ಹೆಣ್ಣು ಮಕ್ಕಳನ್ನು ಅಪಮಾನಿಸಿ ಮಾತನಾಡುವುದೇ ಅವರ ಸಂಸ್ಕೃತಿ – ಸಂಸ್ಕಾರ : ಎಚ್ ಡಿಕೆ ಟಾಂಗ್ ನೀಡಿದ ಸಂಸದೆ ಸುಮಲತಾ

Team Newsnap
1 Min Read
Sumaltha's entry into state politics? ರಾಜ್ಯ ರಾಜಕಾಣಕ್ಕೆ ಸುಮಲತಾ ಎಂಟ್ರಿ?

ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುವುದು ಅದು ಅವರ ಸಂಸ್ಕೃತಿ – ಸಂಸ್ಕಾರವನ್ನು ಎತ್ತಿ ತೋರಿಸುತ್ತದೆ. ಮಾಜಿ ಸಿಎಂ ಆಗಿ, ಇಂತಹ ಮಾತುಗಳನ್ನು ಆಡುವುದು ಶೋಭೆತರಲ್ಲ ಎಂದು ಕುಮಾರಸ್ವಾಮಿ ಗೆ ಸಂಸದೆ ಸುಮಲತಾ ಟಾಂಗ್ ನೀಡಿದರು.‌

ವಿಧಾನ‌ ಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸುಮಲತಾ
ಹೆಣ್ಣುಮಕ್ಕಳ ಬಗ್ಗೆ ಕೀಳುಮಟ್ಟದ ಹೇಳಿಕೆ ಕುಮಾರಸ್ವಾಮಿ ಸಂಸ್ಕೃತಿ, ವ್ಯಕ್ತಿತ್ವನ್ನು ತೋರುತ್ತದೆ ಎಂದು ಕಿಡಿಕಾರಿದ್ದಾರೆ.

ಕೆ.ಆರ್.ಎಸ್. ಜಲಾಶಯ ರಕ್ಷಣೆ ನನ್ನ ಉದ್ದೇಶ. ನನ್ನ ಮಾಹಿತಿಯಂತೆ ಜಲಾಶಯ ಉಳಿವಿಗಾಗಿ ಕೆಲಸ ಮಾಡುವುದು ನನ್ನ ಕರ್ತವ್ಯ ನಾನು ಮಾಡಿದ್ದೇನೆ. ಖಾಸಗಿ ಸಹ ಭಾಗಿತ್ವದಲ್ಲಾದರೂ ಸರಿ ಮೈಷುಗರ್ ಕಾರ್ಖಾನೆ ಆರಂಭಿಸಿ ಮಂಡ್ಯ ರೈತರ ರಕ್ಷಣೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುವುದು ತಪ್ಪೆ? ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆದಿರುವ ಅಕ್ರಮ ಗಣಿಗಾರಿಕೆ ತಡೆಯಿರಿ ಎಂದು ಹೇಳುವುದು ತಪ್ಪೆ? ಮನ್ ಮುಲ್ ನಡೆದಿರುವ ಹಗರಣದ ತನಿಖೆ ನಡೆಸಿ ಎಂದರೆ ಅದೂ ತಪ್ಪೆ ? ಈ ಬಗ್ಗೆ ಕುಮಾರಸ್ವಾಮಿಯವರ ಮಾತು ಕೇಳಿ ಕೆಲಸ ಮಾಡಬೇಕಿಲ್ಲ ಎಂದು ಹೇಳಿದರು.

ಜನರ ಹಿತ ಕಾಯುವುದು ನನ್ನ ಜವಾಬ್ದಾರಿ ಎಂದರು. ಕುಮಾರಸ್ವಾಮಿ ಹೇಳಿದಂತೆ ಮಂಡ್ಯ ಜಿಲ್ಲೆ ನನ್ನಂತ ಸಂಸದೆ ಹಿಂದೆ ನೋಡಿಲ್ಲ. ‌ಅದು ನಿಜ. ನನ್ನಂತ ನೇರವಂತಿಕೆ ಹಾಗೂ ಭ್ರಷ್ಟಾಚಾರದ ವಿರುದ್ಧ ನೇರವಾಗಿ ಧ್ವನಿ ಎತ್ತಿರುವುದರಿಂದ ಅವರಿಗೆ ಜೀರ್ಣಿಸಿಕೊಳ್ಳುವುದು ಕಷ್ಟವಾಗಿದೆ ಎಂದರು.

ನನ್ನ ಕೆಲಸ ಹಾಗೂ ಜವಾಬ್ದಾರಿ ಗಳನ್ನು ನಾನು ನಿರ್ವಹಣೆ ಮಾಡುತ್ತೇನೆ. ಇವರನ್ನು ಕೇಳಿ ಮಾಡಬೇಕಿಲ್ಲ. ಚುನಾವಣೆ ಸಂದರ್ಭದಿಂದಲೂ ಅವರ ಸಂಸ್ಕೃತಿ-ಸಂಸ್ಕಾರ ಏನೆಂಬುದು ಜನರಿಗೂ ಗೊತ್ತಾಗಿದೆ. ಜನ ನನಗಲ್ಲ ಅವರಿಗೆ ಬುದ್ಧಿ ಕಲಿಸಿದ್ದಾರೆ. ಆದರೂ‌ ಅವರಿಗೆ ಬುದ್ದಿ ಬಂದಿಲ್ಲ ಎಂದರೆ ನಾನು ಏನೂ ಮಾಡಲು ಸಾಧ್ಯವಿಲ್ಲ. ಚುನಾವಣೆಯ ಸೋಲಿನ ಸೇಡು ಮರೆತಿಲ್ಲ. ಅದಕ್ಕೆ ಹೀಗೆ ಹೇಳುತ್ತಿದ್ದಾರೆ ಎಂದು ಸುಮಲತಾ ತಿರುಗೇಟು ನೀಡಿದರು.

Share This Article
Leave a comment