ಅ. 15 ರಿಂದ ಶಾಲೆಗಳ ಆರಂಭ ಕಡ್ಡಾಯವಲ್ಲ

Team Newsnap
1 Min Read

ಕೊರೊನಾ ನಡುವೆಯೂ ಅಕ್ಟೋಬರ್ 15 ರಿಂದ ಶಾಲೆಗಳನ್ನು ಆರಂಭಿಸಲು ಗೃಹ ಸಚಿವಾಲಯ ವತಿಯಿಂದ ಅನುಮತಿ ನೀಡಲಾಗಿದೆ.

ಆದರೆ ಶಾಲೆಗಳನ್ನು ಆರಂಭಿಸುವುದು ಕಡ್ಡಾಯವಲ್ಲ ಎಂದು ಕೆಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಖ್ ಈ ಕುರಿತಾಗಿ ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಕರೆಸಿಕೊಳ್ಳುವ ವಿಚಾರ ಶಾಲೆಯ ಆಡಳಿತ ಮಂಡಳಿಗಳ ವಿವೇಚನೆಗೆ ಬಿಟ್ಟಿದ್ದು. ಕೊರೊನಾ ಪರಿಸ್ಥಿತಿಯನ್ನು ಆಧರಿಸಿ ಶಾಲೆಗಳನ್ನು ಮತ್ತು ತರಬೇತಿ ಕೇಂದ್ರಗಳನ್ನು ಹಂತ ಹಂತವಾಗಿ ತೆರೆಯುವುದು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಡಲಾಗಿದೆ.

ಅಕ್ಟೋಬರ್ 15 ರಿಂದ ಶಾಲೆಗಳ ಆರಂಭ ಕಡ್ಡಾಯವಲ್ಲ ಎಂದು ರಮೇಶ್ ಪೋಖ್ರಿಯಾಲ್ ನಿಶಾಂಕ್ ಹೇಳಿದ್ದಾರೆ. ಗೃಹ ಸಚಿವಾಲಯ ಅಕ್ಟೋಬರ್ 15 ರಿಂದ ಶಾಲೆಗಳ ಆರಂಭಕ್ಕೆ ಅವಕಾಶ ನೀಡಿರುವುದರಿಂದ ಫ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ಆರಂಭಕ್ಕೆ ಚಿಂತನೆ ನಡೆದಿದೆ. ಆದರೆ, ಪೋಷಕರ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

Share This Article
Leave a comment