ಆರ್ಸಿಬಿ ಕಳೆದ ಹದಿಮೂರು ಆವೃತ್ತಿಗಳಲ್ಲಿ ಅಭಿಮಾನಿಗಳ ನಿರೀಕ್ಷೆ ಉಳಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಆದರೆ ಈ ಬಾರಿ ಎಲ್ಲಾ ವಿಭಾಗಗಳಲ್ಲೂ ಸಮತೋಲನ ಕಾಯ್ದುಕೊಂಡ ಸದೃಢ ತಂಡವಾಗಿ ಕಣಕ್ಕಿಳಿಯುತ್ತಿದೆ. ಆರ್ಸಿಬಿ ಬಲಹೀನತೆಯಾಗಿದ್ದ ಬೌಲಿಂಗ್ ವಿಭಾಗ ಈ ಬಾರಿ ಚಾಹಲ್ ಜೊತೆಗೆ ಸ್ಟೈನ್, ಮೋರಿಸ್, ಜಂಪಾ ಸೇರ್ಪಡೆಯೊಂದಿಗೆ ಅತ್ಯಂತ ಬಲಿಷ್ಟವಾಗಿದ್ದು, ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಸೆ.21 ರಿಂದ ಕಣಕ್ಕಿಳಿಯುತ್ತಿದೆ.
ಪ್ಲಸ್ ಪಾಯಿಂಟ್‌ಗಳು
- ಆರ್ಸಿಬಿ ತಂಡದಲ್ಲಿ ವಿಶ್ವಶ್ರೇಷ್ಟ ಬ್ಯಾಟ್ಸ್ ಮನ್ ಗಳ ದಂಡೇ ಇದೆ. ಕೊಹ್ಲಿ, ಎಬಿಡಿ, ಫಿಂಚ್, ಮೋಯಿನ್ ಅಲಿ ಸಿಡಿದರೆ ಎದುರಾಳಿ ತಂಡಗಳ ಬೌಲಿಂಗ್ ಪಡೆ ಧೂಳೀಪಟವಾಗುವುದು ಖಚಿತ.
- ಯುವ ಆಟಗಾರರು ಆರ್ಸಿಬಿ ತಂಡದ ಶಕ್ತಿ. ದೇವದತ್ ಪಡಿಕ್ಕಲ್, ಶಿವಂ ದುಬೆ, ಸುಂದರ್, ಗುರುಕೀರತ್ ಸಿಂಗ್, ಜೊಷುವಾ ಫಿಲಿಪ್ಪೆ ದೇಶಿ, ಅಂತಾರಾಷ್ಟೀಯ ಕ್ರಿಕೆಟ್ ನಲ್ಲಿ ಈಗಾಗಲೇ ಮಿಂಚು ಹರಿಸಿದ್ದು, ಕಪ್ ಕನಸಿಗೆ ಬಲ ತುಂಬಿದ್ದಾರೆ.
- ಮೋರಿಸ್ ಮತ್ತು ಸೈನಿ ಡೆತ್ ಓವರ್ ನಲ್ಲಿ ಪಂದ್ಯದ ಫಲಿತಾಂಶ ಬದಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಉಮೇಶ್- ಸ್ಟೈನ್ ಹೊಸ ಬಾಲ್ ಹಂಚಿಕೊಳ್ಳಲಿದ್ದಾರೆ. ಚಾಹಲ್ ಯುಎಇ ಅಂಗಳಲ್ಲಿ ಉತ್ತಮ ಬೌಲಿಂಗ್ ರೆಕಾರ್ಡ್ ಹೊಂದಿದ್ದು, ಆರ್ಸಿಬಿ ಬೌಲಿಂಗ್ ಪಡೆ ಹಿಂದೆಂದಿಗಿಂತಲೂ ಬಲಿಷ್ಟವಾಗಿ ಕಾಣುತ್ತಿದೆ.
- ಆಲ್ರೌಂಡರ್ಗಳು ತಂಡದ ಶಕ್ತಿ. ದುಬೆ, ಮೋರಿಸ್, ಸುಂದರ್, ಮೋಯಿನ್ ಅಲಿ, ಶಹಬಾಜ್ ಅಹ್ಮದ್ ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಕೊಡುಗೆ ನೀಡಬಲ್ಲರು. 8ನೇ ಕ್ರಮಾಂಕದ ವರೆಗೂ ಬ್ಯಾಟ್ಸ್ ಮನ್ ಗಳನ್ನು ಹೊಂದಿರುವುದು ತಂಡಕ್ಕೆ ವರದಾನವಾಗಲಿದೆ.
- ಸೈಮನ್ ಕಾಟಿಚ್, ಮೈಕ್ ಹಸನ್, ಗಾರ್ಡನ್ ಗ್ರಿಫಿತ್ ರಂತಹ ಜವಾಬ್ದಾರಿಯುತ ಕೊಚಿಂಗ್ ಪಡೆ ಹೊಂದಿದೆ.
ಆರ್ಸಿಬಿ ತಂಡದ ದೌರ್ಬಲ್ಯ
- ಆರ್ಸಿಬಿ ಒಂದು ತಂಡವಾಗಿ ಕಣಕ್ಕಿಳಿಯುವುದೇ ಇಲ್ಲ. ಪದೇಪದೆ ಪ್ಲೇಯಿಂಗ್ ಇಲವೆನ್ ಬದಲಾವಣೆ, ಕಳಪೆ ಆಟಗಾರರ ಆಯ್ಕೆ ಆರ್ಸಿಬಿ ದೌರ್ಬಲ್ಯ.
- ಪಿಚ್, ಆಟಗಾರರ ಸಾಮರ್ಥ್ಯ ಅರಿತು ತಂಡವನ್ನು ಮುನ್ನಡೆಸುವಲ್ಲಿ ಕೊಹ್ಲಿ ವಿಫಲತೆ
- ಮೊದಲ 2 ಪಂದ್ಯಗಳಿಗೆ ಇಂಗ್ಲೆಂಡ್ – ಆಸಿಸ್ ಆಟಗಾರರ ಅಲಭ್ಯತೆ
- ಬ್ಯಾಟಿಂಗ್ ವಿಭಾಗದಲ್ಲಿ ಕೊಹ್ಲಿ- ಎಬಿಡಿ ಮೇಲೆ ಅತಿಯಾಗಿ ಅವಲಂಬನೆ
- ಯುವ ಆಟಗಾರರ ಅನನುಭವ, ಮಿಡ್ಲ್ ಆರ್ಡರ್ ನಲ್ಲಿ ಸೂಕ್ತ ಬಿಗ್ ಹಿಟ್ಟರ್ ಗಳು ಇಲ್ಲದಿರುವುದು ತಂಡಕ್ಕೆ ಹಿನ್ನಡೆಯಾಗಬಹುದು.
More Stories
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟಿ20 ಸರಣಿ