ನಾನು ಓದಿಲ್ಲ. ನೀನಾದರೂ ಓದು ಎಂದು ಪತ್ನಿಯನ್ನು ಕೆಎಎಸ್ ಮಾಡಿಸಿ ತಹಶೀಲ್ದಾರ್ ಹುದ್ದೆ ಸಿಕ್ಕ 6 ತಿಂಗಳಲ್ಲಿ ಪತಿ ಕೊರೊನಾಗೆ ಬಲಿ ಘಟನೆ ಶಿವಮೊಗ್ಗ ದಲ್ಲಿ ನಡೆದಿದೆ.
ಪತ್ನಿ ಅಶ್ವಿನಿ ಶಿಕ್ಷಣಕ್ಕೆ ಪ್ರೇರಣೆ ನೀಡಿ ಕೆಎಎಸ್ ಓದಿಸಿದ್ದ ಪತಿ ಶಿವಮೊಗ್ಗದ ಸವಾರ್ ಲೈನ್ ರಸ್ತೆಯ ಸೀನಾ ಅಲಿಯಾಸ್ ಕಡ್ಡಿ ಸೀನಾ ಮೃತ ದುರ್ದೈವಿ.
ತನ್ನ ಅಕ್ಕನ ಮಗಳು ಅಶ್ವಿನಿಯನ್ನು ಮದುವೆಯಾಗಿದ್ದ ಸೀನಾ. ನಾನಂತೂ ಓದಿಲ್ಲ, ಆದ್ದರಿಂದ ಚೆನ್ನಾಗಿ ಓದುತ್ತಿದ್ದ ತನ್ನ ಹೆಂಡತಿಯನ್ನು ಕೆಎಎಸ್ ಅಧಿಕಾರಿಯನ್ನಾಗಿಸಬೇಕು ಎಂದು ಕನಸುಕಂಡಿದ್ದ.
ಪತಿಯ ಬೆಂಬಲ ಪಡೆದ ಅಶ್ವಿನಿ ಕೂಡ ಮದುವೆ ಮುನ್ನ ಕೆಎಎಸ್ ಪರೀಕ್ಷೆ ಎದುರಿಸಲು ಆರಂಭಿಸಿದ್ದ ಪೂರ್ವಬಾವಿ ತರಬೇತಿಯನ್ನು ಮುಂದುವರಿಸಿದ್ದರು. ಅಲ್ಲದೇ ಮದುವೆಯ ಬಳಿಕವೂ ಪರೀಕ್ಷೆಗೆ ಅಗತ್ಯವಿದ್ದ ತರಬೇತಿಯನ್ನು ಪಡೆದುಕೊಂಡು ಪರೀಕ್ಷೆ ಎದುರಿಸಿದ್ದರು. ಕಠಿಣ ಶ್ರಮದ ಫಲವಾಗಿ ಕಳೆದ ವರ್ಷ ಅಶ್ವಿನಿ ಕೆಎಎಸ್ ಪರೀಕ್ಷೆ ಪಾಸ್ ಮಾಡಿ ಆರು ತಿಂಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ತಹಶೀಲ್ದಾರ್ ಹುದ್ದೆಯನ್ನು ಪಡೆದುಕೊಂಡಿದ್ದರು.
ಆದರೆ ಕಳೆದ ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೆ ತುತ್ತಾಗಿದ್ದ ಸೀನಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪತ್ನಿ 6 ತಿಂಗಳ ಕಾಲ ಅಧಿಕಾರಿಯಾಗಿ ಕೆಲಸ ಮಾಡಿದ್ದನ್ನು ಮಾತ್ರ ಕಂಡ ಪತಿ ಸೀನಾ, ಸಂಸಾರ ಆರಂಭಿಸುವ ಮೊದಲೇ ಆಕೆಯನ್ನು ಬಿಟ್ಟು ತೆರಳಿದ್ದಾನೆ.
- ಕರ್ನಾಟಕದಲ್ಲಿ ಡಿಸೆಂಬರ್ 4ರ ತನಕ ಭಾರೀ ಮಳೆ ಮುನ್ಸೂಚನೆ
- RBI ಗವರ್ನರ್ ಶಕ್ತಿಕಾಂತ ದಾಸ್ ಆಸ್ಪತ್ರೆಗೆ ದಾಖಲು: ಆರೋಗ್ಯದಲ್ಲಿ ಚೇತರಿಕೆ
- ಮುಡಾ ಹಗರಣ: ಡಿ.10ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
- ಏಕನಾಥ್ ಶಿಂಧೆ ರಾಜೀನಾಮೆ: ದೇವರ ಮೊರೆ ಹೋದ ಬೆಂಬಲಿಗರು, ಮಹಾಯತಿ ಸರ್ಕಾರ ರಚನೆಗೆ ತಯಾರಿ
- ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಸರ್ಕಾರಿ ಶಾಲಾ ಶಿಕ್ಷಕನ ಬಂಧನ
More Stories
ನವೆಂಬರ್ 28: ರಾಜ್ಯದ ಅಭಿವೃದ್ಧಿಗೆ ಮಹತ್ವದ ಸಚಿವ ಸಂಪುಟ ಸಭೆ
ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ