ಸಿಡಿ ಗ್ಯಾಂಗ್‌ ನಲ್ಲಿ ಮಾಜಿ ಪತ್ರಕರ್ತರ ಕೂಟ ವಿಚಾರಣೆಗೆ ಯಾರ್ಯರು ಆರೋಪಗಳು ಏನು?

Team Newsnap
1 Min Read

ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸುತ್ತಿರುವ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಮಾಜಿ ಪತ್ರಕರ್ತರ‌ ಕೂಟವನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ) ವಿಚಾರಣೆ ನಡೆಸಿದೆ.

ಕೆಲ ತಿಂಗಳ ಹಿಂದೆ ಮಾಜಿ ಪತ್ರಕರ್ತ ನರೇಶ್‌ ಗೌಡ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಸಿಡಿ ಗ್ಯಾಂಗ್‌ ಸದಸ್ಯರು ಎಲ್ಲರೂ ಭಾಗಿಯಾಗಿದ್ದರು. 

ಈಗ ಇವರೆಲ್ಲರೂ ಒಟ್ಟಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಅದು ತನಿಖಾ ತಂಡಕ್ಕೆ ಲಭ್ಯವಾಗಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.

ಗ್ಯಾಂಗ್‌ ಸದಸ್ಯರ ಪೈಕಿ ನರೇಶ್‌ ಮತ್ತು ಶ್ರವಣ್‌ ನಾಪತ್ತೆಯಾಗಿದ್ದಾರೆ, ಅವರ ಪತ್ತೆ ಕಾರ್ಯಕ್ಕೆ ಪೊಲೀಸರು ಮುಂದಾಗುತ್ತಿದ್ದಾರೆ.

ಶಂಕಿತ ಗ್ಯಾಂಗ್ ನ‌ ಆರೋಪ ಏನು?

  • ನರೇಶ್‍ಗೌಡ:
    ತುಮಕೂರಿನ ಶಿರಾ ತಾಲೂಕಿನ ಭುವನಹಳ್ಳಿಯಲ್ಲಿರುವ ಮಾಜಿ ಪತ್ರಕರ್ತ. ಸಿಡಿ ತಯಾರಿಕೆಯಲ್ಲಿ ಪ್ರಮುಖ ಪಾತ್ರ.
  • ಶ್ರವಣ್:
    ವಿಜಯಪುರ ದೇವನಹಳ್ಳಿಯ ಮೂಲ ಶ್ರವಣ್‌ ಹ್ಯಾಕಿಂಗ್‌ ತಜ್ಞ., ಸಿಡಿ ಅಪ್‍ಲೋಡ್ ಮಾಡಿದ ಆರೋಪವಿದೆ.
  • ಭವಿತ್ ದೋಣಗುಡಿಗೆ:
    ಚಿಕ್ಕಮಗಳೂರಿನ ಆಲ್ದೂರಿನ ಮಾಜಿ ಪತ್ರಕರ್ತ. ರಾಸಲೀಲೆ ಸಿಡಿಗೆ ಸ್ಕ್ರಿಪ್ಟ್, ವಾಯ್ಸ್ ಓವರ್ ನೀಡಿದ ಆರೋಪ.
  • ಆಕಾಶ್ ತಳವಾಡೆ:
    ಬೀದರ್ ಭಾಲ್ಕಿ ಮೂಲದ ಆಕಾಶ್‌ ತಳವಾಡೆ ಹವ್ಯಾಸಿ ಸಾಕ್ಷ್ಯಚಿತ್ರ ತಯಾರಕ. ಸಿಡಿಯಲ್ಲಿರುವ ಯುವತಿಯ ಸ್ನೇಹಿತ.
  • ಸಾಗರ್ ಶಿಂಧೆ:
    ಬೀದರ್ ಔರಾದ್ ಮೂಲದ ಸಾಗರ್‌ ಶಿಂಧೆ ಸೈಬರ್ ಕೆಫೆ ಉದ್ಯೋಗಿ. ಸಿಡಿ ಅಪ್‍ಲೋಡ್ ಮಾಡಿದ ಆರೋಪವಿದೆ.

ಸಿಲೋಟ್:
ರಾಮನಗರ ಮೂಲದ ಶಾಲಾ ಶಿಕ್ಷಕಿ. ಲಕ್ಷ್ಮಿಪತಿ ಸ್ನೇಹಿತೆ. ಕಲ್ಲಹಳ್ಳಿಗೆ ಸಿಡಿ ತಲುಪಿಸಿದ ಆರೋಪವಿದೆ.

Share This Article
Leave a comment