ಸಚಿವ ಸ್ಥಾನದಿಂದ ನನ್ನನ್ನು ವಜಾ ಮಾಡಿದರೂ ಜಗ್ಗಲ್ಲ , ಬಗ್ಗಲ್ಲ. ಯಾವುದಕ್ಕೂ ಡೋಂಟ್ ಕೇರ್. ನನಗೂ ಬೆಂಬಲವಾಗಿ ಶಾಸಕರಿದ್ದಾರೆ. ನಾನು ರೆಬಲ್ ಅಲ್ಲ. ಪಕ್ಷಕ್ಕೆ ಲಾಯಲ್ ಎಂದು ಗ್ರಾಮೀಣಾಭಿವೃದ್ಧಿ ಸಚಿವ
ಕೆ ಎಸ್ ಈಶ್ವರಪ್ಪ ಗುಡುಗಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ಅನುದಾನ ಹಂಚಿಕೆ ವಿಚಾರದಲ್ಲಿ ನನ್ನನ್ನು ನಿರ್ಲಕ್ಷ್ಯ ಮಾಡಲಾಗಿದೆ. ನನ್ನ ಗಮನಕ್ಕೆ ಬರದೇ ಸಿಎಂ ಯಡಿಯೂರಪ್ಪ ಶಾಸಕರ ಕ್ಷೇತ್ರಗಳಿಗೆ ಅನುದಾನ ಹಂಚಿಕೆ ಮಾಡಿದ್ದಾರೆ. ಇದನ್ನು ಖಂಡಿತವಾಗಿ ನಾನು ಸಹಿಸುವುದಿಲ್ಲ ಎಂದು ಗುಡುಗಿದರು.
ಸಿಎಂ ನಿಲುವು , ನಿರ್ಧಾರ ವಿರೋಧಿಸಿದ ಕೂಡಲೇ ನಾನು ರೆಬಲ್ ಅಲ್ಲ. ನಾನು ಪಕ್ಷಕ್ಕೆ ಯಾವಾಗಲೂ ಲಾಯಲ್ ನ ನಾಯಕ. ನ್ಯಾಯಯುತವಾಗಿ ವಿಚಾರಗಳನ್ನು ಕೇಳುತ್ತಿದ್ದೇನೆ ಅಷ್ಟೆ ಎಂದು ಈಶ್ವರಪ್ಪ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು.
ರಾಜ್ಯಪಾಲರನ್ನು ಭೇಟಿ ಮಾಡಿರುವುದು ನಿಜ. ಆದರೆ ಈ ವಿಚಾರವಾಗಿ ದೂರು ನೀಡಿಲ್ಲ. ಹಾಗಂತೆ ರಾಜ್ಯಪಾಲರ ಜೊತೆ ಏನು ಮಾತನಾಡಿದೆ ಎಂದು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದರು ಸಚಿವ ಈಶ್ವರಪ್ಪ.
ನಾನು ಕೂಡ ಏಕಾಂಗಿ ಅಲ್ಲ.ನನ್ನ ಪರವಾಗಿ ಹಲವು ಶಾಸಕರಿದ್ದಾರೆ. ಸಹಿ ಸಂಗ್ರಹ ಮಾಡುತ್ತೇವೆ ಅಂತ ಅವರೆಲ್ಲಾ ಹೇಳಿದ್ದರು. ಆದರೆ ನಾನೇ ಬೇಡ ಅಂತ ಹೇಳಿರುವೆ. ಇವರಿಗೆ ಹೇಗೆ ಶಾಸಕರು ಬೆಂಬಲಿಸುತ್ತಾರೊ, ಹಾಗೇಯೇ ನನ್ನ ಬೆಂಬಲಿಸುವ ಶಾಸಕರು ಕೂಡ ಇದ್ದಾರೆ ಎಂದು ಈಶ್ವರಪ್ಪ ಯಡಿಯೂರಪ್ಪನವರಿಗೆ ತಿರುಗೇಟು ನೀಡಿದರು.
ನನ್ನ ವಿರುದ್ಧ ಏನೇ ಕ್ರಮ ಕೈಗೊಂಡರೂ ಅಥವಾ ಸಚಿವ ಸ್ಥಾನದಿಂದ ವಜಾ ಮಾಡಿದದರೂ ನಾನು ಮಾತ್ರ ಬಗ್ಗಲ್ಲ, ಜಗ್ಗಲ್ಲ ಎಂದು ತಮ್ಮ ವಿರೋಧಿಗಳಿಗೆ ಎಚ್ಚರಿಕೆಯ ಮಾತುಗಳನ್ನು ಹೇಳಿದರು.
ಈ ಎಲ್ಲಾ ವಿಚಾರವಾಗಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಕೇಂದ್ರ ಸಚಿವರು ಮಾತನಾಡಿದ್ದೇನೆ.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ