December 2, 2021

Newsnap Kannada

The World at your finger tips!

ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರವಾಸದ ವೇಳೆಯಲ್ಲೇ ಉಗ್ರರ ಗುಂಡಿಗೆ ನಾಗರೀಕನ ಹತ್ಯೆ

Spread the love

ಕೇಂದ್ರ ಗೃಹ ಸಚಿವ ಅಮಿತ್ ಶಾ
ಜಮ್ಮು-ಕಾಶ್ಮೀರದ ಪ್ರವಾಸದ ವೇಳೆ ಬಂಡಿಪೊರಾದಲ್ಲಿ ಮತ್ತೊಬ್ಬ ನಾಗರಿಕನನ್ನು ಉಗ್ರರು ಗುಂಡು ಹಾರಿಸಿ ಸಾಯಿಸಿದ್ದಾರೆ.

ಕಣಿವೆ ನಾಡಿನಲ್ಲಿ ಒಂದು ತಿಂಗಳ ಅಂತರದಲ್ಲಿ 11 ಮಂದಿ ನಾಗರಿಕರನ್ನು ಉಗ್ರರು ಗುಂಡಿಟ್ಟು ಸಾಯಿಸಿದ್ದಾರೆ.

ಸಾವನ್ನಪ್ಪಿರುವ 11 ಮಂದಿಯಲ್ಲಿ ಬಿಹಾರ ಮೂಲದ ಐವರು ನಾಗರಿಕರು, ಇಬ್ಬರು ಶಿಕ್ಷಕರು ಹಾಗೂ ಉಳಿದವರೆಲ್ಲಾ ಕಾಶ್ಮೀರದ ಅಲ್ಪ ಸಂಖ್ಯಾತರಾಗಿದ್ದಾರೆ.

ನಾಗರಿಕರ ಹತ್ಯೆ ಪ್ರಕರಣಗಳ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೂರು ದಿನಗಳ ಕಾಶ್ಮೀರ ಪ್ರವಾಸದಲ್ಲಿ ಇದ್ದಾರೆ. ಅಮಿತ್ ಶಾ, ಕಣಿವೆ ನಾಡಿನಲ್ಲಿ ಇರುವಾಗಲೇ ಇಂದು ಮತ್ತೊಬ್ಬ ನಾಗರಿಕರ ಹತ್ಯೆಯಾಗಿದೆ.

ನಿನ್ನೆ ಅಮಿತ್ ಶಾ ಅವರು ಕಾಶ್ಮೀರದಲ್ಲಿ ಹತ್ಯೆಯಾದ ಪೊಲೀಸ್ ಅಧಿಕಾರಿಯ ಕುಟುಂಬಸ್ಥರನ್ನ ಭೇಟಿ ಮಾಡಿ ಸಾಂತ್ವನ ನೀಡಿದ್ದರು.

error: Content is protected !!