January 16, 2025

Newsnap Kannada

The World at your finger tips!

suma kum

ಕೆಆರ್ ಎಸ್ ಸೋರುತ್ತಿದ್ದರೆ ಸಂಸದೆ ಸುಮಲತಾರನ್ನು ಬಿರುಕು ಸ್ಥಳದಲ್ಲಿ ಮಲಗಿಸಬೇಕು – ಎಚ್ ಡಿ ಕೆ

Spread the love

ಕೆಆರ್ ಎಸ್ ಸೋರುತ್ತಿದ್ದರೆ ನೀರು ಸೋರದಂತೆ ಸಂಸದೆ ಸುಮಲತಾ ಅವರನ್ನು ಬಿರುಕು ಬಿಟ್ಟ ಸ್ಥಳದಲ್ಲಿ ಅಡ್ಡ ಅಡ್ಡ ಮಲಗಿಸಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.‌

ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ,
ಮಂಡ್ಯ ಸಂಸದೆ ಸುಮಲತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ
ಮಂಡ್ಯದಲ್ಲಿ ಇಂತಹ ಸಂಸದರು ಬಂದಿಲ್ಲ. ಬರೋದೂ ಇಲ್ಲ. ಕೆಆರ್ ಎಸ್ ಇವರೇ ರಕ್ಷಿಸುತ್ತಿದ್ದಾರೆ ಅನ್ನೋ ರೀತಿ ಹೇಳಿದ್ದಾರೆ ಎಂದು ವ್ಯಂಗ್ಯವಾಡಿದರು.

ಕೆಆರ್ ಎಸ್ ಸೋರುತ್ತಿದ್ದರೆ ಕೆಆರ್ ಎಸ್ ನೀರು ಸೋರದಂತೆ ಬಿರುಕು ಬಿಟ್ಟಿದೆ ಎಂದು ಹೇಳುವ ಸ್ಥಳದಲ್ಲಿ ಸುಮಲತಾರನ್ನು ಮಲಗಿಸಬೇಕು ಕುಟುಕಿದರು

ಕೆಆರ್ ಎಸ್ ಡ್ಯಾಂ ಬಿರುಕುಬಿಟ್ಟಿದೆ ಎಂದು ಸುಮಲತಾ ಹೇಳಿದ್ದಾರೆ. ಅದಕ್ಕೆ ಕುಮಾರಸ್ವಾಮಿ ಸಂಸದೆ ಸುಮಲತಾ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಯಾವುದೋ ಅನುಕಂಪದಲ್ಲಿ ಆಯ್ಕೆಯಾಗಿದ್ದಾರೆ. ಸಿಕ್ಕಿರುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲಿ. ಸಂಸದರಾಗಿ ಮಂಡ್ಯ ಕ್ಷೇತ್ರದ ಜನರ ಸೇವೆ ಮಾಡಲಿ ಎಂದು ಹೆಚ್.ಡಿ.ಕುಮಾರಸ್ವಾಮಿ ಸಲಹೆ ಮಾಡಿದರು. ‌

Copyright © All rights reserved Newsnap | Newsever by AF themes.
error: Content is protected !!