ಮಂಗಳವಾರ ಹೃದಯಾಘಾತದಿಂದ ನಿಧನರಾದ ಹಿರಿಯ ನಟ ಕೃಷ್ಣೇಗೌಡರಿಗೆ ಮಗನ ಸಾವಿನ ಸಂಗತಿ ತಿಳಿಯದೇ ಜೀವನದ ಕೊನೆ ಕ್ಷಣ ಕೂಡ ಅತ್ಯಂತ ದುಃಖದಿಂದ ಕೂಡಿತ್ತು.
ಕೇವಲ 20 ದಿನಗಳ ಹಿಂದೆ ನಟ ಕೃಷ್ಣೇಗೌಡ ಹಾಗೂ ಅವರ ಎರಡನೇ ಪುತ್ರ ಸತೀಶ್ ಗೆ ಕೊರೋನಾ ಸೋಂಕು ತಗುಲಿತು.
ಕೃಷ್ಣೇಗೌಡರು ಕೊರೋನಾದಿಂದ ಬಚಾವ್ ಆದರು. ಆದರೆ ಕೊರೋನಾ ಸೋಂಕು ಶ್ವಾಸಕೋಶವನ್ನು ಆವರಿಸಿದ್ದರಿಂದ ಕೃಷ್ಣೇಗೌಡರನ್ನು ಐಸಿಯುನಲ್ಲೇ ಇರಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ ಮಗ ಸತೀಶ್ ಕೊರೋನಾಗೆ ಬಲಿಯಾಗಿ ಹೋದರು. ಮಗ ಸಾವನ್ನಪ್ಪಿದ ಸುದ್ದಿಯನ್ನು ಐಸಿಯುನಲ್ಲಿ ಇದ್ದ ಗೌಡರಿಗೆ ಹೇಳಲಿಲ್ಲ. ಹೀಗಾಗಿ ಮಗನ ಸಾವಿನ ಸುದ್ದಿಯೂ ಸಹ ಅಪ್ಪನಿಗೆ ಗೊತ್ತಾಗದೇ ಕೊನೆಯುಸಿರೆಳೆದರು.
ಚಿತ್ರರಂಗದಲ್ಲಿ ಹೋರಾಟದ ಬದುಕನ್ನು ಕಟ್ಟಿಕೊಂಡಿದ್ದ ಕೃಷ್ಣೇಗೌಡರು, ಕೊನೆಯ ಕ್ಷಣವೂ ದುರಂತದಿಂದಲೇ ಕೂಡಿತ್ತು ಎಂಬ ಸಂಗತಿ ಈಗ ಬಯಲಾಗಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ