ರಾಜಧಾನಿ ಬೆಂಗಳೂರಿನಲ್ಲಿ ಪಟಾಕಿ ಸಿಡಿತದಿಂದ 93 ಮಂದಿಗೆ ಗಾಯ

Team Newsnap
1 Min Read

ಬೆಳಕಿನ ಹಬ್ಬ ದೀಪಾವಳಿಗೆ ಪಟಾಕಿ ಸಿಡಿಸುವುದು ಸಾಮಾನ್ಯ. ಪಟಾಕಿ ಸಿಡಿತ ಸಂದರ್ಭದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಸಂಕಷ್ಟ ಕಟ್ಟಿಟ್ಟ ಬುತ್ತಿ. ಪಟಾಕಿ ಸಿಡಿತದಿಂದ ಕೈ ಕಾಲಿಗೆ ಗಾಯವಾಗುವ ಪ್ರಕರಣಗಳಷ್ಟೇ ಅಲ್ಲ, ಶಾಶ್ವತವಾಗಿ ಕಣ್ಣು ಕಳೆದುಕೊಂಡ ಉದಾಹರಣೆಗಳೂ ಇವೆ. ಕಳೆದ ವರ್ಷ ಮಿಂಟೋ, ನಾರಾಯಣ ನೇತ್ರಾಲಯ, ಅಗರ್ವಾಲ್‌ ಕಣ್ಣಿನ ಆಸ್ಪತ್ರೆಯಲ್ಲಿ 100ಕ್ಕೂ ಅಧಿಕ ಜನರು ಪಟಾಕಿ ಅವಘಡಕ್ಕೆ ತುತ್ತಾಗಿದ್ದರು.

ಈ ವರ್ಷ ದೀಪಾವಳಿಯ ಸಂದರ್ಭದಲ್ಲಿ ಪಟಾಕಿ ಅವಘಡದಿಂದ ಗಾಯಗೊಂಡವರ ಸಂಖ್ಯೆ ಹೆಚ್ಚಾಗುತ್ತಾನೆ ಇದೆ. ಕಳೆದ ಮೂರು ದಿನಗಳಲ್ಲಿ 93ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.

  • ಮಿಂಟೋ ಕಣ್ಣಿನ ಆಸ್ಪತ್ರೆ ಯಲ್ಲಿ 19 ಪ್ರಕರಣಗಳು ದಾಖಲು
  • ನಾರಾಯಣ ನೇತ್ರಾಲಯದಲ್ಲಿ 40 ಪ್ರಕರಣ
  • ನೇತ್ರದಾಮ ಕಣ್ಣಿನ ಆಸ್ಪತ್ರೆಯಲ್ಲಿ 20
  • ಶಂಕರ ಕಣ್ಣಿನ ಆಸ್ಪತ್ರೆ 13 ಪ್ರಕರಣಗಳು
  • ಮೋದಿ ಕಣ್ಣಿನ ಆಸ್ಪತ್ರೆಯಲ್ಲಿ 2 ಪ್ರಕರಣ ದಾಖಲಾಗಿವೆ
Share This Article
Leave a comment