February 22, 2026

Newsnap Kannada

The World at your finger tips!

sriramulu 1

ಮಹತ್ವದ ಸಭೆಗೆ 4 ಬಿಜೆಪಿ ಶಾಸಕರ ಗೈರು

Spread the love

ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದವರ ಆಕ್ರೋಶ ಇನ್ನು ತಣ್ಣಗಾಗಿಲ್ಲ ಎಂಬುದನ್ನು, ಇಂದು ಚಿತ್ರದುರ್ಗದಲ್ಲಿ ಸಚಿವರ ಸಮ್ಮುಖದಲ್ಲಿ ನಡೆದ ಮಹತ್ವ ಸಭೆಗೆ ನಾಲ್ವರು ಬಿಜೆಪಿ ಶಾಸಕರು ಗೈರುಹಾಜರಾಗುವ ಮೂಲಕ ತೋರಿಸಿದ್ದಾರೆ.


ಸಾರಿಗೆ ಸಚಿವರಾದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಮೊದಲ ಬಾರಿಗೆ ಕೋಟೆನಾಡು ಚಿತ್ರದುರ್ಗಕ್ಕೆ ಬಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್-೧೯ರ ಸಂಭಾವ್ಯ ೩ನೇ ಅಲೆ ಹಾಗೂ ನೆರೆಹಾವಳಿ ಬಗ್ಗೆ ಸಭೆ ನಡೆಸಿದರು. ಆದರೆ ಈ ಪ್ರಮುಖ ಸಭೆಗೆ ಬಿಜೆಪಿ ನಾಲ್ವರು ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಪೂರ್ಣಿಮಾ ಶ್ರೀನಿವಾಸ್, ಗೂಳಿಹಟ್ಟಿ ಡಿ. ಶೇಖರ್, ಎಂ. ಚಂದ್ರಪ್ಪ ಆಗಮಿಸಲಿಲ್ಲ.

error: Content is protected !!