರ್ಡ್ಗಳು, 3,843 ಪುರಸಭೆ ವಾರ್ಡ್ಗಳು, 7,621 ಪಟ್ಟಣ ಪಂಚಾಯತ್ ವಾರ್ಡ್ಗಳಿಗೆ ಚುನಾವಣೆ ನಡೆಯಲಿದೆ.
ಸೌಥ್ ಚೆನ್ನೈನಿಂದ ಎಐಎಡಿಎಂಕೆ ಅಭ್ಯರ್ಥಿ ಎನ್.ಜಯದೇವಿ ನಾಮಪತ್ರ ಸಲ್ಲಿಸಿದ್ದಾರೆ. ತಿರುವಿಕಾ ನಗರದ ವಾರ್ಡ್ ನಂಬರ್ 76ರ ಬಿಜೆಪಿ ಅಭ್ಯರ್ಥಿಯಾಗಿ ರಾಜಮ್ಮ ಕಣಕ್ಕೆ ಇಳಿದಿದ್ದಾರೆ.
ಬಿಜೆಪಿಯ ಅಭ್ಯರ್ಥಿಯಾದ ತೃತೀಯಲಿಂಗಿ ರಾಜಮ್ಮ ಮಾತನಾಡಿ ನನ್ನ ಸಮುದಾಯಕ್ಕೆ ನಾನು ಒಳ್ಳೆಯ ಮಾದರಿಯಾಗುತ್ತೇನೆ. ನಾನು ಆಯ್ಕೆಯಾದರೆ ಕುಡಿಯುವ ನೀರು, ಚರಂಡಿ ಸಮಸ್ಯೆ ಇಂತಹ ಜನರ ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದಿದ್ದಾರೆ.
ಎಐಎಡಿಎಂಕೆ ಅಭ್ಯರ್ಥಿ ತೃತೀಯಲಿಂಗಿ ಜಯದೇವಿ ಮಾತನಡಿ ನಾನು ಆಯ್ಕೆಯಾದರೆ ನನ್ನ ವಾರ್ಡ್ಅನ್ನು ಇತರರಿಗೆ ಮಾದರಿಯಾಗುವ ರೀತಿ ಮಾಡುತ್ತೇನೆ ಎಂದು ಹೇಳಿದ್ದಾರೆ.
- ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಇಬ್ಬರು ಸರ್ಕಾರಿ ನೌಕರರು ಸಾವು
- Lok Sabha Election 2024 : ಕರ್ನಾಟಕದಲ್ಲಿ ಶೇ. 9.45% ರಷ್ಟು ಮತದಾನ
- ಪ್ರಜ್ವಲ್ ಮಾತ್ರವಲ್ಲ , ತುಂಬ ರಾಜಕಾರಣಿಗಳ ವಿಡಿಯೋಗಳು ಸದ್ಯದಲ್ಲೇ ಹೊರಬರಲಿದೆ : ಕೆ ಎಸ್ ಈಶ್ವರಪ್ಪ
- ರಾಜ್ಯ ಸರ್ಕಾರವೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಲು ಹೊಣೆ : ಪ್ರಧಾನಿ ನರೇಂದ್ರ ಮೋದಿ
- ಮಂಡ್ಯ : ಭಾರಿ ಮಳೆಗೆ ಕಾರಿನ ಮೇಲೆ ಮರ ಬಿದ್ದು ವ್ಯಕ್ತಿ ದುರ್ಮರಣ