ಮಂಗಳೂರಿನ ವಕೀಲ ರಾಜೇಶ್ ಭಟ್ ಕಚೇರಿಯಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಮತ್ತು ರಾತ್ರಿ ಅಶ್ಲೀಲ ಮೇಸೆಜ್‍ಗಳನ್ನು ಕಳುಹಿಸುತ್ತಿದ್ದರು. ಈ ಸಂಗತಿಯನ್ನು ಸಂತ್ರಸ್ತೆ ವಿದ್ಯಾರ್ಥಿನಿ ಮಾಧ್ಯಮಗಳ ಮುಂದೆ ಹೇಳಿದ್ದಾಳೆ.
ಇಂಟರ್ನ್ ಶಿಪ್ ಮಾಡುತ್ತಿದ್ದ ನನ್ನನ್ನು ರಾತ್ರಿ ಎಂಟು ಗಂಟೆಯವರೆಗೂ ಆಫೀಸ್‍ನಲ್ಲಿ ಕೆಲಸ ಮಾಡೋಕೆ ಹೇಳಿದ್ದರು. ರಾತ್ರಿ ಅಶ್ಲೀಲ ಮೆಸೇಜ್‍ಗಳನ್ನು ಆತ ನನಗೆ ಕಳುಹಿಸಿದ್ದ, ನಾನು ಆ ಮೆಸೇಜ್‍ಗಳಿಗೆ ರಿಪ್ಲೈ ಮಾಡಿರಲಿಲ್ಲ,
ಒಂದು ದಿನ ರಾತ್ರಿ ಎಂಟು ಗಂಟೆಯ ತನಕ ಕೆಲಸ ಮಾಡಿಸಿದ್ದು ಅಂದು ಕಛೇರಿಯಲ್ಲಿ ಯಾರೂ ಇರಲಿಲ್ಲ, ಈ ವೇಳೆ ಛೇಂಬರ್ ಗೆ ಕರೆದು ಲೈಂಗಿಕ ಕಿರುಕುಳ ನೀಡಿದ್ದ, ಆ ಬಳಿಕ ಯಾರಿಗೂ ಹೇಳದಂತೆ ಕೊಲೆ ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತೆ ತನ್ನ ಅಳಲನ್ನು ಹೇಳಿಕೊಂಡಿದ್ದಾರೆ.
. ಈ ವಿಚಾರವನ್ನು ಬಹಿರಂಗಗೊಳಿಸದಂತೆ ರಾಜೇಶ್ ಬೆದರಿಕೆಯನ್ನು ಹಾಕಿದ್ದ ಎಂದು ಸಂತ್ರಸ್ತೆ ವಿದ್ಯಾರ್ಥಿನಿ ಆರೋಪಿಸಿದ್ದರು.
ಘಟನೆಯ ಬಳಿಕ ವಿದ್ಯಾರ್ಥಿನಿಗೆ ದೂರವಾಣಿ ಕರೆ ಮಾಡಿ ರಾಜೇಶ್ ನನ್ನಿಂದ ತಪ್ಪಾಗಿದೆ ಎಂದು ಗೋಗರೆದಿದ್ದ ಆಡಿಯೋ ಸಹ ವೈರಲ್ ಆಗಿತ್ತು. ನಂತರ ಮಹಿಳಾ ಪೊಲೀಸ್ ಠಾಣೆಯಲ್ಲಿ ರಾಜೇಶ್ ವಿರುದ್ಧ ಪ್ರಕರಣ ದಾಖಲಾಗಿತ್ತು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು