December 19, 2024

Newsnap Kannada

The World at your finger tips!

police officer 8 years old boy

ಶಿವಮೊಗ್ಗದಲ್ಲಿ ಪೊಲೀಸ್ ಅಧಿಕಾರಿಯಾದ 8ರ ಬಾಲಕ!

Spread the love

ಶಿವಮೊಗ್ಗ – ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಬುಧವಾರ 1ನೇ ತರಗತಿಯಲ್ಲಿ ಓದುತ್ತಿರುವ 8 ವರ್ಷದ ಆಜಾನ್ ಖಾನ್ ಒಂದು ಗಂಟೆ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದ. SP ಸೇರಿದಂತೆ ಇಲಾಖೆಯ ಅಧಿಕಾರಿಗಳು ಈ ಕ್ಷಣಕ್ಕೆ ಸಾಕ್ಷಿಯಾದರು.

Ajan police shimogga

8 ವರ್ಷದ ಆಜಾನ್ ಖಾನ್, ತಾನು ಪೊಲೀಸ್ ಅಧಿಕಾರಿಯಾಗಬೇಕು ಎಂಬುದು ಬಾಲಕನ ಕನಸು. ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಆಜಾನ್ ಗೆ ಒಂದು ಗಂಟೆ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಿಕೊಟ್ಟರು . ಶಿವಮೊಗ್ಗದ ಎಸ್‌ಪಿ ಮಿಥುನ್ ಕುಮಾರ್ ಹೂ ಗುಚ್ಛ ಕೊಟ್ಟು ಬಾಲಕನನ್ನು ಠಾಣೆಗೆ ಸ್ವಾಗತ ಕೋರಿದರು.

ಆಜಾನ್ ಖಾನ್‌ ಮೂಲತಃ ಬಾಳೆಹೊನ್ನೂರುನವನು. ಪ್ರಸ್ತುತ ಶಿವಮೊಗ್ಗ ನಗರದ ಸೂಳೆಬೈಲು ನಿವಾಸಿ, ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದಾನೆ. ಬಾಲಕನ ಮತ್ತು ಆತನ ಪೋಷಕರ ಕೋರಿಕೆಯಂತೆ ಆಗಸ್ಟ್ 16ರ ಬುಧವಾರ ಸಂಜೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಬಾಲಕ ಆಜಾನ್ ಖಾನ್ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಲು ಅವಕಾಶ ನೀಡಲಾಯಿತು. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ1402 ಸ್ಪೆಷಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ : ಮಾಹಿತಿ ಇಲ್ಲಿದೆ

8 ವರ್ಷದ ಬಾಲಕ ಆಜಾನ್ ಖಾನ್‌ ಪೊಲೀಸ್ ಸಮವಸ್ತ್ರವನ್ನು ಧರಿಸಿ, ಪೊಲೀಸ್ ನಿರೀಕ್ಷಕರ ಹುದ್ದೆಯನ್ನು ಸಂಕೇತಿಕವಾಗಿ ಅಲಂಕರಿಸಲು ದೊಡ್ಡಪೇಟೆ ಪೊಲೀಸ್ ಠಾಣೆಗೆ ಆಗಮಿಸಿದ. ಶಿವಮೊಗ್ಗದ ಎಸ್‌ಪಿ ಮಿಥುನ್ ಕುಮಾರ್ ಆತನಿಗೆ ಹೂಗುಚ್ಛ ನೀಡಿ ಸ್ವಾಗತ ಕೋರಿದರು.

ಆಜಾನ್ ಖಾನ್‌ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾನೆ. ಆತನ ಹೃದಯ ಸರಿಯಾಗಿ ಬೆಳೆದಿಲ್ಲ. 10 ಲಕ್ಷ ಮಕ್ಕಳಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುವ ಸಮಸ್ಯೆ ಇದಾಗಿದೆ. ಪೊಲೀಸ್ ಅಧಿಕಾರಿಯಾಗಬೇಕು ಎಂಬ ಆತನ ಕನಸನ್ನು ಶಿವಮೊಗ್ಗದ ಪೊಲೀಸರು ಸಾಕಾರಗೊಳಿಸಿದರು.

ajaan psi

ಬಾಲಕ ಆಜಾನ್ ಖಾನ್‌ ಗುಣಮುಖವಾಗಲು ಮೂರು ಬಗೆಯ ಆಪರೇಷನ್ ಮಾಡಬೇಕು. ಹೃದಯ ಮತ್ತು ಶ್ವಾಸಕೋಶದ ಕಸಿ ಮಾಡಬೇಕು ಎಂದು ವೈದ್ಯರು ಹೇಳಿದ್ದಾರೆ.

ಆಜಾನ್ ಖಾನ್‌ ಪೋಷಕರ ಬಳಿ ಮಾಹಿತಿ ಪಡೆದ ಎಸ್‌ಪಿ ಮಿಥುನ್ ಕುಮಾರ್ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಒಂದು ಗಂಟೆಗಳ ಕಾಲ ಬಾಲಕ ಪೊಲೀಸ್ ನಿರೀಕ್ಷಕನಾಗಿ ಕೆಲಸ ಮಾಡಲು ಅವಕಾಶ ನೀಡಿದರು. ಬುಧವಾರ ಬಾಲಕ ಪೋಷಕರ ಜೊತೆ ಠಾಣೆಗೆ ಆಗಮಿಸಿದ್ದ. ರಾಜ್ಯದಲ್ಲಿ ಕೊಡಗು ಎಡಿಸಿ ಸೇರಿ 18 ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ‘ಲೋಕಾ’ ದಾಳಿ

ಠಾಣೆಯ ಸಿಬ್ಬಂದಿ ಆಜಾನ್ ಖಾನ್‌ ಸ್ವಾಗತಿಸಿದರು. ಕುರ್ಚಿಯಲ್ಲಿ ಕುಳಿತ ಬಾಲಕನಿಗೆ ಕೆಲಸಗಳು ಹೇಗೆ ನಡೆಯುತ್ತವೆ? ಎಂದು ವಿವರಣೆ ನೀಡಿದರು. ತನ್ನ ಆಸೆಯಂತೆ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದ ಬಾಲಕ ಸಹ ಸಂತಸ ವ್ಯಕ್ತಪಡಿಸಿದ, ಪೊಲೀಸರಿಗೆ ಪೋಷಕರು ಧನ್ಯವಾದಗಳನ್ನು ತಿಳಿಸಿದರು.

shivamogga news

ಶಿವಮೊಗ್ಗದಲ್ಲಿ ಪೊಲೀಸ್ ಅಧಿಕಾರಿಯಾದ 8ರ ಬಾಲಕ! – An 8-year-old boy became a police officer in Shimoga! police #shivamogga #mandya #psi

Copyright © All rights reserved Newsnap | Newsever by AF themes.
error: Content is protected !!