ರಾಜ್ಯದಲ್ಲಿ ಕೊಡಗು ಎಡಿಸಿ ಸೇರಿ 18 ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ‘ಲೋಕಾ’ ದಾಳಿ

Team Newsnap
1 Min Read

ಬೆಂಗಳೂರು :

ರಾಜ್ಯದ 18 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳಿಗ್ಗೆ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಆದಾಯಕ್ಕೂ ಮೀರಿ ಆಸ್ತಿ ಸಂಪಾದಿಸಿದ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ ನೀಡಿ ಹಲವು ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ.

ಯಾವ ಅಧಿಕಾರಿಗಳ ಮನೆ ಮೇಲೆ ದಾಳಿ :

ಚಿತ್ರದುರ್ಗ, ದಾವಣಗೆರೆ, ಕೊಡಗು ಸೇರಿದಂತೆ ಹಲವೆಡೆ ದಾಳಿಯಾಗಿದೆ. ಹೊಳಲ್ಕೆರೆ ಸಣ್ಣ ನೀರಾವರಿ ಇಲಾಖೆ ಇಂಜನಿಯರ್ ಕೆ.ಮಹೇಶ್, ಬಿಬಿಎಂಪಿ AE ಎಚ್. ಭಾರತಿ ಮನೆಯ ಮೇಲೆ ದಾಳಿಯಾಗಿದೆ.

ಚನ್ನಗಿರಿ ತಾಲೂಕಿನ RFO ಸತೀಶ್ ಮೇಲೆ ದಾಳಿಯಾಗಿದೆ. ಸತೀಶ್ 4 ವರ್ಷಕ್ಕೂ ಅಧಿಕ ಚನ್ನಗಿರಿಯಲ್ಲಿ RFO ಆಗಿ ಸೇವೆ ಸಲ್ಲಿಸುತಿದ್ದು, ಆದಾಯ ಮೀರಿ ಆಸ್ತಿ ಗಳಿಕೆ ಮಾಡಿದ ಆರೋಪ ಕೇಳಿ ಬಂದಿದೆ.

ಕೊಡಗಿನಲ್ಲೂ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಕೊಡಗು ಎಡಿಸಿ ನಂಜುಂಡೇಗೌಡ ಮನೆ ಮೇಲೆ ಲೋಕಾಯುಕ್ತ ದಾಳಿಯಾಗಿದೆ. ಅಪಾರ ಪ್ರಮಾಣದ ಚಿನ್ನಾಭರಣ ನಗದು ವಶ ಪಡಿಸಿಕೊಂಡಿದ್ದಾರೆ.

ಡಿವೈಎಸ್ಪಿ ಪವನ್ ಕುಮಾರ್ ನೇತೃತ್ವದಲ್ಲಿ ದಾಳಿಯಾಗಿದೆ. ಮೂವರು ಇನ್ಸ್‌ಪೆಕ್ಟರ್ ಮತ್ತು 10ಕ್ಕೂ ಹೆಚ್ಚು ಸಿಬ್ಬಂದಿ ಶೋಧಕಾರ್ಯ ಶುರುಮಾಡಿದ್ದಾರೆ.

Share This Article
Leave a comment