February 22, 2026

Newsnap Kannada

The World at your finger tips!

muralii poliice

ಬುದ್ದಿ ಹೇಳಿದ ಪೋಲಿಸ್ ಮೇಲೆ ಹಲ್ಲೆ ಮಾಡಿದ ಪ್ರೇಮಿಗಳು ಎಸ್ಕೇಪ್

Spread the love

ಬುದ್ಧಿ ಹೇಳಿದ ಪೋಲಿಸ್ ಮೇಲೆಯೇ ಪ್ರೇಮಿಗಳಿಬ್ಬರು ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಮೈಸೂರಿನ ಸಿದ್ದಾರ್ಥನಗರದಲ್ಲಿ ನಡೆದಿದೆ.

ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ರಾತ್ರಿ ವೇಳೆ ಪಾರ್ಕ್ ನಲ್ಲಿ ಕುಳಿತಿದ್ದ ಪ್ರೇಮಿಗಳಿಗೆ ಗಸ್ತಿನಲ್ಲಿದ್ದ ಪೊಲೀಸ್​ ಒಬ್ಬರು ಪ್ರಶ್ನೆ ಮಾಡಿದ್ದರು.

ಈ ವೇಳೆ ಕುಪಿತಗೊಂಡ ಪ್ರೇಮಿಗಳು‌ ಪೊಲೀಸ್​​ ಮೇಲೆ ಹಲ್ಲೆ ನಡೆಸಿ ಎಸ್ಕೇಪ್​ ಆಗಿದ್ದಾರೆ ಎನ್ನಲಾಗಿದೆ.

ಹಲ್ಲೆಯಲ್ಲಿ ಪೊಲೀಸ್ ​​ಸಿಬ್ಬಂದಿ ಮುರುಳಿಗೆ ಚಿಕ್ಕ ಪುಟ್ಟ ಗಾಯಗಳಾಗಿವೆ. ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನಜರ್ ಬಾದ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಎಸ್ಕೇಪ್ ಆಗಿರುವ ಪ್ರೇಮಿಗಳನ್ನು ಪೋಲಿಸರು ಹುಡುಕುತ್ತಿದ್ದಾರೆ.

error: Content is protected !!