ಹೊಸ ಶಿಕ್ಷಣ ನೀತಿ: ಕೇಂದ್ರ ರೂಪಿಸಿರುವ ಮಾರ್ಗದರ್ಶಿ ಸೂತ್ರ

Team Newsnap
1 Min Read
Just for fun, I threatened with a bomb call - statement of a minor boy ಜಸ್ಟ್ ಫಾರ್ ಫನ್‍ ಗೆ ಬಾಂಬ್ ಬೆದರಿಕೆ ಹಾಕಿದ್ದೆ – ಅಪ್ರಾಪ್ತ ಬಾಲಕ ಹೇಳಿಕೆ

ಹೊಸ ಶಿಕ್ಷಣ ನೀತಿಗೆ ಕೇಂದ್ರ ಸಂಪುಟ ಹಸಿರು ನಿಶಾನೆ ತೋರಿದೆ. ೩೪ ವರ್ಷಗಳ ನಂತರ ಶಿಕ್ಷಣ ನೀತಿಯಲ್ಲಿ ಬದಲಾವಣೆ ಕಂಡುಬರುತ್ತಿದೆ. ಉನ್ನತ ಶಿಕ್ಷಣದಲ್ಲೂ ಅನೇಕ ಸುಧಾರಣೆ ಮಾಡಲಾಗಿದೆ.

ಶ್ರೇಣೀಕೃತ ಶೈಕ್ಷಣಿಕ,ಆಡಳಿತಾತ್ಮಕ ಮತ್ತು ಆರ್ಥಿಕ ಸ್ವಾಯತತ್ತೆ ಇತ್ಯಾದಿಗಳು. ಪ್ರಾದೇಶಿಕ ಭಾಷೆಗಳಲ್ಲಿ ಇ-ಕೋರ್ಸ್ಗಳು ಆರಂಭವಾಗಿಲಿವೆ. ವರ್ಚುವಲ್ ಲ್ಯಾಬ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ರಾಷ್ಟ್ರೀಯ ಶೈಕ್ಷಣಿಕ ವೈಜ್ಞಾನಿಕ ವೇದಿಕೆ(ಎನ್‌ಇಟಿಎಫ್) ಆರಂಭವಾಗಲಿದೆ. ಸರ್ಕಾರಿ, ಖಾಸಗಿ ಹಾಗೂ ಎಲ್ಲ ಸ್ವಾಯತ್ತ ಸಂಸ್ಥೆ(ಡೀಮ್ಡ್)ಗಳಿಗೆ ಒಂದೇ ನಿಯಮಗಳು ಇರುತ್ತವೆ.

೫ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮಾತೃಭಾಷೆ, ಸ್ಥಳೀಯ ಭಾಷೆ ಮತ್ತು ರಾಷ್ಟ್ರೀಯ ಭಾಷೆಯಲ್ಲಿ ಮಾತ್ರ ಕಲಿಸಲಾಗುತ್ತದೆ. ಉಳಿದ ವಿಷಯ, ಅದು ಇಂಗ್ಲಿಷ್ ಆಗಿದ್ದರೂ ಒಂದು ವಿಷಯವಾಗಿ ಕಲಿಸಲಾಗುತ್ತದೆ.


೯ರಿಂದ ೧೨ನೇ ತರಗತಿವರೆಗೆ ಸೆಮಿಸ್ಟರ್‌ನಲ್ಲಿ ಪರೀಕ್ಷೆ ನಡೆಯಲಿದೆ. ೫+೩+೩+೪ ಸೂತ್ರದ ಅಡಿಯಲ್ಲಿ ಶಾಲೆ ಕಲಿಸಲಾಗುತ್ತದೆ. ಈಗ ಬೋರ್ಡ್ ಪರೀಕ್ಷೆ ೧೨ನೇ ತರಗತಿಯಲ್ಲಿ ಮಾತ್ರ ಇರುತ್ತದೆ. ಮೊದಲು ೧೦ನೇ ತರಗತಿಯಲ್ಲಿ ಬೋರ್ಡ್ ಪರೀಕ್ಷೆ ಇತ್ತು. ಈಗ ವಿದ್ಯಾರ್ಥಿಗಳು ಎಂಫಿಲ್ ಮಾಡಬೇಕಾಗಿಲ್ಲ. ಬದಲಿಗೆ ಎಂಎ ವಿದ್ಯಾರ್ಥಿಗಳು ನೇರವಾಗಿ ಪಿಎಚ್‌ಡಿ ಮಾಡಲು ಸಾಧ್ಯವಾಗುತ್ತದೆ.


ಹೊಸ ಶಿಕ್ಷಣ ನೀತಿಯಲ್ಲಿ ಒಬ್ಬ ವಿದ್ಯಾರ್ಥಿಯು ಕೋರ್ಸ್ ಮಧ್ಯದಲ್ಲಿ ಇನ್ನೊಂದು ಕೋರ್ಸ್ ಮಾಡಲು ಬಯಸಿದರೆ, ಮೊದಲ ಕೋರ್ಸಿಂದ ಸೀಮಿತ ಅವಧಿಗೆ ವಿರಾಮ ತೆಗೆದುಕೊಂಡು ಎರಡನೇ ಕೋರ್ಸ್ ಮಾಡಬಹುದು.


ಹಾಗೆಯೇ ಕಾಲೇಜು ಪದವಿ ಮೂರು ಮತ್ತು ನಾಲ್ಕು ವರ್ಷಗಳಾಗಿರುತ್ತದೆ. ಪದವಿಯ ಮೊದಲ ವರ್ಷದ ಪ್ರಮಾಣ ಪತ್ರ, ಎರಡನೇ ವರ್ಷದಲ್ಲಿ ಡಿಪ್ಲೊಮಾ, ಮೂರನೇ ವರ್ಷದಲ್ಲಿ ಪದವಿ. ಮೂರು ವರ್ಷದ ಪದವಿ ಉನ್ನತ ಶಿಕ್ಷಣ ಪಡೆಯಲು ಇಚ್ಚಿಸದ ವಿದ್ಯಾರ್ಥಿಗಳಿಗೆ, ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ೪ ವರ್ಷದ ಪದವಿ ಮಾಡಬೇಕಾಗುತ್ತದೆ. ಈ ವಿದ್ಯಾರ್ಥಿಗಳು ಒಂದು ವರ್ಷದಲ್ಲಿ ಎಂಎ ಮಾಡಲು ಸಾಧ್ಯವಾಗುತ್ತದೆ.

Share This Article
Leave a comment