ಮಂಡ್ಯ ಜಿಲ್ಲೆಯಲ್ಲಿ ನಡೆದ ತಾಲೂಕ ರೈತರ ವ್ಯವಸಾಯೋತ್ಪನ್ನಗಳ ಮಾರುಕಟ್ಟೆ ಸಂಘ(ಟಿಎಪಿಸಿಎಂಎಸ್)ಗಳಿಗೆ 6 ತಾಲೂಕಿನಲ್ಲಿ ನಡೆದ ಚುನಾವಣೆಗಳಲ್ಲಿ ಜೆಡಿಎಸ್ 3 ತಾಲೂಕುಗಳಲ್ಲಿ ಪ್ರಾಬಲ್ಯ ಮೆರೆದಿದೆ. ಬಿಜೆಪಿ ಭಾರೀ ಮುಖಭಂಗ ಅನುಭವಿಸಿದೆ. ಆದರೆ 2 ತಾಲೂಕುಗಳಲ್ಲಿ ಕಾಂಗ್ರೆಸ್ ತನ್ನ ಸ್ಥಾನ ಕಾಯ್ದುಕೊಂಡಿದೆ.
ಮಂಡ್ಯ ಜಿಲ್ಲೆಯು ಜೆಡಿಎಸ್‌ನ ಭದ್ರ ಕೋಟೆ ಎನಿಸಿಕೊಂಡಿದೆ. ಆದರೆ ಇಲ್ಲಿ ನಡೆದ ಟಿಎಪಿಸಿಎಂಎಸ್ ಚುಣಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಪೈಪೋಟಿಯ ನಡುವೆ ಕಮಲದ ಸ್ಥಿತಿ ಶೋಚನೀಯವಾಗಿದೆ.
ಕೆ.ಆರ್.ಪೇಟೆ, ಪಾಂಡವಪುರ, ಶ್ರೀರಂಗಪಟ್ಟಣದಲ್ಲಿ ಜೆಡಿಎಸ್ ಸ್ಥಾನ ಕಾಯ್ದುಕೊಂಡಿದ್ದರೆ, ಕಾಂಗ್ರೆಸ್ ನಾಗಮಂಗಲ ಹಾಗೂ ಮಳವಳ್ಳಿ ಕ್ಷೇತ್ರಗಳಲ್ಲಿ ತನ್ನ ಸ್ಥಾನ ಗಟ್ಟಿಗೊಳಿಸಿಕೊಂಡಿದೆ. ಮದ್ದೂರು ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಸಮಬಲಗಳಲ್ಲಿ ಸ್ಥಾನ ಪಡೆದಿವೆ. ಯಾವ ಪಕ್ಷದ ತೆಕ್ಕೆಗೆ ಮದ್ದೂರು ಸೇರಲಿದೆ ಎಂದು ಕಾದುನೋಡಬೇಕಿದೆ.
ಕೆ.ಆರ್. ಪೇಟೆಯಲ್ಲಿ ಶಾಸಕ. ಜಿಲ್ಲಾ ಮಂತ್ರಿ ಕೆ.ಸಿ. ನಾರಾಯಣಗೌಡರು ಪ್ರಾಬಲ್ಯ ಇರುವುದರಿಂದ ಕೆಆರ್ ಪೇಟೆ ಬಿಜೆಪಿ ತೆಕ್ಕೆಗೆ ಬೀಳುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಯಾರಿಗೂ ಸ್ಪಷ್ಟ ಬಹುಮತ ಸಿಗದಂತಹ ಚುಣಾವಣಾ ಫಲಿತಾಂಶ ಬಂದಿದೆ.
ಯಾವೊಂದೂ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲದೇ ಇರುವುದು ನಾರಾಯಣ ಗೌಡರನ್ನು ಹಾಗೂ ಬಿಜೆಪಿ ಪಕ್ಷವನ್ನು ಸಂದಿಗ್ಧ ಪರಿಸ್ಥಿತಿಗೆ ನೂಕಿದೆ.
ರವೀಂದ್ರ ಮೇಲುಗೈ
ಶ್ರೀರಂಗಪಟ್ಟಣದ ಚುಣಾವಣೆಯಲ್ಲಿ 8 ಸ್ಥಾನಗಳನ್ನು ಜೆಡಿಎಸ್ ಆಕ್ರಮಿಸಿಕೊಂಡರೆ, ಕೇವಲ 4 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಬಿಜೆಪಿ ಒಂದೇ ಒಂದು ಸ್ಥಾನದಲ್ಲೂ ಗೆದ್ದಿಲ್ಲ.
ಪುಟ್ಟರಾಜುಗೆ ಭಾರಿ ಜಯ
ಪಾಂಡವಪುರದ 14 ಸ್ಥಾನಗಳಲ್ಲಿ ಜೆಡಿಎಸ್ 11 ಸ್ಥಾನಗಳನ್ನು ತನ್ನದಾಗಿಸಿಕೊಂಡರೆ, 1 ಸ್ಥಾನವನ್ನು ರೈತ ಸಂಘದ ಅಭ್ಯರ್ಥಿ, 2 ಸ್ಥಾನಗಳನ್ನು ಕಾಂಗ್ರೆಸ್ ಅಭ್ಯರ್ಥಿಗಳು ಗಿಟ್ಟಿಸಿಕೊಂಡಿದ್ದಾರೆ.
ಕೆ.ಆರ್.ಪೇಟೆ ಕ್ಷೇತ್ರದ 14 ಸ್ಥಾನಗಳಲ್ಲೂ ಜೆಡಿಎಸ್ ಸ್ಪರ್ಧಿಗಳು ದಿಗ್ವಿಜಯ ಸಾಧಿಸಿದ್ದಾರೆ. ನಾಗಮಂಗಲ ಕ್ಷೇತ್ರದ 12 ಸ್ಥಾನಗಳನ್ನೂ ಸಹ ಕಾಂಗ್ರೆಸ್ ಆವರಿಸಿಕೊಂಡಿದ್ದರೆ, ಮಳವಳ್ಳಿಯ 12 ಸ್ಥಾನಗಳಲ್ಲಿ 11 ಸ್ಥಾನಗಳನ್ನು ಕಾಂಗ್ರೆಸ್, 1 ಸ್ಥಾನವನ್ನು 1 ಸ್ಥಾನ ಜೆಡಿಎಸ್ ಹಂಚಿಕೊಂಡಿವೆ.
ಮದ್ದೂರು ಕ್ಷೇತ್ರದ ಒಟ್ಟು 12 ಸ್ಥಾನಗಳಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ತಲಾ 4 ಸ್ಥಾನಗಳನ್ನು ಗಳಿಸಿಕೊಂಡಿದೆ. ಇದರಿಂದ ಎಲ್ಲ ಪಕ್ಷಗಳಲ್ಲೂ ಈಗ ಗೊಂದಲ ಮೂಡಿದೆ. ಆದರೆ ಬಿಜೆಪಿಯ ಪ್ರಾಭಲ್ಯ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಎಲ್ಲರಿಗೂ ಗೋಚರವಾಗುತ್ತಿದೆ.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ