January 29, 2026

Newsnap Kannada

The World at your finger tips!

sanjana

ಆಪ್ತನ ಸ್ನೇಹಿತ ರಾಹುಲ್ ವಿರುದ್ದವೇ ವಂಚನೆ ಕೇಸ್ : ನಟಿ ಸಂಜನಾ ದೂರು ಕೊಟ್ಟದುದ್ದೇಕೆ?

Spread the love

ಕ್ಯಾಸಿನೊಗಳಲ್ಲಿ ಹಣ ಹೂಡಿಕೆ ಹೆಸರಲ್ಲಿ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ ಆಪ್ತ ಸ್ನೇಹಿತ ರಾಹುಲ್
ವಿರುದ್ಧ ಸ್ಯಾಂಡಲ್​ವುಡ್​ ಸ್ಟಾರ್​ ನಟಿ ಸಂಜನಾ ಗಲ್ರಾನಿ ಕೋರ್ಟ್​ ಮೆಟ್ಟಿಲೇರಿದ್ದಾರೆ.

ಕೋರ್ಟ್​ ಸೂಚನೆ ಮೇರೆಗೆ ಬೆಂಗಳೂರಿನ ಇಂದಿರಾನಗರ ಠಾಣೆಯಲ್ಲಿ ಸಂಜನಾ ಆಪ್ತ ಸ್ನೇಹಿತ ರಾಹುಲ್ ತೋನ್ಸೆ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ದೂರಿನಲ್ಲಿ ಇರುವ ಅಂಶಗಳು :

1) ನನ್ನ ಸ್ನೇಹಿತನಾದ ರಾಹುಲ್​​, ಆತ ಹೇಳಿದ ಕಡೆಯಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂದು ನಂಬಿಸಿ, ರಾಮಕೃಷ್ಣ ಮತ್ತು ರಾಗೇಶ್ವರಿ ಜೊತೆ ಸೇರಿ ಅವರ ಖಾತೆಗೆ ನನ್ನಿಂದ ಹಣವನ್ನು ಹಾಕಿಸಿಕೊಂಡಿದ್ದಾರೆ.

2) ಕಳೆದ ಮೂರು ವರ್ಷಗಳಿಂದ ಹಣ ಹಾಕಿಸಿಕೊಂಡರು. ಇಲ್ಲಿಯವರೆಗೂ ಯಾವುದೇ ಲಾಭಾಂಶವನ್ನೂ ನೀಡಿಲ್ಲ.

3) ನಾನು ಹಲವಾರು ಬಾರಿ ಹಣವನ್ನು ನೀಡುವಂತೆ ಕೇಳಿದ್ದರೂ ಹಣ ಹಿಂತಿರುಗಿಸಿಲ್ಲ. ನಾನು ನೀಡಿದ ಹಣವನ್ನು ಮೂರು ಜನರು ಕಾನೂನು ಬಾಹಿರ ಚಟುವಟಿಕೆಯಲ್ಲಿ ಹೂಡಿಕೆ ಮಾಡಿ ಲಾಭ ಮಾಡಿಕೊಂಡಿದ್ದಾರೆ.

4) ನನ್ನ ಹಣ ಹಿಂತಿರುಗಿಸದೆ ಮೋಸ ಮಾಡಿದ್ದಲ್ಲದೆ, ನನ್ನ ಘನತೆಗೆ ಧಕ್ಕೆಯಾಗುವಂತಹ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಮೂವರು ಕಲಂ: 34, 12(ಬಿ), 107, 354, 406, 420, 506 ಐಪಿಸಿ ಕಲಂಗಳ ಅಡಿಯಲ್ಲಿ ಆರೋಪವೆಸಗಿದ್ದಾರೆ.

5) ಆ ಮೂವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಬೇಕು.

error: Content is protected !!