ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿದ್ದ ಬೃಹತ್ ಐಟಿ ದಾಳಿಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 497 ಕೋಟಿ ರು ಹಣ, ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಇಲಾಖೆ ಮಾಧ್ಯಮ ಹೇಳಿಕೆಯಲ್ಲಿ . ನಾಲ್ಕು ರಾಜ್ಯಗಳ 47 ಕಡೆಗಳಲ್ಲಿ ನಡೆಸಿದ ಐಟಿ ದಾಳಿಯಲ್ಲಿ 750 ಕೋಟಿ ಆಕ್ರಮ ಆದಾಯ ಪತ್ತೆಯಾಗಿದ್ದು ಇದರಲ್ಲಿ ಒಟ್ಟು 487 ಕೋಟಿ ಆಕ್ರಮ ನಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ.
ಹೈವೆ ಪ್ರಾಜೆಕ್ಟ್, ಹಾಗೂ ನೀರಾವರಿ ಇಲಾಖೆ ಸಂಬಂಧ ದಾಳಿ ನಡೆದಿತ್ತು.. ದಾಳಿಯಲ್ಲಿ 4.69 ಕೋಟಿ ನಗದು, 8.62 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ 29.83 ಕೋಟಿ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಬೋಗಸ್ ದಾಖಲೆಗಳನ್ನು ಸೃಷ್ಟಿಸಿಕೊಂಡು ಸರ್ಕಾರದ ಗುತ್ತಿಗೆ ಪಡೆಯುತ್ತಿದ್ದ ಕಂಪನಿಗಳು ಕಾರ್ಮಿಕರಿಗೆ ನೀಡಿದ ಹಣದಲ್ಲಿ ಅವ್ಯವಹಾರ ನಡೆಸಿದ್ದವು ಎಂಬ ಆರೋಪ ಕೇಳಿಬಂದಿದೆ.
ಒಂದು ಗುತ್ತಿಗೆಯನ್ನು ಕಂಪನಿ 40 ಮಂದಿಗೆ ಸಬ್ ಕಂಟ್ರಾಕ್ಟರ್ಗಳಿಗೆ ನೀಡಿದೆ ಎನ್ನಲಾಗಿದೆ.
ತನಿಖೆ ವೇಳೆ ಪ್ರತಿಯೊಬ್ಬರೂ ದಾಖಲೆಗಳನ್ನು ತಿದ್ದಿ ಗುತ್ತಿಗೆ ಪಡೆದಿರುವುದರ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಐಟಿ ಸ್ಪಷ್ಟಪಡಿಸಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ