ರಾಜ್ಯದ ಮೂರು ಕ್ಷೇತ್ರಗಳಿಗೆ ಏಪ್ರಿಲ್ 17 ರಂದು ಉಪ ಚುನಾವಣೆ

Team Newsnap
2 Min Read
Election to Tripura Legislative Assembly today - 13 percent voting ತ್ರಿಪುರಾ ವಿಧಾನ ಸಭೆಗೆ ಇಂದು ಚುನಾವಣೆ - ಶೇ 13 ರಷ್ಟು ಮತದಾನ

ಬೆಳಗಾವಿ ಲೋಕಸಭಾ ಕ್ಷೇತ್ರ, ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 17 ರಂದು ಉಪ ಚುನಾವಣೆ ನಡೆಯಲಿದೆ.
ಸಿಂಧಗಿ ವಿಧಾನ ಸಭಾ ಕ್ಷೇತ್ರಕ್ಜೆ ಚುನಾವಣಾ ದಿನಾಂಕ ಪ್ರಕಟಿಸಿಲ್ಲ

ಈ ಕುರಿತಂತೆ ಚುನಾವಣಾ ದಿನಾಂಕ ಘೋಷಣೆ ಮಾಡಿದ ಆಯೋಗ ಮಾರ್ಚ್ 30 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಮಾರ್ಚ್ 31 ನಾಮಪತ್ರ ಪರಿಶೀಲನೆ ನಡೆಯಲಿದೆ. ಮೇ 2 ಚುನಾವಣಾ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಹೇಳಿದೆ

ಬೆಳಗಾವಿ ಲೋಕಸಭಾ ಕ್ಷೇತ್ರ ಬಿಜೆಪಿ ಸಂಸದ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿತ್ತು.

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ದೆ ಮಾಡಲು ಕಾಂಗ್ರೆಸ್ ಮತ್ತು ಬಿಜೆಪಿಯ ಲ್ಲಿ ಭಾರಿ ಪೈಪೋಟಿ ಇದೆ.

ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳು
ಜಗದೀಶ್ ಶೆಟ್ಟರ್, ಶ್ರದ್ಧಾ ಶೆಟ್ಟರ್(ಸುರೇಶ್ ಅಂಗಡಿ ಪುತ್ರಿ), ಡಾ.ಗಿರೀಶ್ ಸೋನವಾಲ್ಕರ್, ಮಹಾಂತೇಶ್ ಕವಟಗಿಮಠ್, ಪ್ರಮೋದ್ ಮುತಾಲಿಕ್, ಮಾಜಿ ಸಂಸದ ರಮೇಶ್ ಕತ್ತಿ, ಡಾ.ರವಿ ಪಾಟೀಲ್, ರಮೇಶ್ ದೇಶಪಾಂಡೆ, ವಕೀಲ ಎಂ.ಬಿ.ಜಿರಲಿ, ಉದ್ಯಮಿ ಮಹಾಂತೇಶ್ ವಕ್ಕುಂದ, ಉಜ್ವಲಾ ಬಡವನಾಚೆ, ದೀಪಾ ಕುಡಚಿ.

ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳು
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌, ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ, ಚನ್ನರಾಜ ಹಟ್ಟಿಹೊಳಿ (ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ), ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಟಿಕೆಟ್ ಘೋಷಿಸುವ ಸಂಭಾವ್ಯತೆಗಳಿವೆ.

ಬಸವಕಲ್ಯಾಣಕ್ಕೆ ಯಾರ್ಯಾರು ಸ್ಪರ್ಧೆ ಯ ಆಕಾಂಕ್ಷಿಗಳು:

ಬಸವಕಲ್ಯಾಣದ ಕಾಂಗ್ರೆಸ್​ ಶಾಸಕ ಬಿ. ನಾರಾಯಣ ರಾವ್​ ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿ ನಿಧನರಾಗಿದ್ದರು. ಅವರ ನಿಧನದಿಂದ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ತೆರವಾಗಿತ್ತು.

ಕಾಂಗ್ರೆಸ್​ನಿಂದ ಬಿ.ನಾರಾಯಣರಾವ್ ಅವರ ಪತ್ನಿ ಮಲ್ಲಮ್ಮ, ಧರಂಸಿಂಗ್ ಅವರ ಮಗ ವಿಜಯ್​ಸಿಂಗ್, ಇವರಿಬ್ಬರಲ್ಲಿ ಒಬ್ಬರನ್ನು ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆಗಳಿವೆ.

ಬಿಜೆಪಿಯಿಂದ ಶರಣು ಸಲಗಾರ್, ಮಾಜಿ ಶಾಸಕ ಮಲ್ಲಿಕಾರ್ಜುನ್ ಖೂಬಾ, ಬಸವಕಲ್ಯಾಣ ತಾಲೂಕಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಜಿಲ್ಲಾ ಪಂಚಾಯತ್ ಸದಸ್ಯ ಗುಂಡೂರೆಡ್ಡಿ, ಭಾರತೀಯ ಆಹಾರ ನಿಗಮದ ಸದಸ್ಯ ಉಮೇಶ್ ಬಿರಬಿಟ್ಟೆ, ಪ್ರದೀಪ್ ವಾತಡೆ ಅವರಲ್ಲಿ ಓರ್ವರಿಗೆ ಟಿಕೆಟ್ ದೊರೆಯುವ ಲಕ್ಷಣಗಳಿವೆ.

ಮಸ್ಕಿ ಆಕಾಂಕ್ಷೆಗಳು ಯಾರು ? :

ಮಸ್ಕಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರತಾಪಗೌಡ ಪಾಟೀಲ್ ಬಿಜೆಪಿ ಸೇರಿದ್ದರು. ನಂತರದ ಬೆಳವಣಿಗೆಗಳಲ್ಲಿ ವಿಧಾನಸಭಾ ಸ್ಪೀಕರ್ ರಮೇಶಕುಮಾರ್, ಪ್ರತಾಪಗೌಡ ಪಾಟೀಲರನ್ನು ಅನರ್ಹಗೊಳಿಸಿದ್ದರು. ಹೀಗಾಗಿ ಮಸ್ಕಿ ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಸದ್ಯ ಬಿಜೆಪಿ ಪಕ್ಷದಿಂದ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ಅಭ್ಯರ್ಥಿ ಬಹುತೇಕ ಖಚಿತ ಘೋಷಣೆಯಷ್ಟೆ ಬಾಕಿ ಇದೆ. ಕಾಂಗ್ರೆಸ್ ಪಕ್ಷದಿಂದ ಬಸಣಗೌಡ ತುರವಿಹಾಳ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಸಿಂಧಗಿ ಕ್ಷೇತ್ರ ಕ್ಕೆ ಚುನಾವಣೆ ಘೋಷಣೆ ಇಲ್ಲ

ಸಿಂಧಗಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್​ ಎಂ.​ಸಿ. ಮನಗೂಳಿ ನಿಧನದಿಂದ ಶಾಸಕ ಸ್ಥಾನ ತೆರವಾಗಿದ್ದರೂ ಚುನಾವಣಾ ಆಯೋಗ ಉಪ ಚುನಾವಣೆಯನ್ನು ಘೋಷಿಸಿಲ್ಲ.

Share This Article
Leave a comment