ಜೆಡಿಎಸ್ ಬಗ್ಗೆ ಸಿಎಂ ಇಬ್ರಾಹಿಂ ಅವರಿಗೆ ಪ್ರೀತಿ ವಿಶ್ವಾಸ ಇದೆ. ಅವರು ಜೆಡಿಎಸ್‍ಗೆ ಬಂದರೆ ಉತ್ತಮ ಸ್ಥಾನ ನೀಡುತ್ತೇವೆ
ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ ಸಿಎಂ ಇಬ್ರಾಹಿಂ ಜೊತೆ ಮಾತಾಡಿದ್ದೇನೆ. ಈ ಹಿಂದೆ ನಮ್ಮ ಪಕ್ಷದಲ್ಲಿ ಇದ್ದರು. ದೇವೇಗೌಡರ ಕಷ್ಟ ಸುಖದಲ್ಲಿ ಭಾಗಿಯಾಗಿದ್ದರು.
ನಾನು 3-4 ಬಾರಿ ಭೇಟಿ ಆಗಿದ್ದೆ. ಕಾಂಗ್ರೆಸ್‍ನಲ್ಲಿ ವಿಪಕ್ಷ ಸ್ಥಾನದ ಸಿಕ್ಕರೆ ಅಲ್ಲೆ ಇರಿ ಎಂದು ಹೇಳಿದ್ದೆ ಎಂಬುದನ್ನು ನೆನಪಿಸಿಕೊಂಡರು.
ಈ ಬಗ್ಗೆ ಅನೇಕ ಬಾರಿ ಇಬ್ರಾಹಿಂ ಜೊತೆ ಮಾತಾಡಿದ್ದೇವೆ. ಅವರು ಜೆಡಿಎಸ್‍ಗೆ ಬಂದ್ರೆ ಸ್ವಾಗತ. ಈ ಬಗ್ಗೆ ಅವರು ನಿರ್ಧಾರ ಮಾಡಲಿ ಎಂದು ಜೆಡಿಎಸ್‍ಗೆ ಆಹ್ವಾನ ನೀಡಿದರು.
ಜನತಾ ಪರಿವಾರ ಮತ್ತೆ ಒಗ್ಗೂಡಿಸಲು ಸಾಧ್ಯವಿಲ್ಲ. ಈಗ ಎಲ್ಲರೂ ಬೇರೆ ಬೇರೆ ಕಡೆ ಹೋಗಿದ್ದಾರೆ. ಹೊಸ ನಾಯಕತ್ವ ಬೆಳೆಸುವ ಶಕ್ತಿ ಕಾರ್ಯಕರ್ತರಲ್ಲಿ ಇದೆ. ಹೊಸ ನಾಯಕತ್ವ ಬೆಳೆಸುವ ನಿಟ್ಟಿನಲ್ಲಿ ನಾನು ಕೆಲಸ ಮಾಡುವೆ ಎಂದರು.
ಜೆಡಿಎಸ್ ಅಂತಂತ್ರ ಆದಾಗ ಸ್ವತಂತ್ರ ವಾಗುತ್ತಾರೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ನಾವು ಯಾವತ್ತೂ ಅತಂತ್ರರಾಗಿಲ್ಲ. ಅವರು ಅಂತಂತ್ರರಾದಾಗ ಜೆಡಿಎಸ್ ಬಾಗಿಲು ಬಡಿದಿದ್ದಾರೆ. ಗೊಂದಲ ಸೃಷ್ಟಿ ಮಾಡುವುದಕ್ಕೆ ನಾವು ಅವಕಾಶ ಕೊಟ್ಟಿಲ್ಲ ಎಂದರು.
- ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಉದ್ಯೋಗಕ್ಕೆ ಅರ್ಹತೆ ಇಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
- ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ವಾರ ಭಾರೀ ಮಳೆಯ ಮುನ್ಸೂಚನೆ
- ಡಿ.9 ರಿಂದ ಬೆಳಗಾವಿಯಲ್ಲಿ ಅಧಿವೇಶನ : ಯು ಟಿ ಖಾದರ್
- ವಯನಾಡಿನ ನೂತನ ಸಂಸದೆಯಾಗಿ ಪ್ರಿಯಾಂಕಾ ಗಾಂಧಿ ಪ್ರಮಾಣ ವಚನ
- ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವಿಚ್ಛೇದನಕ್ಕೆ ಕೋರ್ಟ್ ಅನುಮೋದನೆ
- ಬಾರ್ ಲೈಸೆನ್ಸ್ಗೆ 20 ಲಕ್ಷ ಲಂಚದ ಬೇಡಿಕೆ – ಅಬಕಾರಿ ಡಿಸಿ ವಿರುದ್ಧ ಲೋಕಾಯುಕ್ತಕ್ಕೆ ದೂರು
More Stories
ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಉದ್ಯೋಗಕ್ಕೆ ಅರ್ಹತೆ ಇಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ವಾರ ಭಾರೀ ಮಳೆಯ ಮುನ್ಸೂಚನೆ
ಡಿ.9 ರಿಂದ ಬೆಳಗಾವಿಯಲ್ಲಿ ಅಧಿವೇಶನ : ಯು ಟಿ ಖಾದರ್