November 24, 2024

Newsnap Kannada

The World at your finger tips!

puttaraju cong

ಮೇಲುಕೋಟೆ ಶಾಸಕ ಸಿ. ಎಸ್. ಪುಟ್ಟರಾಜು ಕಾಂಗ್ರೆಸ್ ಸೇರ್ಪಡೆಗೆ ತಾಲೀಮು ?

Spread the love

ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಪರಮ ಆಪ್ತ ವಲಯದಲ್ಲಿದ್ದ ಮೇಲುಕೋಟೆ ಶಾಸಕ ಸಿಎಸ್ ಪುಟ್ಟರಾಜು ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಾರಾ ಎಂಬ ಶಂಕೆ ಈಗ ಬಲವಾಗುತ್ತಿದೆ.

ಶಾಸಕ ಜಮೀರ್,ಎಮ್ ಬಿ ಪಾಟೀಲ್ ಜೊತೆ ಪುಟ್ಟರಾಜು ದಿಢೀರ್ ಅಗಿ ಸಿದ್ದರಾಮಯ್ಯನವರ ನಿವಾಸದಲ್ಲಿ ಪ್ರತ್ಯಕ್ಷ್ಯವಾಗಿರುವುದು ಈ ಶಂಕೆಗೆ ಪುಷ್ಠಿ ನೀಡಿದಂತಾಗಿದೆ.

ಮೇಲುಕೋಟೆ ಕ್ಷೇತ್ರದಲ್ಲಿನ ದೇವಸ್ಥಾನದ ಉದ್ಘಾಟನೆಗಾಗಿ ಆಹ್ವಾನ ನೀಡಲು ಸಿದ್ದರಾಮಯ್ಯನವರ ನಿವಾಸಕ್ಕೆ ಹೋಗಿದ್ದರು ಎಂಬ ಮಾಹಿತಿಯೂ ಇದೆ. ಆ ನೆಪದಲ್ಲಿ ಸಿದ್ದು ಜೊತೆ ಸಿಎಸ್ ಪಿ ಮಾತುಕತೆ ನಡೆಸಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಕಳೆದ ಒಂದು ವಷ೯ದಿಂದಲೂ ಜೆಡಿಎಸ್ ನ ಅಧಿಪತಿ ಹೆಚ್ ಡಿ ಕುಮಾರಸ್ವಾಮಿ ಜೊತೆ ಸಂಬಂಧವನ್ನು ಕಡಿಮೆ ಮಾಡುತ್ತಾ ಬಂದಿರುವ ಪುಟ್ಟರಾಜು ನಡೆ ಬಗ್ಗೆ ಸಾಕಷ್ಟು ಬಾರಿ ಚಚೆ೯ಗಳೂ ಕೂಡ ರಾಜಕೀಯ ವಲಯದಲ್ಲಿ ನಡೆದಿವೆ.

ಈ ನಡುವೆ ಬೆಳಗಾವಿಯ ಅಧಿವೇಶನದ ವೇಳೆ ಕೈ ನಾಯಕರು ಎರ್ಪಡಿಸಿದ್ದ ಔತಣ ಕೂಟಕ್ಕೆ ಶಾಸಕ ಪುಟ್ಟರಾಜು ಅವರಿಗೂ ಆಹ್ವಾನವಿತ್ತಂತೆ ಹೇಳಲಾಗಿದೆ.

ಅಲ್ಲದೇ ಕಳೆದ ಎರಡು ದಿನಗಳ ಹಿಂದೆ ಸ್ವತಃ ಸಿದ್ದರಾಮಯ್ಯನವರು ಜೆಡಿಎಸ್ ಹಾಗೂ ಬಿಜೆಪಿಯ ಕೆಲವು ಶಾಸಕರುಗಳು ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ. ಆದರೆ ಈಗಲೇ ಯಾರ ಹೆಸರನ್ನೂ ಹೇಳುವುದಿಲ್ಲ. ಜೊತೆಗೆ ಇಂದು, ನಾಳೆಯೇ ಅವರೆಲ್ಲರೂ ಕಾಂಗ್ರೆಸ್ ಬರ್ತಾರೆ ಎಂದು ನಾನು ಹೇಳಿಲ್ಲ. ಮುಂದಿನ ದಿನಗಳಲ್ಲಿ ಎಲ್ಲಾ ಗೊತ್ತಾಗುತ್ತದೆ ಎಂದು ಒಗಟಾಗಿ ಹೇಳಿದ್ದರು.

ಆದರೆ ಈ ಎಲ್ಲಾ ಸಂಗತಿ ಅಲ್ಲ ಗಳೆಯುವ ಶಾಸಕ ಪುಟ್ಟರಾಜು ಮಾತ್ರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪ್ರತಿಕ್ರಿಯೆ ಕೇಳಿದಾಗಲೆಲ್ಲಾ ನಾನು ಜೆಡಿಎಸ್ ಬಿಟ್ಟು ಎಲ್ಲೂ ಹೋಗಲ್ಲ ಎಂದು ಹೇಳುತ್ತಾರೆ.

ಆದರೆ ಮುಂದಿನ ದಿನಗಳಲ್ಲಿ ಮಂಡ್ಯ ಜಿಲ್ಲೆಯ ರಾಜಕಾರಣದ ದಿಕ್ಕು ಬದಲಾಗುವುದಂತೂ ನಿಜ.

Copyright © All rights reserved Newsnap | Newsever by AF themes.
error: Content is protected !!