ಬೆಂಗಳೂರಿನ ರೌಡಿಶೀಟರ್ ರಾಹುಲ್ ಅಲಿಯಾಸ್ ಸ್ಟಾರ್ ರಾಹುಲ್ ನನ್ನು ಜೈಲಿನಿಂದ ರಿಲೀಸ್ ಮಾಡಿಸೋಕೆ ಗಾಂಜಾ ಮಾರಾಟಕ್ಕೆ ಇಳಿದಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ
ರೌಡಿಶೀಟರ್ ರಾಹುಲ್ ನನ್ನು ಶೂಟ್ ಮಾಡಿ ಪೊಲೀಸರು ಕಂಬಿ ಹಿಂದೆ ನಿಲ್ಲಿಸಿದ್ದರು. ಈ ವೇಳೆ ತಮ್ಮ ಗುರುವನ್ನು ಬಿಡಿಸಲು ಶಿಷ್ಯರಾದ ಕಿರಣ್,ಮಂಜು,ಕಾರ್ತಿಕ್ಗೆ ಹಣದ ಅವಶ್ಯಕತೆ ಎದುರಾಗಿತ್ತು.
ರಾಹುಲ್ ಅರೆಸ್ಟ್ ಆದ ಮಾರನೇ ದಿನವೇ ಗಾಂಜಾ ಮಾರಾಟಕ್ಕೆ ಇಳಿದ ಇವರು ಕೂಡ ಬಂಧನಕ್ಕೆ ಒಳಗಾಗಿದ್ದಾರೆ.
ಕುಳ್ಳ ರಿಜ್ವಾನ್, ಗುಡ್ಡೆ ಭರತ ಆಂಧ್ರದಿಂದ ಕಳಿಸಿದ 20 ಕೆಜಿ ಗಾಂಜಾ ಪಡೆದು ಆರೋಪಿಗಳು ಕೆ.ಆರ್.ರಸ್ತೆಯಲ್ಲಿ ಮಾರಾಟಕ್ಕೆ ತೊಡಗಿದ್ದರು.
ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಮೂವರನ್ನು ಬಂಧಿಸಿದರು. ಬಂಧಿತರಿಂದ 20 ಕೆಜಿ ಮೌಲ್ಯದ ಗಾಂಜಾ,ಒಂದು ಕಾರು ಒಂದು ಲಾಂಗ್ ವಶಕ್ಕೆ ಪಡೆದಿದ್ದಾರೆ.
ಕುಳ್ಳ ಗುರು ಮತ್ತು ಗುಡ್ಡೆ ಭರತ್ ಮಾತ್ರ ತಲೆ ಮರೆಸಿಕೊಂಡಿದ್ದಾರೆ. ಸದ್ಯ ಐವರ ವಿರುದ್ಧ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ