ಕಾನ್ಶೀರಾಂಗೆ “ಭಾರತ ರತ್ನ’ ನೀಡಲು ಮಾಯಾವತಿ ಒತ್ತಾಯ

Team Newsnap
1 Min Read

ದಲಿತ ನಾಯಕ ಕಾನ್ಶೀರಾಂ ಅವರಿಗೆ “ಭಾರತ ರತ್ನ’ ನೀಡಬೇಕೆಂದು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಹುಜನ ಸಮಾಜವಾದಿ ಪಕ್ಷದ( ಬಿಎಸ್‌ಪಿ) ನಾಯಕಿ ಮಾಯಾವತಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.


ಲಖೌನ್‌ನ ಕಾನ್ಶೀರಾಂ ಸ್ಮಾರಕ ಸ್ಥಳದಲ್ಲಿ ಶನಿವಾರ ಏರ್ಪಡಿಸಿದ್ದ ಬಿಎಸ್‌ಪಿ ಸಂಸ್ಥಾಪಕ ಕಾನ್ಶೀರಾಂ ಅವರ 15 ನೇ ಪುಣ್ಯತಿಥಿ ಸಮಾರಂಭದಲ್ಲಿ ಅವರು ಮಾತನಾಡಿದರು.


ಚುನಾವಣೆ ನಡೆಯುವುದಕ್ಕೆ ಆರು ತಿಂಗಳ ಮುಂಚೆ ಮಾಧ್ಯಮ ಸಂಸ್ಥೆಗಳು ಹಾಗೂ ಇತರೇ ಏಜೆನ್ಸಿಗಳು ಚುನಾವಣಾ ಪೂರ್ವ ಸಮೀಕ್ಷೆ ನಡೆಸದಂತೆ ನಿಷೇಧ ವಿಧಿಸಬೇಕೆಂದು ಒತ್ತಾಯಿಸಿದರು.

ಈ ರೀತಿ ಮಾಡುವುದರಿಂದ ಚುನಾವಣೆ ನಡೆಯುವ ರಾಜ್ಯಗಳ ಮೇಲೆ ಸಮೀಕ್ಷೆಗಳು ಪ್ರಭಾವ ಬೀರದಂತೆ ನಿಯಂತ್ರಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಶೀಘ್ರವಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗುವುದು ಎಂದರು.


ಮಾಧ್ಯಮ ಸಂಸ್ಥೆಗಳು ಹಾಗೂ ಇತರೇ ಏಜೆನ್ಸಿಗಳು ಚುನಾವಣಾ ಸಮೀಕ್ಷೆಯನ್ನು ವ್ಯಾಪಾರವಾಗಿಸಿಕೊಂಡಿವೆ ಎಂದೂ ಹೇಳಿದರು. ಉತ್ತರ ಪ್ರದೇಶದ ಜನರು ತಮ್ಮ ರಾಜ್ಯದಲ್ಲಿ ಅಧಿಕಾರದಲ್ಲಿರುವವರನ್ನು ಬದಲಾಯಿಸುವ ಬಗ್ಗೆ ತಮ್ಮ ಮನಸ್ಸು ಪರಿವರ್ತಿಸಿಕೊಳ್ಳಬೇಕೆಂದು ಮನವಿ ಮಾಡಿದರು.

Share This Article
Leave a comment