ಚಿನ್ನ, ನಗದು ಸೇರಿ ಪ್ರಾಚೀನ ಕಾಲದ ಮೂರ್ತಿಗಳು ಪತ್ತೆ : ಧಾರವಾಡದ ಸಂತೋಷ್ ಮನೆ ಮೇಲೆ ದಾಳಿ ವೇಳೆ ಬಹಿರಂಗ

Team Newsnap
1 Min Read

ಧಾರವಾಡ – ಧಾರವಾಡದಲ್ಲಿರುವ ಬೆಳಗಾವಿ ಪಾಲಿಕೆ ಸಹಾಯಕ ಆಯುಕ್ತ ಸಂತೋಷ್ ಸಂತೋಷ್ ಆನಿಶೆಟ್ಟರ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ

ಸಪ್ತಾಪುರ್ ಬಡಾವಣೆಯ ಮಿಚಿಗನ್ ಲೇಔಟ್ ನಲ್ಲಿರುವ ಮನೆ ಮೇಲೆ ಅಧಿಕಾರಿಗಳು ನಡೆಸಿದ್ದಾರೆ.

ಈ ಮೊದಲು ಹುಬ್ಬಳ್ಳಿ ಧಾರವಾಡ ಪಾಲಿಕೆಯಲ್ಲಿದ್ದ ಸಂತೋಷ್ ಅನಿ ಶೆಟ್ಟರ್ ಈಗ ಬೆಳಗಾವಿ ಪಾಲಿಕೆ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ1402 ಸ್ಪೆಷಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ : ಮಾಹಿತಿ ಇಲ್ಲಿದೆ

ಸಂತೋಷ್ ಅನಿ ಶೆಟ್ಟರ್ ಮನೆಯಲ್ಲಿ ಬ್ರಿಟಿಷರ ಕಾಲದ ವಸ್ತು ಪತ್ತೆಯಗಿದೆ, ಸಂತೋಷ್ ಅವರು ಅಪರೂಪದ ಬೀಗಗಳ ಸಂಗ್ರಹಣೆ ಹವ್ಯಾಸ ಹೊಂದಿದ್ದರು. ನಿವಾಸನದಲ್ಲಿ ಪ್ರಾಚ್ಯ ಕಾಲದ ಅನೇಕ ಮೂರ್ತಿಗಳು ಪತ್ತೆಯಾಗಿವೆ.

ರಾಜ್ಯ ಪ್ರಾಚ್ಯ ವಸ್ತು ಅಧಿಕಾರಿಗಳನ್ನು ಕರೆಸಲು ಮುಂದಾದ ಅಧಿಕಾರಿಗಳು ಸಪ್ತಾಪುರ ಬಡಾವಣೆಯ ಮಿಚಿಗನ್ ನಲ್ಲಿರುವ ನಿವಾಸದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಹಲವು ದಾಖಲೆಗಳನ್ನು, ನಗದು ವಶಪಡಿಸಿಕೊಂಡಿವೆ. ಅಲ್ಲದೆ ಬಿಜಿಎಸ್ ಶಾಲೆ ಬಳಿ ಇರುವ ಸಂತೋಷ್ ಸಹೋದರನ ನಿವಾಸದ ಮೇಲು ದಾಳಿ ನಡೆಸಿದ್ದಾರೆ ಎನ್ನಲಾಗಿದೆ

Share This Article
Leave a comment