ಮೈಶುಗರ್ ಸಕ್ಕರೆ ಕಾಖಾ೯ನೆಯನ್ನು ಸಕಾ೯ರಿ ಸ್ವಾಮ್ಯದಲ್ಲೇ ಆರಂಭಿಸಲು ನಿಧ೯ರಿಸಲಾಗಿದೆ.ಮೈಶುಗರ್ ಕಾಖಾ೯ನೆ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆ ಬೆಂಗಳೂರಿನಲ್ಲಿ ಮಂಡ್ಯ ಜಿಲ್ಲೆಯ ರೈತ ನಾಯಕರ ಹಾಗೂ ಜನ ಪ್ರತಿನಿಧಿಗಳ ಸಭೆಯ ನಂತರ ಸಿಎಂ ಬೊಮ್ಮಾಯಿ ಸಭೆ ಪ್ರಮುಖ ನಿಧಾ೯ರಗಳನ್ನು ಪ್ರಕಟಸಿದರು.
- ಮೈಶುಗರ್ ಅನ್ನು ಸಕಾ೯ರಿ ಸ್ವಾಮ್ಯದಲ್ಲಿ ನಡೆಸಲಾಗುವುದು
- ಮೈಶುಗರ್ ಖಾಸಗಿಕರಣ ಮಾಡುವುದಿಲ್ಲ
- ಮುಂದಿನ ವಷ೯ದಿಂದ ಕಾಖಾ೯ನೆಯಲ್ಲಿ ಕಬ್ಬು ಅರೆಯುವ ಕಾರ್ಯ ಆರಂಭಿಸಲಾಗುವುದು
- ಮುಂದಿನ ಮೂರು ತಿಂಗಳೊಳಗೆ ಕಾಖಾ೯ನೆಗೆ ದಕ್ಷ ಆಡಳಿತಾಧಿಕಾರಿ ನೇಮಕ ಮಾಡಲಾಗುವುದು
- ಕಾಖಾ೯ನೆ ಪುನಶ್ಚೇತನಕ್ಕೆ ಅಗತ್ಯ ಹಣಕಾಸಿ ನೆರವು ನೀಡಲಾಗುವುದು
- ಕಾಖಾ೯ನೆ ರಿಪೇರಿಗೂಅಗತ್ಯ ಹಣಕಾಸು ನೀಡಲಗುವುದು
- ಎರಡು ವರ್ಷಗಳ ಕಾಲ ರಾಜ್ಯ ಸರ್ಕಾರವೇ ಕಾರ್ಖಾನೆಯ ನಿರ್ವಹಣೆ ಮಾಡಲಿದೆ. .
- ನಷ್ಟದಲ್ಲಿರುವ ಈ ಕಾರ್ಖಾನೆಯನ್ನು ೨೦೨೨ರ ಹಂಗಾಮಿನಿಂದ ಎರಡು ವರ್ಷಗಳ ಕಾಲ ಸರ್ಕಾರದಿಂದಲೇ ನಿರ್ವಹಿಸಲು ನಿರ್ಧರಿಸಲಾಯಿತು.
- ಪ್ರಸಕ್ತ ಹಂಗಾಮಿನಲ್ಲಿ ಈ ಕಾರ್ಖಾನೆ ವ್ಯಾಪ್ತಿಯ ಕಬ್ಬನ್ನು ಖರೀದಿಸಿ ಬೇರೆ ಸಕ್ಕರೆ ಕಾರ್ಖಾನೆಗಳಿಗೆ ನೀಡಲು ತೀರ್ಮಾನಿಸಲಾಯಿತು.
- ಮುಂದಿನ ವರ್ಷ ಅಂದರೆ ೨೦೨೨ರಿಂದ ಕಬ್ಬು ಅರಿಯುವ ಕುರಿತು ಸಿದ್ಧತೆ ಕೈಗೊಳ್ಳವ ತೀರ್ಮಾನ ತೆಗೆದುಕೊಳ್ಳಲಾಗಿದೆ.
- ರೈತರಿಗೆ ತೊಂದರೆ ಅಗಬಾರದೆಂಬ ಉದ್ದೇಶದಿಂದ ಸರ್ಕಾರ ಈ ಕ್ರಮಕ್ಕೆ ಕೈಗೊಂಡಿದೆ. ಕಾರ್ಖಾನೆ ಆರಂಭಕ್ಕೆ ತಕ್ಷಣದಿಂದ ಕಾರ್ಯೋನ್ಮುಖವಾಗುವಂತೆ ಸೂಚಿಸಲಾಗಿದೆ
- ಕಾರ್ಖಾನೆಯ ಆಡಳಿತ ನಿರ್ವಹಣೆ, ತಾಂತ್ರಿಕ ಸುಧಾರಣೆ ಬಗ್ಗೆ ಅಧ್ಯಯನ ಮಾಡಲು ತಜ್ಞರ ಸಮಿತಿ ರಚಿಸಲಾಗುವುದು.
- ಸಮಿತಿ ನೀಡುವ ವರದಿ ಆಧರಿಸಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತಿಸಲಾಗುವುದು
ಇಂದಿನ ಮುಖ್ಯಮಂತ್ರಿಗಳ ಸಭೆಯಲ್ಲಿ ರೈತ ನಾಯಕಿ ಸುನಂದ ಜಯರಾಂ, ಸಂಸದೆ ಸುಮಲತಾ , ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಎಂ ಶ್ರೀನಿವಾಸ್, ಕೆಟಿ ಶ್ರೀಕಂಠೇಗೌಡ ಸೇರಿದಂತೆ ಇತರರು ಪಾಲ್ಗೊಂಡಿದ್ದರು
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
More Stories
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
ಸಚಿವ ಸ್ಥಾನ ನನ್ನ ಹಕ್ಕು, ಬೇಡಿಕೆಯಲ್ಲ: ನಿಖರ ಹೇಳಿಕೆ ನೀಡಿದ ‘ಕೈ’ ಶಾಸಕ ನರೇಂದ್ರ ಸ್ವಾಮಿ