November 22, 2024

Newsnap Kannada

The World at your finger tips!

ozone

ಓಝೋನ್ ರಕ್ಷಣೆಗೆ ಮಾಂಟ್ರಿಯಲ್ ತೀರ್ಮಾನ ರಾಮಬಾಣ

Spread the love

ನಮ್ಮ ಭೂಮಿಯ ಸುತ್ತ ಓಝೋನ್ ಪದರ ಇದೆ.ಇದು ಸೂರ್ಯನ ಅಲ್ಟ್ರಾವಯಲೆಟ್ ಕಿರಣಗಳ ನೇರವಾಗಿ ಭೂಮಿಯ ಮೇಲೆ ಬೀಳದಂತೆ ತಡೆಯುತ್ತದೆ. ಹೀಗಾಗಿ ಅಲ್ಟ್ರಾವಯಲೆಟ್ ಕಿರಣಗಳಿಂದ ನಮ್ಮ ದೇಹದ ಮೇಲಾಗಬಹುದಾದ ಕೆಟ್ಟ ಪರಿಣಶಾಮಗಳನ್ನು ನಿವಾರಿಸಿದಂತಾಗಿದೆ. ಓಝೋನ್ ನಮ್ಮ ಆರೋಗ್ಯ ರಕ್ಷಕ. ಈಗ ಈ ಪದರದಲ್ಲಿ ಒಂದು ಕಡೆ ರಂದ್ರ ಕಂಡು ಬಂದಿದೆ. ಇದರಿಂದ ವಾತಾವರಣದಲ್ಲಿ ಬಹಳ ಬದಲಾವಣೆಗಳಾಗುತ್ತಿವೆ ಎಂಬುದು ವಿಜ್ಞಾನಿಗಳ ವಾದ. ಇದಕ್ಕೆ ಅವರು ಹಲವು ಉದಾಹರಣೆಗಳನ್ನು ನೀಡುತ್ತಾರೆ. ಅತಿಯಾದ ಬಿಸಿಲು, ಅತಿಯಾದ ಚಳಿ. ಎರಡಕ್ಕೂ ಓಝೋನ್ ರಂಧ್ರವೇ ಕಾರಣ. ವಾತಾವರಣದಲ್ಲಿ ಉಷ್ಣತೆ ಮತ್ತು ಶೈತ್ಯದ ನಡುವೆ ಸಮತೋಲನ ಕಾಯ್ದುಕೊಳ್ಳಲು ಓಝೋನ್ ಕಾರಣ. ಈಗ ಅಗ್ನಿಪರ್ವತಗಳು ಮತ್ತೆ ಬೆಂಕಿ ಉಗುಳಲು ಇದೇ ಕಾರಣ. ಅಲ್ಲದೆ ಕೆಲವು ಕಡೆ ಅತಿಯಾದ ಚಳಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೂ ಓಜೋನ್ ಇಳಿಮುಖಗೊಂಡಿರುವುದು ಮೂಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಓಝೋನ್ ಬಗ್ಗೆ ಮಾಂಟ್ರೆಯಲ್‍ನಲ್ಲಿ ಜಾಗತಿಕ ಸಮಾವೇಶ ನಡೆಯಿತು. ಅಲ್ಲಿ ಓಝೋನ್ ಪದರ ಉಳಿಸಲು ಏನೇನು ಕ್ರಮ ಕೈಗೊಳ್ಳಬೇಕೆಂದು ಪಟ್ಟಿ ಮಾಡಲಾಯಿತು. ಈಗ ಎಲ್ಲ ದೇಶಗಳೂ ಇದನ್ನು ಅನುಸರಿಸುತ್ತಿರುವುದರಿಂದ ಓಜೋನ್ ಪದರದ ನಾಶವನ್ನು ಸ್ವಲ್ಪ ಮಟ್ಟಿಗೆ ತಡೆಗಟ್ಟಲು ಸಾಧ್ಯವಾಗಿದೆ. ಮೊದಲನೆಯದಾಗಿ ಹಲವು ರಾಸಾಯನಿಕಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಯಿತು. ಅದರಿಂದ ಓಜೋನ್ ನಾಶವನ್ನು ಕಡಿಮೆ ಮಾಡಲು ಸಾಧ್ಯವಾಗಿದೆ. ಓಝೋನ್ ನಾಶಕ್ಕೆ ಓಎಚ್, ಎನ್‍ಓ, ಸಿಐ, ಬಿಆರ್ ಕಾರಣ. ಓಎಚ್ ಮತ್ತು ಎನ್‍ಓ ವಾತಾವರಣದಲ್ಲೇ ಸೃಷ್ಟಿಯಾಗುತ್ತವೆ. ಇದನ್ನು ಮನುಷ್ಯ ನಿಯಂತ್ರಿಸಲು ಬರುವುದಿಲ್ಲ. ಆದರೆ ಕ್ಲೋರಿನ್ ಮತ್ತು ಬ್ರೋಮಿನ್ ಅಧಿಕಗೊಳ್ಳಲು ಮನುಷ್ಯನೇ ಕಾರಣ ಕ್ಲೋರಿನ್ ಕಣಗಳು ಓಝೋನ್‍ಗೆ ಶತ್ರು. ಅದೇರೀತಿ ಬ್ರೋಮಿನ್. ಕ್ಲೋರಿನ್‍ಫ್ಲೊರೊ ಕಾರ್ಬನ್ ಮತ್ತು ಹೈಟ್ರೋ ಕ್ಲೋರೊಫ್ಲೋರೊ ಕಾರ್ಬನ್ ಬಹಳ ತೀವ್ರಗತಿಯಲ್ಲಿ ಓಜೋನ್ ಹಾಳು ಮಾಡುತ್ತದೆ. ಇದರ ಉತ್ಪಾದನೆ ಇಳಿಮುಖಗೊಂಡಲ್ಲಿ ಓಜೋನ್ ರಕ್ಷಿಸಬಹುದು.
1988 ರಿಂದ ಓಜೋನ್ ಇಳಮುಖಗೊಳ್ಳುತ್ತ ಬಂದಿದೆ. ಹಲವು ಕ್ರಮಗಳನ್ನು ಕೈಗೊಂಡಲ್ಲಿ 2070ಕ್ಕೆ ಓಜೋನ್ ಪದರ ಮೊದಲ ಸ್ಥಿತಿಗೆ ಬರಬಹುದು ಎಂದು ವಿಜ್ಞಾನಿಗಳು ನಿರೀಕ್ಷಿಸಿದ್ದಾರೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಓಝೋನದ ಪದರದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಓಝೋನ್ ಎಷ್ಟಿದೆ ಎಂಬುದನ್ನು ತಿಳಿಯಲು ಡಿಯು ಎಂಬ ಮಾಪಕವನ್ನು ಬಳಸುತ್ತಾರೆ. ಇದರ ಬಗ್ಗೆ ನೂರಾರು ಸಂಶೋಧನೆಗಳು ನಡೆಯುತ್ತಿವೆ. ಒಂದು ವೇಳೆ ಸೂರ್ಯನ ಅಲ್ಟ್ರಾವಯಲೆಟ್ ಕಿರಣಗಳು ಭೂಮಿಯ ಮೇಲೆ ನೇರವಾಗಿ ಆಗುವ ದುಷ್ಟ ಪರಿಣಾಮಗಳು ಏನು ಎಂಬುದನ್ನೂ ವಿಜ್ಞಾನಿಗಳು ಪಟ್ಟಿ ಮಾಡಿದ್ದಾರೆ. ನಮ್ಮ ಕಾಣದ ಒಂದು ಪದರ ಈ ರೀತಿ ಮನುಕುಲವನ್ನು ರಕ್ಷಿಸುತ್ತಿದೆ ಎಂಬುದು ಆಶ್ಚರ್ಯದ ಸಂಗತಿ. ವಾತಾವರಣದಲ್ಲಿ ಒಳ್ಳೆಯ ಮತ್ತು ಕೆಟ್ಟ ಕಣಗಳು ಇದದೇ ಇರುತ್ತವೆ. ಸಕಲ ಜೀವರಾಶಿಗಳನ್ನು ರಕ್ಷಿಸಲು ಮತ್ತು ಭಕ್ಷಿಸಲು ಇವೇ ಕಾರಣ ಎಂಬುದು ಸ್ಪಷ್ಟ. ವಾತಾವರಣದಲ್ಲಿ ಸ್ನೇಹಜೀವಿಗಳನ್ನು ರಕ್ಷಿಸುವುದು, ದುಷ್ಟ ಕಣಗಳನ್ನು ನಿಯಂತ್ರಿಸುವುದು ವಿಜ್ಞಾನಿಗಳ ಕರ್ತವ್ಯ. ನಿಸರ್ಗವನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವುದೇ ವಿಜ್ಞಾನ. ಅದಕ್ಕೆ ದೊಡ್ಡ ದೊಡ್ಡ ವಿಜ್ಞಾನಿಗಳು ಕೊನೆಗೆ ದಾರ್ಶನಿಕರಾಗುತ್ತಾರೆ. ಅವರಿಗೆ ಯಾವುದೋ ಒಂದು ಅಗೋಚರ ಶಕ್ತಿ ನಮ್ಮನ್ನು ಕಾಪಾಡುತ್ತಿದೆ ಎಂಬ ಅಭಿಪ್ರಾಯಕ್ಕೆ ಬರಲು ಇದೇ ಕಾರಣ. ಎಷ್ಟೋ ಸಂಶೋಧನೆ ನಡೆದರೂ ನಿಸರ್ಗದ ನಿಗೂಢತೆಯನ್ನು ತಿಳಿದುಕೊಳ್ಳುವುದು ಕಷ್ಟ.

Copyright © All rights reserved Newsnap | Newsever by AF themes.
error: Content is protected !!