ಹುಬ್ಬಳ್ಳಿಯ ಕಾಂಗ್ರೆಸ್ ನಾಯಕಿ ಯೊಬ್ಬರು ಜನರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ರವರ ಕಪ್ಪು ಹಣವನ್ನು ಸಾಲವಾಗಿ ನೀಡುತ್ತೇನೆಂದು ಹೇಳಿ ಕಾಂಗ್ರೆಸ್ ನಾಯಕನ ಹೆಸರಲ್ಲೇ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಸವದತ್ತಿ ಡಿ.ಕೆ ಶಿವಕುಮಾರ್ರವರ ಕಪ್ಪು ಹಣದಿಂದ ಕಡಿಮೆ ಬಡ್ಡಿಯಲ್ಲಿ ಸಾಲವನ್ನು ನೀಡುತ್ತೇನೆಂದು ಜನರಿಗೆ ನಂಬಿಸಿ ಲಕ್ಷ ಲಕ್ಷ ಹಣವನ್ನು ವಸೂಲಿ ಮಾಡಿ ಎಸ್ಕೇಪ್ ಆಗಿದ್ದಾರೆಂದು ಗೊತ್ತಾಗಿದೆ.
ನಾನು ಕೆಪಿಸಿಸಿ ಕಚೇರಿಯಿಂದ ಕರೆ ಮಾಡುತ್ತಿದ್ದೇನೆ. ನನಗೆ 10,000 ಸಾವಿರ ಹಣವನ್ನು ನೀಡಿದರೆ ಡಿಕೆಶಿಯವರ ಕಪ್ಪು ಹಣದಿಂದ ನಿಮಗೆ ಸಾಲವನ್ನು ಕೊಡುತ್ತೇವೆ ಎಂದು ಹೇಳಿ ಲಕ್ಷ ಲಕ್ಷ ಹಣ ವಸೂಲಿ ಮಾಡಿ ಸುಮಾರು 35ಕ್ಕೂ ಹೆಚ್ಚು ಜನರಿಗೆ ಮಹಾಮೋಸ ಮಾಡಿರುವ ಆರೋಪಗಳು ಕೇಳಿಬಂದಿವೆ.
ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಸವದತ್ತಿ ಡಿ.ಕೆ. ಶಿವಕುಮಾರ್ ಹೆಸರಿನ ಜೊತೆಗೆ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಹೆಸರು ಕೂಡಾ ಬಳಕೆ ಮಾಡಿ ಜನರಿಗೆ ವಂಚಿಸಿದ್ದಾರೆನ್ನಲಾಗಿದೆ.
ನನ್ನ ಮನೆಗೆ 5 ಲಕ್ಷ ಸಾಲಬೇಕಿತ್ತು. ಇದಕ್ಕೆ ಸಾಲ ನೀಡಬೇಕಾದರೆ 10 ಸಾವಿರ ರು. ಹಣವನ್ನು ನೀಡಿ ಎಂದು ಪೂರ್ಣಿಮಾ ಸವದತ್ತಿ ಹೇಳಿದ್ದರು.
ನಿಜವೆಂದು ನಂಬಿ ಕೇಳಿದಷ್ಟು ಹಣವನ್ನು ನೀಡಿದ್ದೆ. ಆದರೆ ಯಾವುದೇ ಹಣವನ್ನು ನೀಡದೇ ನಂಬಿಕೆಯ ದ್ರೋಹ ಮಾಡಿದ್ದಾರೆಂದು ಮೋಸ ಹೋದ ಅಕಾಶ್ ದೂರಿನಲ್ಲಿ ತಿಳಿಸಿದ್ದಾರೆ.
ಸಾಲವನ್ನು ಕೊಡಿ ಎಂದು ಕೇಳಿದರೆ ನನಗೆ ನೀವು ಹಣವನ್ನೇ ನೀಡಿಲ್ಲ ಎಂದು ಹೇಳಿದ್ದ ಪೂರ್ಣಿಮಾ ಇದೀಗ ಪರಾರಿಯಾಗಿದ್ದಾರೆ. ಹಣವನ್ನು ನೀಡಿ ಎರಡು ವರ್ಷವಾದರೂ ಸಾಲವನ್ನು ಪಡೆಯದ ಜನರು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪೂರ್ಣಿಮಾ ಸವದತ್ತಿ ವಿರುದ್ಧ ದೂರನ್ನು ದಾಖಲಿಸಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ