ಮಾಹಿತಿ ಪ್ರಸರಣಕ್ಕೆ ಈ ಹಿಂದೆ ಮುದ್ರಣ ಮಾಧ್ಯಮಗಳ ಅವಲಂಬನೆ ಇತ್ತು. ತಂತ್ರಜ್ಞಾನದಲ್ಲಿ ಬೆಳವಣಿಗೆಗಳಾದಂತೆ ಎಲೆಕ್ಟ್ರಾನಿಕ್ ಮಾಧ್ಯಮ ಪ್ರವೇಶವಾಯಿತು. ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣ (ಸೋಷಿಯಲ್ ಮೀಡಿಯಾ)ದ ಪ್ರಭಾವ ಹೆಚ್ಚುತ್ತಿದ್ದಂತೆ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಜತೆ ಡಿಜಿಟಲ್ ಮಾಧ್ಯಮಗಳು ಹೊಸರೂಪ ಪಡೆದುಕೊಂಡವು. ಭಾರತದಲ್ಲೀಗ ಡಿಜಿಟಲೀಕರಣ ವೇಗ ಪಡೆದುಕೊಂಡಿದೆ.
ಸಮಾಜದಲ್ಲಿ ಬದಲಾದ ಸಮಯದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಮುದ್ರಣಮಾಧ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಕೆ.ಎನ್.ರವಿ ಡಿಜಿಟಲ್ ಮಾಧ್ಯಮದತ್ತ ಕಣ್ಣುಹಾಯಿಸಿದ ಪರಿಣಾಮವೇ 2020 ರ ಆಗಸ್ಟ್ 28 ರಂದು ಅವರ ಸಂಪಾದತ್ವದಲ್ಲಿ ಆರಂಭಗೊಂಡಿತು “ನ್ಯೂಸ್‌ಸ್ನ್ಯಾಪ್”.
ನೋಟುಗಳು ಇಲ್ಲದಿದ್ದರೂ ಪರಿವಾಗಿಲ್ಲ ಕೈಯಲ್ಲಿರಲೇಬೇಕು ಸ್ಮಾಟ್‌ಫೋನ್ ಎಂಬ ತುಡಿತವಿರುವ ಈ ಸಂದರ್ಭದಲ್ಲಿ ಗಳಿಗೆಯಾಗುವಷ್ಟರಲ್ಲಿ ಸಮಾಜದಲ್ಲಿ ದಿನ ನಿತ್ಯ ನಡೆಯುವ ನಾನಾ ಚಟುವಟಿಕೆಗಳ ಮಾಹಿತಿ ಬೆರಳಿನ ತುದಿಗೆ ನೀಡಬೇಕೆಂಬ ಆಶಯವಿಟ್ಟುಕೊಂಡು ಸಾಕಷ್ಟು ಜನರ ಮನಸ್ಸು ಗೆದ್ದು ನಾಗಾಲೋಟದಲ್ಲಿ ಸಾಗುತ್ತಿರುವ “ನ್ಯೂಸ್‌ಸ್ನ್ಯಾಪ್ ಗೆ ಈಗ ಒಂದು ವರ್ಷ ತುಂಬಿದೆ.
ಮಾಧ್ಯಮ ಕ್ಷೇತ್ರವಲ್ಲದೆ ಇತರ ರಂಗಗಳ ಖ್ಯಾತನಾಮರ ಸಹಕಾರದೊಂದಿಗೆ ಮುನ್ನಡೆಯುತ್ತಿರುವ ಈ ಸಂಸ್ಥೆ ಗುರಿ ದೊಡ್ಡದಾಗಿಯೇ ಇದೆ. ಸಾಹಿತ್ಯ, ಸಂಗೀತ, ಕಲೆ, ಕ್ರೀಡೆ, ಕೃಷಿಯಲ್ಲದೆ ಸಮುದಾಯದ ಎಲ್ಲ ವರ್ಗಗಳ ಸಮಸ್ಯೆಗಳತ್ತ ಬೆಳಕು ಚೆಲ್ಲಬೇಕೆನ್ನುವ ನಿಲುವು ಅಚಲವಾಗಿಯೇ ಇದೆ. ಇದಕ್ಕೆ ಹೃದಯ ವೈಶಾಲ್ಯವಿರುವ ಕನ್ನಡ ಮನಸ್ಸುಗಳ ಸ್ಪಂದನೆ, ಪ್ರೋತ್ಸಾಹವೇ ನಮಗೆ ಶ್ರೀರಕ್ಷೆ ಎಂದು ಹೇಳಬೇಕಾಗಿಲ್ಲ.
ಹೊಸತನಕ್ಕೆ ಹಾತೊರೆಯುವ ಬಯಕೆ ಇದ್ದರೆ ಹೊಸ ಹೊಸ ವಿಚಾರಗಳಿಗೂ ಜಾಗ ಸಿಕ್ಕೇ ಸಿಗುತ್ತದೆ. ತೆರೆದ ಮನಸ್ಸಿನೊಂದಿಗೆ ಮುನ್ನಡೆಯುತ್ತೇವೆ ಎಂದು ಭರವಸೆಯನ್ನೂ ಕೊಡುತ್ತೇವೆ.
More Stories
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ