ಏರ್ ಇಂಡಿಯಾ ಇಂದು ಅಧಿಕೃತವಾಗಿ ಟಾಟಾ ಅಧೀನಕ್ಕೆ

Team Newsnap
1 Min Read

69 ವರ್ಷಗಳ ಕಾಲ ಭಾರತ ಸರ್ಕಾರದ ಅಧೀನದಲ್ಲಿದ್ದ ಏರ್​ ಇಂಡಿಯಾ ಸಂಸ್ಥೆ ಇಂದು ಟಾಟಾ ಸಮೂಹಕ್ಕೆ ಅಧಿಕೃತವಾಗಿ ಅಧೀನವಾಗಿದೆ.

ಮಾರಾಟ ಪ್ರಕ್ರಿಯೆಯ ಬಿಡ್ಡಿಂಗ್​​ನಲ್ಲಿ 18,718 ಕೋಟಿ ರುಗೆ ಏರ್​ ಇಂಡಿಯಾ ಸಂಸ್ಥೆಯನ್ನು ಟಾಟಾ ಗ್ರೂಪ್​ ಖರೀದಿ ಮಾಡಿತ್ತು.

ಏರ್ ಇಂಡಿಯಾ ನಾಲ್ಕು ಖಂಡಗಳಲ್ಲಿ ಒಟ್ಟು 33 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ದೇಶದಲ್ಲಿ 57 ಕಡೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.

90 ವರ್ಷಗಳ ಹಿಂದೆ ಟಾಟಾ ಸಂಸ್ಥೆಯಿಂದಲೇ ಆರಂಭವಾಗಿದ್ದ ಏರ್‌ ಇಂಡಿಯಾ ವಿಮಾನ ಸಂಸ್ಥೆಯನ್ನು 1953ರಲ್ಲಿ ರಾಷ್ಟ್ರೀಕರಣಗೊಳಿಸಲಾಗಿತ್ತು.

ಕಳೆದ ವರ್ಷ ಅಕ್ಟೋಬರ್ 8 ರಂದು ಟಾಟಾ ಗ್ರೂಪ್‌ನ ಅಂಗಸಂಸ್ಥೆಯಾದ ಟ್ಯಾಲೇಸ್ ಪ್ರೈವೇಟ್ ಲಿಮಿಟೆಡ್‌ಗೆ ಏರ್ ಇಂಡಿಯಾ ಮಾರಾಟ ಆಗಿತ್ತು.

Share This Article
Leave a comment