ಅಪ್ಪನಿಲ್ಲದ ಆಗಸದೆ
ಮಿಂಚುವುದೆ ತಾರೆಗಳು?
ನಕ್ಕಾವೆ ಸೂರ್ಯ ಚಂದ್ರರು?
ಮೊದಲು ಮಡಿಲಿನಲಿ ಮತ್ತೆ ತೋಳಿನಲಿ,
ಬೆನ್ನಿನ ಮೇಲೆ ಕೂಸುಮರಿ
ಕೊನೆತನಕ ಮೆರವಣಿಗೆಯಂಬಾರಿ
ತನ್ನೆಲ್ಲ ಕಷ್ಟಗಳ
ಒಳಗೊಳಗೇ ನುಂಗಿ
ತಣ್ಣಗೆ ನಗುವ ಅಚಲ ಹಿಮಾಲಯ
ರೆಕ್ಕೆ ಇರದ ಪುಟ್ಟ ಹಕ್ಕಿಗಳ
ಬೆಚ್ಚನೆಯ ಎಲೆಯೊಳಗಡಗಿಪ
ಬಿಸುಪಿನ ವಿಶಾಲ ವೃಕ್ಷ

ಮಳೆಯಲಿ ಛತ್ರಿ
ಚಳಿಯಲಿ ಕಂಬಳಿ
ಬಿರುಬಿಸಿಲಿಗೆ ಬೀಸಣಿಗೆ
ಏನ ಹೇಳಲಿ ಅಪ್ಪಾ
ನೀನಿಲ್ಲದ ಆಗಸದೆ
ಮಿಂಚುವುದೆ ತಾರೆಗಳು?
ನಕ್ಕಾವೆ ಸೂರ್ಯ ಚಂದ್ರರು?



More Stories
“ಸ್ತ್ರೀ ಶಕ್ತಿ”
ಮನೆತನದ ಜೀವ ಮನುಜಕುಲದ ದೈವ
ಮಾನಿನಿಯ ಮನದ ಧ್ವನಿ