ಮೊದಲು ನೆನಪಿಗೆ ಬರುವನು
ಅವನು, ನನ್ನ ಅಂತರಂಗದ ಗೆಳೆಯ
ನಂತರ ನೀನು ಅವನ ಬಾಳ ಗೆಳತಿ
ನನಗೆ ಗೊತ್ತು ಅವನೀಗ ಇಲ್ಲಿಲ್ಲ
ಬೆಂದು ಹೋಗಿದೆ ನೊಂದು ಜೀವ
ಅಪರಕರ್ಮವ ಮಾಡಲಾಗಲಿಲ್ಲ
ಸ್ವರ್ಗ ಸೇರಿದನೊ ಇಲ್ಲವೊ ಎಂದು
ಕೊರಗಿ ಬಸವಳಿದು ಬೇಸರಿಸದಿರು
ಕಾಣು ನೀನವನನ್ನು ದಿನನಿತ್ಯವೂ
ಅವನ ಮಕ್ಕಳೊಳಗೆ, ಬತ್ತದ ಸೆಲೆಯ ನೆಲೆಯದು ನಿನ್ನ ಮನಮಾಡಿನೊಳಗೆ
ಯೋಚಿಸರಲಿಲ್ಲ ಅವ ಸಾವಿನ ಬಗ್ಗೆ
ಅಥವಾ ನಿನ್ನ ಬಿಟ್ಟು ಹೋಗುವ ಬಗ್ಗೆ
ಚಿಂತಿಸಿದ ಯಾವಾಗಲೂ ಬದುಕನ್ನು ಸಂಪೂರ್ಣ ನಿನ್ನೊಂದಿಗೆ ಕಳೆವುದಕೆ
ನೋಡ ಬಯಸಿದ್ದನವ ಹೊಸ ಜಾಗ
ಹೊಸ ಸಿನಿಮಾ ಸಿರಿಯಲ್ಲು ಉಡುತ್ತ
ಹೊಸಬಟ್ಟೆ ಬಳಗ ಆಮೋದ ಪ್ರಮೋದ
ಅವನಲ್ಲಿತ್ತು ಆಕಾಶದಷ್ಟು ಆಲೋಚನೆ ಯಾರಿಗೂ ಹೇಳಲಿಲ್ಲ ಯಾಕೆಂದರೆ ಬದುಕುವೆನೆಂದಷ್ಟೆ ಭಾವಿಸಿದ್ದ ದುಡಿದು
ಅಪರಿಮಿತ ಕಷ್ಟದಲಿ ಕೂಡಿದ ಹಣವ
ಖರ್ಚು ಮಾಡಬಯಸಿದ್ದ ನಿನ್ನೊಂದಿಗೆ
ಬರಿಗೈಯ ಋಣದಿಂದ ಶೂನ್ಯಕ್ಕೇರಿ ಸಂಪಾದಿಸಿದ್ದ ಮುಗಿಲೆತ್ತರ ಸುರಿಸಿ
ಬೆವರು ಕೂಡಿ ಒಂದೊಂದು ರೂಪೈ
ನಿಂತನೆದ್ದ ಸರೀಕರಲಿ ಸಮಾಜದಲಿ
ಗಣ್ಯನಾಗಿ ಮಾನ್ಯನಾಗಿ ವಿನೀತನಾಗಿ
ಆಲೋಚಿಸವನ ಯೋಜನೆಗಳ ಬಗ್ಗೆ
ನನಸಾಗಬೇಕಾದ ಕನಸುಗಳು ಬುಗ್ಗೆ
ಆಗಬೇಕಾದ ಕೆಲಸಕೆ ಹಾಕುತ್ತ ಲಗ್ಗೆ
ಪ್ರೀತಿಸು ಮಕ್ಕಳ ದುಪ್ಪಟ್ಟು ಅವನ
ನೆನಪನ್ನು ಚಿರವಾಗಿ ಎದೆಯಲಿಟ್ಟು
ಹರಿಯದಿರಲಿ ಕಣ್ಣೀರು, ನೀನತ್ತಾಗ ನೋವಾಗತ್ತಿತ್ತು ಅವನಿಗೆ ಬಹಳ
ನಿನಗದು ಗೊತ್ತು ಆದಕೆ ನವಿರಾಗಿ ಪ್ರೀತಿಯಲಿ ಅವನ ನೆನಪಿಸಿಕೊ
ನಗುತಲಿರು ಸಂತಸದಿ ಚಿರವಾಗಿ.
…ಬೆಂ ಶ್ರೀ ರವೀಂದ್ರ
- ಮುಡಾ ಹಗರಣ: ಡಿ.10ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
- ಏಕನಾಥ್ ಶಿಂಧೆ ರಾಜೀನಾಮೆ: ದೇವರ ಮೊರೆ ಹೋದ ಬೆಂಬಲಿಗರು, ಮಹಾಯತಿ ಸರ್ಕಾರ ರಚನೆಗೆ ತಯಾರಿ
- ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಸರ್ಕಾರಿ ಶಾಲಾ ಶಿಕ್ಷಕನ ಬಂಧನ
- ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ ನಿರ್ಮಾಣದ ಪ್ರಸ್ತಾವನೆ ಸಲ್ಲಿಸಲು ಸಿಎಂ ಸಿದ್ದರಾಮಯ್ಯ ಸೂಚನೆ
- ಆಸ್ಟ್ರೇಲಿಯ ವಿರುದ್ಧ ಭರ್ಜರಿ ಗೆಲುವು: ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕನಸು ಜೀವಂತ
More Stories
ನವೆಂಬರ್ 28: ರಾಜ್ಯದ ಅಭಿವೃದ್ಧಿಗೆ ಮಹತ್ವದ ಸಚಿವ ಸಂಪುಟ ಸಭೆ
ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ