ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸುತ್ತಿರುವ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಮಾಜಿ ಪತ್ರಕರ್ತರ ಕೂಟವನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ) ವಿಚಾರಣೆ ನಡೆಸಿದೆ.
ಕೆಲ ತಿಂಗಳ ಹಿಂದೆ ಮಾಜಿ ಪತ್ರಕರ್ತ ನರೇಶ್ ಗೌಡ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಸಿಡಿ ಗ್ಯಾಂಗ್ ಸದಸ್ಯರು ಎಲ್ಲರೂ ಭಾಗಿಯಾಗಿದ್ದರು.
ಈಗ ಇವರೆಲ್ಲರೂ ಒಟ್ಟಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಅದು ತನಿಖಾ ತಂಡಕ್ಕೆ ಲಭ್ಯವಾಗಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.
ಗ್ಯಾಂಗ್ ಸದಸ್ಯರ ಪೈಕಿ ನರೇಶ್ ಮತ್ತು ಶ್ರವಣ್ ನಾಪತ್ತೆಯಾಗಿದ್ದಾರೆ, ಅವರ ಪತ್ತೆ ಕಾರ್ಯಕ್ಕೆ ಪೊಲೀಸರು ಮುಂದಾಗುತ್ತಿದ್ದಾರೆ.
ಶಂಕಿತ ಗ್ಯಾಂಗ್ ನ ಆರೋಪ ಏನು?
- ನರೇಶ್‍ಗೌಡ:
ತುಮಕೂರಿನ ಶಿರಾ ತಾಲೂಕಿನ ಭುವನಹಳ್ಳಿಯಲ್ಲಿರುವ ಮಾಜಿ ಪತ್ರಕರ್ತ. ಸಿಡಿ ತಯಾರಿಕೆಯಲ್ಲಿ ಪ್ರಮುಖ ಪಾತ್ರ. - ಶ್ರವಣ್:
ವಿಜಯಪುರ ದೇವನಹಳ್ಳಿಯ ಮೂಲ ಶ್ರವಣ್ ಹ್ಯಾಕಿಂಗ್ ತಜ್ಞ., ಸಿಡಿ ಅಪ್‍ಲೋಡ್ ಮಾಡಿದ ಆರೋಪವಿದೆ. - ಭವಿತ್ ದೋಣಗುಡಿಗೆ:
ಚಿಕ್ಕಮಗಳೂರಿನ ಆಲ್ದೂರಿನ ಮಾಜಿ ಪತ್ರಕರ್ತ. ರಾಸಲೀಲೆ ಸಿಡಿಗೆ ಸ್ಕ್ರಿಪ್ಟ್, ವಾಯ್ಸ್ ಓವರ್ ನೀಡಿದ ಆರೋಪ. - ಆಕಾಶ್ ತಳವಾಡೆ:
ಬೀದರ್ ಭಾಲ್ಕಿ ಮೂಲದ ಆಕಾಶ್ ತಳವಾಡೆ ಹವ್ಯಾಸಿ ಸಾಕ್ಷ್ಯಚಿತ್ರ ತಯಾರಕ. ಸಿಡಿಯಲ್ಲಿರುವ ಯುವತಿಯ ಸ್ನೇಹಿತ. - ಸಾಗರ್ ಶಿಂಧೆ:
ಬೀದರ್ ಔರಾದ್ ಮೂಲದ ಸಾಗರ್ ಶಿಂಧೆ ಸೈಬರ್ ಕೆಫೆ ಉದ್ಯೋಗಿ. ಸಿಡಿ ಅಪ್‍ಲೋಡ್ ಮಾಡಿದ ಆರೋಪವಿದೆ.
ಸಿಲೋಟ್:
ರಾಮನಗರ ಮೂಲದ ಶಾಲಾ ಶಿಕ್ಷಕಿ. ಲಕ್ಷ್ಮಿಪತಿ ಸ್ನೇಹಿತೆ. ಕಲ್ಲಹಳ್ಳಿಗೆ ಸಿಡಿ ತಲುಪಿಸಿದ ಆರೋಪವಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ