ಸಚಿವ ಸ್ಥಾನ ಹೋದರೂ ಜಗ್ಗಲ್ಲ – ಬಗ್ಗಲ್ಲ – ನಾನು ರೆಬಲ್ ಅಲ್ಲ : ಪಕ್ಷಕ್ಕೆ ಲಾಯಲ್ – ಸಚಿವ ಈಶ್ವರಪ್ಪ

Team Newsnap
1 Min Read
Image source : google

ಸಚಿವ ಸ್ಥಾನದಿಂದ ನನ್ನನ್ನು ವಜಾ ಮಾಡಿದರೂ ಜಗ್ಗಲ್ಲ , ಬಗ್ಗಲ್ಲ. ಯಾವುದಕ್ಕೂ ಡೋಂಟ್ ಕೇರ್. ನನಗೂ ಬೆಂಬಲವಾಗಿ ಶಾಸಕರಿದ್ದಾರೆ.‌ ನಾನು ರೆಬಲ್ ಅಲ್ಲ. ಪಕ್ಷಕ್ಕೆ ಲಾಯಲ್ ಎಂದು ಗ್ರಾಮೀಣಾಭಿವೃದ್ಧಿ ಸಚಿವ
ಕೆ ಎಸ್ ಈಶ್ವರಪ್ಪ ಗುಡುಗಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ಅನುದಾನ ಹಂಚಿಕೆ ವಿಚಾರದಲ್ಲಿ ನನ್ನನ್ನು ನಿರ್ಲಕ್ಷ್ಯ ಮಾಡಲಾಗಿದೆ. ನನ್ನ ಗಮನಕ್ಕೆ ಬರದೇ ಸಿಎಂ ಯಡಿಯೂರಪ್ಪ ಶಾಸಕರ ಕ್ಷೇತ್ರಗಳಿಗೆ ಅನುದಾನ ಹಂಚಿಕೆ ಮಾಡಿದ್ದಾರೆ. ಇದನ್ನು ಖಂಡಿತವಾಗಿ ನಾನು ಸಹಿಸುವುದಿಲ್ಲ ಎಂದು ಗುಡುಗಿದರು.

ಸಿಎಂ ನಿಲುವು , ನಿರ್ಧಾರ ವಿರೋಧಿಸಿದ ಕೂಡಲೇ ನಾನು ರೆಬಲ್ ಅಲ್ಲ. ನಾನು ಪಕ್ಷಕ್ಕೆ ಯಾವಾಗಲೂ ಲಾಯಲ್ ನ ನಾಯಕ. ನ್ಯಾಯಯುತವಾಗಿ ವಿಚಾರಗಳನ್ನು ಕೇಳುತ್ತಿದ್ದೇನೆ ಅಷ್ಟೆ ಎಂದು ಈಶ್ವರಪ್ಪ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು.

ರಾಜ್ಯಪಾಲರನ್ನು ಭೇಟಿ ಮಾಡಿರುವುದು ನಿಜ. ಆದರೆ ಈ ವಿಚಾರವಾಗಿ ದೂರು ನೀಡಿಲ್ಲ. ಹಾಗಂತೆ ರಾಜ್ಯಪಾಲರ ಜೊತೆ ಏನು ಮಾತನಾಡಿದೆ ಎಂದು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದರು ಸಚಿವ ಈಶ್ವರಪ್ಪ.

ನಾನು ಕೂಡ ಏಕಾಂಗಿ ಅಲ್ಲ.ನನ್ನ ಪರವಾಗಿ ಹಲವು ಶಾಸಕರಿದ್ದಾರೆ. ಸಹಿ ಸಂಗ್ರಹ ಮಾಡುತ್ತೇವೆ ಅಂತ ಅವರೆಲ್ಲಾ ಹೇಳಿದ್ದರು. ಆದರೆ ನಾನೇ ಬೇಡ ಅಂತ ಹೇಳಿರುವೆ. ಇವರಿಗೆ ಹೇಗೆ ಶಾಸಕರು ಬೆಂಬಲಿಸುತ್ತಾರೊ, ಹಾಗೇಯೇ ನನ್ನ ಬೆಂಬಲಿಸುವ ಶಾಸಕರು ಕೂಡ ಇದ್ದಾರೆ ಎಂದು ಈಶ್ವರಪ್ಪ ಯಡಿಯೂರಪ್ಪನವರಿಗೆ ತಿರುಗೇಟು‌ ನೀಡಿದರು.

ನನ್ನ ವಿರುದ್ಧ ಏನೇ ಕ್ರಮ ಕೈಗೊಂಡರೂ ಅಥವಾ ಸಚಿವ ಸ್ಥಾನದಿಂದ ವಜಾ ಮಾಡಿದದರೂ ನಾನು ಮಾತ್ರ ಬಗ್ಗಲ್ಲ, ಜಗ್ಗಲ್ಲ ಎಂದು ತಮ್ಮ ವಿರೋಧಿಗಳಿಗೆ ಎಚ್ಚರಿಕೆಯ ಮಾತುಗಳನ್ನು ಹೇಳಿದರು.

ಈ ಎಲ್ಲಾ ವಿಚಾರವಾಗಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಕೇಂದ್ರ ಸಚಿವರು ಮಾತನಾಡಿದ್ದೇನೆ.

Share This Article
Leave a comment