ಅಕ್ಕ-ತಂಗಿಯರನ್ನು ಒಂದೇ ಮುಹೂರ್ತದಲ್ಲಿ ವರನೊಬ್ಬ ಮದುವೆಯಾದ ಅಪರೂಪದ ಸಂಗತಿ ಘಟಿಸಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ ಇಂತಹದೊಂದು ಅಪರೂಪದ ಪ್ರಸಂಗ ಜರುಗಿದೆ.
ಸುಪ್ರಿಯಾ ಹಾಗೂ ಲಲಿತ ಎಂಬ ಇಬ್ಬರು ಅಕ್ಕ ತಂಗಿಯರನ್ನು ಉಮಾಪತಿ ಎಂಬುವವರು ಒಂದೇ ಮುಹೂರ್ತದಲ್ಲಿ ಮದುವೆ ಮಾಡಿಕೊಂಡಿದ್ದಾರೆ.
ಅಕ್ಕ ಸುಪ್ರಿಯಾಗೆ ಮಾತು ಬರುವುದಿಲ್ಲ. ಅವಳಿಗೆ ಮದುವೆಯಾಗದೆ ತಂಗಿ ಲಲಿತಾಗೆ ಮದುವೆಯಾಗೋದಿಲ್ಲ ಹಠ ಹಿಡಿದಳು.
ಅಕ್ಕನಿಗೆ ಎಲ್ಲಿ ಮದುವೆ ಯಾಗುವುದಿಲ್ಲವೋ ಎಂದು ಯೋಚಿಸಿದ ತಂಗಿ ಲಲಿತಾ ನನ್ನನ್ನು ಮದುಯಾಗಬೇಕೆಂದರೆ ನನ್ನ ಅಕ್ಕನನ್ನೂ ಮದುವೆ ಮಾಡಿಕೊಳ್ಳಬೇಕು ಎಂಬ ಷರತ್ತನ್ನು ವರ ಉಮಾಪತಿಗೆ ವಿಧಿಸಿದ್ದರು.
ಈ ಷರತ್ತಿಗೆ ಒಪ್ಪಿದ ಉಮಾಪತಿ ಮೇ 7ರಂದು ಗ್ರಾಮದಲ್ಲಿ ಸಹೋದರಿ ಯರನ್ನು ವರೆಸಿದನು.
ಮದುವೆ ಫೋಟೋ ಹಾಗೂ ಮದುವೆ ಆಮಂತ್ರಣ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ವಂಶ ಪಾರಂಪರ್ಯದ ಮದುವೆ :
ಸುಪ್ರಿಯಾ ಹಾಗೂ ಲಲಿತಾ ಕುಟುಂಬದಲ್ಲಿ ಈ ರೀತಿ ಮದುವೆ ನಡೆದಿದ್ದು ಇದೇ ಮೊದಲಲ್ಲ. ಇವರ ತಂದೆ ಕೂಡಾ ಇದೆ ರೀತಿಯಲ್ಲಿ ಅಕ್ಕ ತಂಗಿಯರನ್ನು ಮದುವೆ ಮಾಡಿಕೊಂಡಿದ್ದರು. ಅಲ್ಲೂ ಒಬ್ಬರಿಗೆ ಮಾತು ಬರುತ್ತಿರಲಿಲ್ಲ ಅನ್ನೋದು ವಿಶೇಷ.
ರಾಣೆಮ್ಮ ಹಾಗೂ ಸುಬ್ಬಮ್ಮ ಎಂಬುವರನ್ನು ಇವರ ಸೋದರ ಸಂಬಂಧಿ ನಾಗರಾಜಪ್ಪ ಎಂಬುವರು ಮದುವೆಯಾಗಿದ್ದರೆಂಬುದೇ ವಿಶೇಷ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ