January 10, 2025

Newsnap Kannada

The World at your finger tips!

mb srinivas

ದಲಿತ ಸಂಘರ್ಷ ಸಮಿತಿ ಮುಖಂಡ ಎಂ.ಬಿ.ಶ್ರೀನಿವಾಸ್ ಇನ್ನಿಲ್ಲ

Spread the love

ದಲಿತ,ರೈತಪರ ದನಿಯಾಗಿದ್ದ ಎಂ .ಬಿ. ಶ್ರೀನಿವಾಸ್ (61) ತೀವ್ರ ಹೃದಯಾಘಾತದಿಂದ ಭಾನುವಾರ ಮುಂಜಾನೆ ಕೊನೆಯುಸಿರೆಳೆದರು.

ದಲಿತರ ಹಕ್ಕು ಮತ್ತು ಹೋರಾಟಕ್ಕೆ ತನ್ನ ಬದುಕನ್ನೇ ಮುಡಿಪಾಗಿಟ್ಟದ್ದ ಶ್ರೀನಿವಾಸ್ ಹೃದಯಘಾತಕ್ಕೊಳಗಾಗಿ ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ICU ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮುಂಜಾನೆ ನಿಧನ ಹೊಂದಿರುತ್ತಾರೆ.

ಶ್ರೀನಿವಾಸ್ ಪಾರ್ಥೀವ ಶರೀರವನ್ನು ಮಂಡ್ಯ ನಗರದ ಸುಭಾಷನಗರದಲ್ಲಿರುವ ಡಾ.ಅಂಬೇಡ್ಕರ್ ಭವನದ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಮದ್ಯಾಹ್ನ 2 ಗಂಟೆಯವರೆ ಇಡಲಾಗುವುದು.

ನಂತರ ಅವರ ಸ್ವಗ್ರಾಮ ಪಾಂಡವಪುರ ತಾಲ್ಲೂಕಿನ ಮೆನಗರ ಗ್ರಾಮದಲ್ಲಿ ಅಂತಿಮ ಸಂಸ್ಕಾರವನ್ನು ನಾಳೆ (ನ 22) ಬೆಳಿಗ್ಗೆ 10 ಗಂಟೆಗೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ಹೇಳಿವೆ.

Copyright © All rights reserved Newsnap | Newsever by AF themes.
error: Content is protected !!