ಜನವರಿ 31 ರಂದು ಅಂಕೋಲಾ ತಾಲೂಕಿನ ಮಾಸ್ತಿಕಟ್ಟಿ ಬಳಿ ನಡೆದಿದ್ದ ಅಪಘಾತದಲ್ಲಿ ರೇಖಾ, ಮೇಘನಾ ಎಂಬ ಇಬ್ಬರು ಯುವತಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಯುವತಿಯರು, ಬಾಗಲಕೋಟೆ ಕೃಷಿ ವಿಶ್ವವಿದ್ಯಾಲಯಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ, ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿ ಆಪ್ತ ಕಾರ್ಯದರ್ಶಿ ಮುಲ್ಲಾ ಜೊತೆ ಗೋವಾಗೆ ತೆರಳಿದ್ದರು.
ಮನೆಗೆ ವಾಪಸ್ ಬರುವಾಗ ಅಪಘಾತ ಸಂಭವಿಸಿ ಇಬ್ಬರೂ ಯುವತಿಯರು ದುರಂತ ಸಾವು ಕಂಡರು.
ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿಯ ಆಪ್ತ ಕಾರ್ಯದರ್ಶಿ ಮುಲ್ಲಾ ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ವಿಷಯ ಇದೀಗ ಬಹಿರಂಗವಾಗಿದೆ.
ಮುಲ್ಲಾ ಕಿರುಕುಳ ನೀಡುತ್ತಿದ್ದ ವಿಷಯವನ್ನು ಮೇಘನಾ ತನ್ನ ಗೆಳೆತಿಯೊಂದಿಗೆ ಹಂಚಿಕೊಂಡಿದ್ದಳು. ಇದೀಗ ಈ ವಿಷಯ ಬಹಿರಂಗವಾಗಿದೆ.
ಡಿಸೆಂಬರ್ ತಿಂಗಳೇ ನಿನ್ನ ಕೆಲಸ ಕೊನೆ ಎಂದು ಮುನ್ನ ಹೇಳುತ್ತಿರುತ್ತಾನೆ. ಇದರಿಂದ ನನಗೆ ಆತಂಕವಾಗುತ್ತಿದೆ ಎಂದು ಮೇಘನಾ ನೋವು ತೋಡಿಕೊಂಡಿದ್ದರು.
ಆತಂಕವನ್ನೇ ವೈಯಕ್ತಿಕ ಲಾಭಕ್ಕೆ ಮುಲ್ಲಾ ಬಳಸಿಕೊಂಡಿರುಚ ಶಂಕೆ ವ್ಯಕ್ತಪವಾಗಿದೆ.
ಪ್ರಕರಣದ ತನಿಖೆಗೆ ಜನಜಾಗೃತಿ ಸಂಘಟನೆ ಆಗ್ರಹಿಸಿದೆ. ಕೆಲಸ ಮುಂದುವರೆಸಲು ಯುವತಿಯರಿಗೆ ಕಿರುಕುಳ ನೀಡಲಾಗಿದೆ ಅನ್ನೋ ಆರೋಪ ಕೇಳಿಬರುತ್ತಿದೆ. ತನಿಖೆಗೆ ಜಯ ಕರ್ನಾಟಕ ಸಂಘಟನೆ ಕೂಡ ಆಗ್ರಹಿಸಿದೆ.
ಯುವತಿ ಆಪ್ತರೊಡನೆ ನಡೆಸಿದ್ದ ವಾಟ್ಸಾಪ್ ಚಾಟ್ ಇದೀಗ ಬಹಿರಂಗವಾಗಿದೆ. ಪೋಲೀಸ್ ತನಿಖೆ ಮುಂದುವರೆದಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ