ಮಂಡ್ಯ ಲೋಕಸಭಾ ಉಪ ಚುನಾವಣೆಗೆ 30 ಕೋಟಿ ಖರ್ಚು ಮಾಡಿದ್ರಂತೆ. 2023 ವಿಧಾನಸಭಾ ಚುನಾವಣೆಗೆ ನಾಗಮಂಗಲ ಜೆಡಿಎಸ್ ಅಭ್ಯಥಿ೯ಯಾಗಿ ನಾನೇ ಕಣಕ್ಕೆ ಇಳಿಯುತ್ತೇನೆ. 30 ಕೋಟಿ ರು ಖಚು೯ ಮಾಡುವೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಈಗ ವೈರಲ್ ಆಗಿದೆ.
ಕೊಪ್ಪ ಹೋಬಳಿಯ ಪಕ್ಕಾ ಜೆಡಿಎಸ್ ಮಹಿಳೆ ಕಾರ್ಯಕರ್ತೆ ಜತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ದಲ್ಲಿ MLC ಚುನಾವಣೆಗೆ 27 ಕೋಟಿ ಖರ್ಚು ಮಾಡಿದ್ದೆ.6 ತಿಂಗಳಿಗೆ ಎಂಪಿ ಚುನಾವಣೆಗೆ 30 ಕೋಟಿ ಖರ್ಚು ಮಾಡಿದ್ದೆ ಎಂದು ಶಿವರಾಮೇಗೌಡರು ಹೇಳಿದ್ದಾರೆ.
30 ಕೋಟಿ ಖರ್ಚು ಮಾಡುವೆ !
ಮುಂದಿನ ನಾಗಮಂಗಲ ವಿಧಾನಸಭಾ ಚುನಾವಣೆಗೆ 30 ಕೋಟಿ ಖರ್ಚು ಮಾಡುತ್ತೇನೆ ಎಂದು ಪ್ರಕಟಿಸಿರುವ ಎಲ್ ಆರ್ ಎಸ್ ಆ ಮಹಿಳಾ ಕಾರ್ಯಕತ೯ರ ಜೊತೆ 37 ನಿಮಿಷ 54 ಸೆಂಕೆಡ್ ಮಾತನಾಡಿದ ಆಡಿಯೋ ವೈರಲ್ ಆಗಿದೆ.
ನನ್ನದು 8 ಸ್ಕೂಲ್ ಇದೆ ತಿಂಗಳಿಗೆ 3 ಕೋಟಿ ಸಂಬಳ ಕೊಡುತ್ತೇನೆ. ನಾಗಮಂಗಲ ವಿಧಾನಸಭ ಚುನಾವಣೆಗೆ 10 ತಿಂಗಳ ಸಂಬಳದಷ್ಟೆ ಹಣಬೇಕು. ಅಷ್ಟು ಹಣವನ್ನು ಖರ್ಚು ಮಾಡುತ್ತೇನೆ. ತಮಗೆ ಬೆಂಬಲ ನೀಡಬೇಕು ಎಂದು ಮಹಿಳಾ ಕಾರ್ಯಕರ್ತೆ ಜೊತೆ ಮಾತನಾಡಿದ್ದಾರೆ.
ಈ ಆಡಿಯೊ ಕಳೆದ ಮೂರು ದಿನಗಳ ಹಿಂದೆಯಷ್ಟೆ ನಾಗಮಂಗಲ ಕ್ಷೇತ್ರದ ಕೊಪ್ಪಗೆ ಭೇಟಿ ನೀಡಿದ್ದ ಎಲ್.ಆರ್.ಶಿವರಾಮೇಗೌಡ.
ಅಲ್ಲಿನ ಸಭೆಗೆ ಮಹಿಳಾ ಕಾರ್ಯಕರ್ತೆಗೆ ಆಹ್ವಾನಿಸಲು ಕರೆ ಮಾಡಿದ್ದಾರೆ ಎನ್ನಲಾಗಿರುವ ಆಡಿಯೋ.
ಸದ್ಯ ನಾಗಮಂಗಲ JDS ಟಿಕೆಟ್ ಮೇಲೆ ಕಣ್ಣಿಟ್ಟಿರುವ ಶಿವರಾಮೇಗೌಡ.ನಾಗಮಂಗಲದ JDS ಶಾಸಕರ ವಿರುದ್ಧವು ಆಡಿಯೋದಲ್ಲಿ ಚರ್ಚೆ ಮಾಡಿದ್ದಾರೆ. ನಾನು ಎರಡು ಸಲ MLA ಆಗಿದ್ದೇನೆ. ಆತ ಮಾಡಿದ ಕೆಲಸಕ್ಕಿಂತ ತಾತ ನಂತಹ ಕೆಲಸ ಮಾಡಬಹುದು ಎಂದಿದ್ದಾರೆ
ಸುರೇಶ್ ಗೌಡ ನನಗೆ ಕಳೆದ ಲೋಕಸಭೆ ಟಿಕೆಟ್ ತಪ್ಪಿಸಿದ. ನಿಖಿಲ್ ಕುಮಾರ್ ಸ್ವಾಮಿ ಚುನಾವಣೆಗೆ ನಿಲ್ಲಿಸಿ ಅವರ ಮನೆಗೆ ಕಂಟಕ ತಂದ್ರು ನನಗು ಕಂಟಕ ತಂದ್ರು.
ಮುಂದಿನ ಬಾರಿ ಚುನಾವಣೆಗೆ ನಾನು ನಿಂತುಕೊಳ್ಳುತ್ತೇನೆ.
ನನಗೆ ಬೆಂಬಲಕೊಡಿ ಎಂದು ಆಡಿಯೋದಲ್ಲಿ ಮನವಿ ಮಾಡಿದ್ದಾರೆ
ಐದು ಬಾರಿ ಕಾಂಗ್ರೆಸ್ ನಿಂದ ನಿಂತು ಸೋತಿದ್ದೇನೆ.ಎಲ್ಲವು ಕಡಿಮೆ ಅಂತರದಿಂದ ಸೋತಿದ್ದು ಎಂದಿದ್ದಾರೆ
ಜಿ.ಮಾದೇಗೌಡರಿಗೆ ನಾನೇ ಹೊಡೆದಿದ್ದೆ:
ಜಿ.ಮಾದೇಗೌಡರು ಆಗ ಸಂಸದರಾಗಿದ್ದರು.
ಮಾದೇಗೌಡ 20 ವರ್ಷದ ಹಿಂದೆಯೇ ಸಾಯಬೇಕಿತ್ತು, ಮೊನ್ನೆ ಸತ್ತ. ಅದರಿಂದಲೇ ಜಿ.ಮಾದೇಗೌಡರ ವಿರೋಧದಿಂದ ಸೋತೆ. ದಿವಂಗತ ಜಿ.ಮಾದೇಗೌಡ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್

- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ

- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು

- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ

- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ

- ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ




More Stories
ಸಪ್ತಪದಿ ತುಳಿದ ಮೂರೇ ದಿನದಲ್ಲಿ ಹೃದಯಾಘಾತದಿಂದ ನವವಿವಾಹಿತ ಅಕಾಲಿಕ ಸಾವು
ಏ.7 ಕ್ಕೆ ಮೇಲುಕೋಟೆ ವೈರಮುಡಿ ಉತ್ಸವ
ಮಂಡ್ಯದಲ್ಲಿ ಭೀಕರ ಅಪಘಾತ: ಸಾಫ್ಟ್ವೇರ್ ಇಂಜಿನಿಯರ್ ದಾರುಣ ಸಾವು