ಬ್ಲಾಕ್ ಫಂಗಸ್ ತುಂಬಾ ಡೇಂಜರ್. ಕೊರೋನಾ ಗಿಂತ ಭೀಕರವಾಗಿ ವ್ಯಾಪಿಸಿದೆ. ರಾಜಸ್ಥಾನದಲ್ಲಿ ಈ ಸೋಂಕನ್ನು ಸಾಂಕ್ರಾಮಿಕ ಅಂತಾ ಘೋಷಿಸಲಾಗಿದೆ. ತಮಿಳುನಾಡಿನಲ್ಲಿ ಇದು ಗಂಭೀರ ಕಾಯಿಲೆ ಎಂದು ಪರಿಗಣಿಸಲಾಗಿದೆ.
ದೆಹಲಿ, ಪಂಜಾಬ್, ಪಶ್ಚಿಮ ಬಂಗಾಳ, ಕೇರಳ, ಮಹಾರಾಷ್ಟ್ರ ರಾಜ್ಯಗಳು ಅಕ್ಷರಶಃ ಬ್ಲಾಕ್ ಫಂಗಸ್ ನಿಂದ ತತ್ತರಿಸಿ ಹೋಗುತ್ತಿವೆ. ಕರ್ನಾಟಕವೂ ಹೊರತಲ್ಲ.
ಈ ಸೋಂಕಿನ ಲಕ್ಷಣಗಳೇನು? ಅನ್ನೋದರ ಬಗ್ಗೆ ಎಲ್ಲರಿಗೂ ಮಾಹಿತಿ ಇರಬೇಕು. ಜೊತೆಗೆ ಯಾವೆಲ್ಲ ರಾಜ್ಯಗಳಲ್ಲಿ ಏನೇನಾಗ್ತಿದೆ. ಕೇಂದ್ರ ಸರ್ಕಾರ ಏನು ಕ್ರಮ ಕೈಗೊಳ್ಳುತ್ತಿದೆ? ಅನ್ನೋ ಪ್ರಶ್ನೆಗಳು ಸಹಜ.
ಬ್ಲಾಕ್ ಫಂಗಸ್ ರೋಗ ಲಕ್ಷಣ ಗಳೇನು?
- ಪ್ರಾರಂಭದಲ್ಲಿ ಈ ಕಾಯಿಲೆ ಲಕ್ಷಣಗಳು ಅತ್ಯಂತ ಸಿಂಪಲ್ ಆಗಿರುತ್ತವೆ. ನಂತರ ಅತ್ಯಂತ ಗಂಭೀರವಾಗುತ್ತೆ.
- ಮಾಮೂಲಿ ನೆಗಡಿ, ಕಾಫ್ ಬಂದಿರಬಹುದು ಅಂತ ನೆಗ್ಲೆಕ್ಟ್ ಮಾಡುವಂತೆಯೇ ಇಲ್ಲ.ಏಕೆಂದರೆ ಸಣ್ಣದಾಗಿ ರೋಗಲಕ್ಷಣ ಆರಂಭವಾಗಿ ಜೀವವನ್ನೇ ಬಲಿ ತೆಗೆದುಕೊಳ್ಳೋ ಸಾಧ್ಯತೆ ಇದೆ.
- ಕಣ್ಣುಗಳನ್ನೇ ಕಳೆದು ಕೊಳ್ಳುವಂತೆಯೂ ಇದು ಮಾಡಬಲ್ಲದು.
- ಬ್ಲಾಕ್ ಫಂಗಸ್ ಬಂದಾಗ ಕಿವಿ, ಮೂಗು ಹಾಗೂ ಗಂಟಲಿಗೆ ಮೊದಲು ಅಟ್ಯಾಕ್ ಮಾಡುತ್ತದೆ.
- ಉಸಿರಾಡಿದಾಗ ಕೆಟ್ಟ ವಾಸನೆ ಬಂದಂತಾಗುವುದು, ಮೂಗಿನಿಂದ ಕಪ್ಪು ದ್ರವ ಸೋರುತ್ತದೆ.
- ಉಗುಳಿದಾಗ ಕಪ್ಪು ಡಾಟ್ಸ್ ಇರೋ ಕಫದಂತೆ ಬರುವ ಸಾಧ್ಯತೆ
- ಕಿವಿಯ ಒಳಗೆ ತುರಿಕೆ, ಕಿವಿನೋವು, ಕಿವಿ ಕಟ್ಟಿದಂತಾಗುತ್ತೆ. ಕಿವಿ ಬ್ಲಾಕ್ ಆದಂತೆ ಕೂಡ ಆಗುತ್ತೆ.
- ಕಣ್ಣು ನೋವು, ಕಣ್ಣು ಉರಿ, ಹುಬ್ಬು ನೋವು, ಸೈನಸ್ ಪ್ರದೇಶದಲ್ಲಿ ನೋವು ಬಂದರೂ ಸಹ ಅಂತಹ ವ್ಯಕ್ತಿ ಕೂಡಲೇ ಎಚ್ಚರಿಕೆ ವಹಿಸಬೇಕು.
- ಜೊತೆಗೆ ಗಂಟಲಿನಲ್ಲಿ ಸಣ್ಣ ಪ್ರಮಾಣದಿಂದ ತೀವ್ರತರನಾದ ಕಿರಿ ಕಿರಿ ಕೂಡ ಆಗಬಹುದು.
- ಪ್ರಮುಖವಾಗಿ ಕಣ್ಣುಗಳು ಮಂಜಾಗುವುದು, ಒಂದೇ ವಸ್ತು ನೋಡಿದರೂ 2ರಂತೆ ಕಾಣುವುದು ಬ್ಲಾಕ್ ಫಂಗಸ್ ಅತಿರೇಕಕ್ಕೆ ಹೋಗ್ತಿರೋ ಮುನ್ಸೂಚನೆ ಆಗಿದೆ.
- ಈ ಎಲ್ಲಾ ಲಕ್ಷಣ ಕಂಡುಬಂದ್ರೂ ಅಂತಹ ವ್ಯಕ್ತಿ ಕೂಡಲೇ ಕಿವಿ, ಮೂಗು ( ENT ) ತಜ್ಙ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
- ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ
- ಕಾಪರ್ ಏಜ್ ಇನ್ಸ್ಟಿಟ್ಯೂಟ್ ಮಾಲೀಕ ಶರತ್ ಆತ್ಮಹತ್ಯೆ: ಕಾರಣ ನಿಗೂಢ
- 104ರನ್ಗೆ ಆಸ್ಟ್ರೇಲಿಯಾ ಆಲೌಟ್ ,ಬುಮ್ರಾಗೆ 5 ವಿಕೆಟ್
- ಚನ್ನಪಟ್ಟಣ: 4 ನೇ ಸುತ್ತಿನಲ್ಲಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
More Stories
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ