ದುಬೈನ ಶಾರ್ಜಾದ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಪಿಎಲ್ ೨೦೨೦ ರ ೧೩ನೇ ಸರಣಿಯ ನಾಲ್ಕನೇ ದಿನದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ೧೬ ರನ್ ಗಳ ಜಯ ಸಾಧಿಸಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ರಾಜಸ್ಥಾನ್ ರಾಯಲ್ಸ್ ತಂಡದ ಪ್ರಖರವಾದ ಬ್ಯಾಟಿಂಗ್ ನ್ನು ಎದುರಿಸಬೇಕಾಯಿತು. ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕ ಆಟಗಾರರಾಗಿ ಮೈದಾನಕ್ಕಿಳಿದ ವೈ. ಜಯಸ್ವಾಲ್ ಹಾಗೂ ಎಸ್. ಸ್ಮಿತ್ ಆಕರ್ಷಣೀಯ ಆಟ ಪ್ರಾರಂಭಿಸಿದರು.
ಕೇವಲ ೬ ರನ್ ಗಳಿಗೆ ಜೈಸ್ವಾಲ್ ಔಟ್ ಆದಾಗ ಫೀಲ್ಡ್ ಗೆ ಬಂದದ್ದು ಎಸ್. ಸ್ಯಾಮ್ಸನ್. ರಾಜಸ್ಥಾನ್ ರಾಯಲ್ಸ್ ನ ಈ ನಾಯಕ ಮತ್ತು ಉಪನಾಯಕ ಜೋಡಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲರ್ ಗಳನ್ನು ನೀರಿಳಿಸಿತು. ಎಸ್. ಸ್ಮಿತ್ ೬೯(೪೭) ರನ್ನು ಹಾಗೂ ಎಸ್. ,ಸ್ಯಾಮ್ಸನ್ ೭೪ (೩೨) ರನ್ ಗಳಿಕೆ ಮಾಡಿ ತಂಡದ ಸ್ಕೋರ್ ನ್ನ ಪೇರಿಸಿದರು. ರಾಜಸ್ಥಾನ್ ರಾಯಲ್ಸ್ ೨೦ ಓವರ್ ಗಳಲ್ಲಿ ೭ ವಿಕೆಟ್ ಗಳ ನಷ್ಟಕ್ಕೆ ೨೧೬ ರನ್ ಗಳಿಸಿತು. ಐಪಿಎಲ್ ೧೩ನೇ ಸರಣಿಯಲ್ಲೇ ಇದು ಅತ್ಯಂತ ಹೆಚ್ಚಿನ ಸ್ಕೋರ್.
ನಂತರ ಫೀಲ್ಡಿಗಿಳಿದು ಬ್ಯಾಟಿಂಗ್ ಮಾಡಿದ ಸಿ.ಎಸ್.ಕೆ ತಂಡ ರನ್ ಗಳಿಸಲು ಹರಸಾಹಸಪಡಬೇಕಾಯಿತು. ಸಿ.ಎಸ್.ಕೆ ತಂಡದ ಎಸ್. ವ್ಯಾಟ್ಸನ್ ೩೩(೨೧) ಹಾಗೂ ಪ್ಲಾಫ್. ಡು. ಪ್ಲೆಸ್ಸಿಸ್ ೭೨ (೩೭) ರನ್ ಗಳಿಸಿ ತಂಡವನ್ನು ಮುನ್ನಡೆಸಲು ನೋಡಿದರು. ಆದರೆ ಅದು ಸಾಧ್ಯವಾಗಲೇ ಇಲ್ಲ. ಭರವಸೆಯ ಆಟಗಾರ, ತಂಡದ ನಾಯಕ ಎಂ.ಎಸ್.ಧೋನಿಯವರು ೨೯(೧೭) ರನ್ ಗಳಿಸಿ ಪೆವಿಲಿಯನ್ ಸೇರಿದರು. ರಾಜಸ್ಥಾನ್ ರಾಯಲ್ಸ್ ತಂಡದ ರಾಹುಲ್ ತೆವಾಟಿಯ, ಜೋಫ್ರಾ ಅರ್ಚರ್ ಮತ್ತು ಟಾಮ್ ಕರ್ರನ್ ಅವರ ಬೌಲಿಂಗ್ ದಾಳಿಗೆ ಸಿ.ಎಸ್.ಕೆ ತತ್ತರಿಸಿತು. ಸಿ.ಎಸ್.ಕೆ. ತಂಡವು ೨೦ ಓವರ್ ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೨೦೦ ರನ್ ಮಾತ್ರ ಗಳಿಸಿತು. ರಾಜಸ್ಥಾನ್ ರಾಯಲ್ಸ್ ತಂಡವು ೧೬ ರನ್ ಗಳ ಭರ್ಜರಿ ಗೆಲುವನ್ನು ದಾಖಲಿಸಿತು.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ