ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ ಗೋಲ್ಡ್ ಮೆಡಲ್ ಪಡೆದ ಮಂಡ್ಯದ ಗೃಹಿಣಿಯೊಬರು ಅನುಮಾನಾಸ್ಪದವಾಗಿ ಮೈಸೂರಿನಲ್ಲಿ ಸಾವನ್ನಪ್ಪಿದ ಘಟನೆ ಜರುಗಿದೆ.
ಆಶಾ ಮೃತ ಗೃಹಿಣಿ. ಮಳವಳ್ಳಿಯ ನಾಗಾಪ್ರಸಾದ್ ಎಂಬಾತನನ್ನು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮಡೇನಹಳ್ಳಿ ನಿವಾಸಿ ಆಶಾ ಎಂಟು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು.
ಸದ್ಯ ಮೈಸೂರಿನಲ್ಲಿ ಆಶಾ, ನಾಗಾಪ್ರಸಾದ್ ವಾಸವಾಗಿದ್ದರು. ಆಶಾಗೆ ಹಣ ತೆಗೆದುಕೊಂಡು ಬರುವಂತೆ ಗಂಡನಿಂದ ನಿರಂತರ ಕಿರುಕುಳ ನೀಡಲಾಗ್ತಿತ್ತು ಎಂದು ಆಶಾ ಕುಂಟುಂಬಸ್ಥರು ಆರೋಪಿಸಿದ್ದಾರೆ.
ಈ ಬಗ್ಗೆ ಎರಡ್ಮೂರು ಬಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಪ್ರಕರಣ ವಿಚ್ಛೇದನದ ಹಂತಕ್ಕೆ ಹೋಗಿತ್ತು. ನಂತರ ಕೌಟುಂಬಿಕ ಕೋರ್ಟ್ ನಲ್ಲಿ ರಾಜಿ ಮಾಡಲಾಗಿತ್ತು. ಇದಾದ ಮೇಲು ಪತಿಯಿಂದ ಕಿರುಕುಳ ಮುಂದುವರೆದಿದ್ದು ಹಣಕ್ಕಾಗಿ ದಿನೇ ದಿನೇ ಟಾರ್ಚರ್ ನೀಡ್ತಿದ್ದ ಎನ್ನಲಾಗಿದೆ.
ಕುಟುಂಬದವರಿಗೆ ನಿನ್ನೆಯಷ್ಟೇ ಕರೆ ಮಾಡಿ ಗಂಡನ ಮನೆ ಬಿಟ್ಟು ಪಿಜಿ ಯಲ್ಲಿರುತ್ತೇನೆ ಎಂದು ಆಶಾ ಹೇಳಿದ್ದಳಂತೆ.
ಅದರ ಬೆನ್ನಲ್ಲೇ ಗಂಡ ನಾಗಪ್ರಸಾದ್ ಆಶಾ ಪೋಷಕರಿಗೆ ಕರೆ ಮಾಡಿ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾನಂತೆ. ಇದರಿಂದ ಅನುಮಾನ ವ್ಯಕ್ತಪಡಿಸಿರುವ ಆಶಾ ಕುಟುಂಬಸ್ಥರು ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಆರೋಪಿಸಿದ್ದಾರೆ.
ಮೈಸೂರಿನ ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು