ಬೆಂಗಳೂರಿನ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿ ಸೀಮಾ ಕೆ. ಮ್ಯಾಗಿ ಚಾಲಕನ ಮೂಲಕದ ಲಂಚದ ಹಣ ಪಡೆದಿದ್ದ ಆರೋಪದ ಮೇಲೆ ಸೀಮಾ ಅವರನ್ನು ಅಮಾನತು ಮಾಡಿ ಇಲಾಖೆ ಆದೇಶ ಹೊರಡಿಸಿದೆ.
ಸೀಮಾ ಕೆ. ಮ್ಯಾಗಿ ತನ್ನ ಏಜೆಂಟ್ ಶಿವಕುಮಾರ್ ಜೊತೆ ಹಫ್ತಾ ವಸೂಲಿ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಹಫ್ತಾ ವಸೂಲಿ ಮಾಡುತ್ತಿದ್ದ ಬಗ್ಗೆ ವಿಡಿಯೋ ದೃಶ್ಯಗಳ ಸಾಕ್ಷಿ ಸಿಕ್ಕಿದ್ದರಿಂದ ಅಧಿಕಾರಿಯ ಅಸಲಿ ಮುಖ ಬಟಾ ಬದಲಾಗಿತ್ತು.
ಲಂಚ ಪಡೆದ ಹಣ ಡೈರಿಯಲ್ಲಿ ದಾಖಲು :
ಸೀಮಾ ತಾವು ಪಡೆದ ಲಂಚದ ಬಗ್ಗೆ ಸಮಗ್ರ ಮಾಹಿತಿಯನ್ನು ಡೈರಿಯಲ್ಲಿ ಬರೆಯುತ್ತಿದ್ದರು. ಅವರ ಚಾಲಕ ಒಂದು ಡೈರಿಯಲ್ಲಿ ಹಣ ನೀಡಿದ್ದಾಗಿ ಪೆಟ್ರೋಲ್ ಬಂಕ್ ನವರ ಸಹಿ ಮತ್ತು ಸೀಲ್ ಕೂಡ ಪಡೆದುಕೊಳ್ಳುತ್ತಿದ್ದ.
ಈ ವೇಳೆ ಸೀಮಾ ಅವರಿಗೆ ಬ್ರೋಕರ್ ಶಿವಕುಮಾರ್ ಕೂಡ ಸಾಥ್ ಕೊಟ್ಟಿದ್ದ. ತನ್ನನ್ನ ತಾನು ಇಲಾಖೆಯ ಇನ್ಸ್ಪೆಕ್ಟರ್ ಅಂತಾ ಹೇಳಿಕೊಳ್ಳುತ್ತಿದ್ದ ಆತ, ಹಫ್ತಾ ವಸೂಲಿ ಮಾಡಲು ಸಹಕಾರ ನೀಡುತ್ತಿದ್ದ.
ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಸೀಮಾ ಕೆ. ಮ್ಯಾಗಿಗೆ ಇಲಾಖೆ ನೋಟಿಸ್ ಜಾರಿ ಮಾಡಿ ಉತ್ತರಿಸಲು ಹೇಳಿತ್ತು.
ಆದರೆ ನೋಟಿಸ್ ಸರಿಯಾಗಿ ಉತ್ತರ ನೀಡಲು ಸೀಮಾ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮ 1966 ರ ಸೆಕ್ಷನ್ 10(ಡಿ) ಅಡಿಯಲ್ಲಿ ಅಮಾನತು ಮಾಡಿ ಇಲಾಖೆ ಆದೇಶ ನೀಡಿದೆ.
ಸೀಮಾ ಮ್ಯಾಗಿ ವಿರುದ್ಧ ಇಲಾಖೆ ವಿಚಾರಣೆಗೆ ಆದೇಶ ನೀಡಲಾಗಿದೆ. ಆದೇಶದಲ್ಲಿ ಮೇಲಾಧಿಕಾರಿಗಳ ಅನುಮತಿಯಿಲ್ಲದೇ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂಬ ಸೂಚನೆಯನ್ನು ನೀಡಲಾಗಿದೆ.
- SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
- ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
- ತುಪ್ಪ ಎಂಬ ಮಹಾ ಔಷಧಿ
- ಸಂಸತ್ ಕಟ್ಟಡದ ಬಳಿ ಬೆಂಕಿ ಹಚ್ಚಿಕೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು
- ಕರ್ತವ್ಯದ ವೇಳೆ ಬ್ರೈನ್ಸ್ಟ್ರೋಕ್ಗೆ ಬಲಿಯಾದ ಅರಣ್ಯ ಇಲಾಖೆ ನೌಕರ
More Stories
ಮುದ್ದುಲಕ್ಷ್ಮಿ ಸೀರಿಯಲ್ ನಟ ಚರಿತ್ ಬಾಳಪ್ಪ ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ: ಬೆಂಗಳೂರು ಸೇರಿ 21 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ