ಬೆಂಗಳೂರಿನ ತಿಗುಳರಪಾಳ್ಯ ದಲ್ಲಿ ಮಂಡ್ಯ ಹಲ್ಲೇಗೆರೆ ಗ್ರಾಮ ಒಂದೇ ಕುಟುಂಬದ
ನಾಲ್ವರು ಆತ್ಮಹತ್ಯೆ ಹಾಗೂ ಒಂದು ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ತಾಯಿ ಸಿಂಧು ರಾಣಿಯೇ 9 ತಿಂಗಳ ತನ್ನ ಮಗುವನ್ನು ಕತ್ತುಹಿಸುಕಿ ಕೊಲೆ ಮಾಡಿ, ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಒಬ್ಬೊಬ್ಬರು ಒಂದೊಂದು ಕಾರಣ ನೀಡಿ ಕುಟುಂಬಸ್ಥರು ಸಾಯಲು ನಿರ್ಧರಿಸಿದ್ದರು. ಒಬ್ಬ ಅಪ್ಪ ಸರಿ ಇಲ್ಲ ಅಂದ, ಮತ್ತಿಬ್ಬಿರು ಗಂಡ ಸರಿ ಇಲ್ಲ ಅಂದಿದ್ದರು. ಹೀಗೆ ಒಂದೀಡಿ ಕುಟುಂಬವೇ ಸಾವನ್ನಪ್ಪಿತ್ತು.
ಆದರೆ ಇದೀಗ ಸತ್ತವಳ ಕಟುಕುತನ ಹೇಗಿತ್ತು ಎಂಬುದು ಅನಾವರಣ ಆಗಿದೆ. ಸಿಂಧು ರಾಣಿ ತಾನು ಸಾಯುವ ಮೊದಲು 9 ತಿಂಗಳ ತನ್ನ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.
ಮಗುವಿನ ಕತ್ತಿನ ಬಳಿ ಹುಳು ಬಂದಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣ ಆಗಿತ್ತು. ಅನುಮಾನ ಈಗ ದೃಢವಾಗಿದೆ. ವೈದ್ಯಕೀಯ ವರದಿಯಲ್ಲಿ ಇದು ಕೊಲೆ ಎಂದು ಮಾಹಿತಿ ನೀಡಿವೆ.
ಪೊಲೀಸರಿಗೆ ಈ ಮಾಹಿತಿ ಮೌಖಿಕವಾಗಿ ಬಂದಿದೆ. ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಬಳಿಕ ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ