BMTC ಎಂ.ಡಿ ಹೆಸರಲ್ಲಿ 79 ಲಕ್ಷ ವಂಚನೆ – 6 ಅಧಿಕಾರಿಗಳ ವಿರುದ್ಧ FIR

Team Newsnap
1 Min Read

ಬೆಂಗಳೂರು: BMTC ಎಂ.ಡಿ, ನಿರ್ದೇಶಕರ ಹೆಸರಲ್ಲಿ ನಕಲಿ ಸಹಿ ಮಾಡಿ ಅಧಿಕಾರಿಗಳೇ ಬರೋಬ್ಬರಿ 79 ಲಕ್ಷ ರೂಪಾಯಿ ದೋಚಿರುವ ಘಟನೆ ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಬಿ.ಎಂ.ಟಿ.ಸಿ ವಾಣಿಜ್ಯ ವಿಭಾಗದ ಮುಖ್ಯ ಸಂಚಾರಿ ಸೇರಿ 6 ಜನರ ವಿರುದ್ಧ ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಅಧಿಕಾರಿಗಳೇ ಗುತ್ತಿಗೆದಾರರ ಜೊತೆ ಕೈಜೋಡಿಸಿದ್ದು, ಗೋಲ್ ಮಾಲ್ ನಡೆಸಿದ್ದಾರೆ ಎಂದು ಆರೋಪಿಸಿ BMTC ಸಹಾಯಕ ಭದ್ರತಾ-ಜಾಗೃತ ಸಿ.ಕೆ.ರಮ್ಯಾ ದೂರು ದಾಖಲಿಸಿದ್ದಾರೆ. ಸಿದ್ದಗಂಗಾ ಮಠ – 5 ಕೋಟಿ ಮೌಲ್ಯದ ಥೀಮ್ ಪಾರ್ಕ್ ನಿರ್ಮಾಣ

ಬಿ.ಎಂ.ಟಿ.ಸಿ ಟೆಂಡರ್ ಗಳು, ಫ್ಲ್ಯಾಟ್, ವಾಣಿಜ್ಯ ಮಳಿಗೆಗಳ ಹಿಂಚಿಕೆ, ಟೆಂಡರ್ ಅವಧಿ ವಿಸ್ತರಣೆಗೆ ಸಂಬಂಧಿಸಿದ ಕಡತಗಳಿಗೆ ಬಿ.ಎಂ.ಟಿ.ಸಿ ಎಂ.ಡಿ, ನಿರ್ದೇಶಕರ ಹೆಸರಲ್ಲಿ ನಕಲಿ ಸಹಿ ಮಾಡಿ ಸಂಸ್ಥೆಗೆ ವಂಚಿಸಿದ್ದಾರೆ. ಡಿಸಿಎಂ ಡಿಕೆ ಶಿ​​ಗೆ ಸುಪ್ರಿಂ ನಿಂದ ಬಿಗ್ ರಿಲೀಫ್ : ​ಸಿಬಿಐಗೆ ಮತ್ತೆ ನಿರಾಸೆ

ಬಿ.ಎಂ.ಟಿ.ಸಿಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ನಿರ್ದೇಶಕ ಸೂರ್ಯಸೇನ್, ನಿರ್ದೇಶಕ ಅನ್ಬುಕುಮಾರ್, ರೇಜು, ಸಿ.ಶಿಖಾ, ಭದ್ರತಾ ಮತ್ತು ಜಾಗೃತಿ ವಿಭಾಗದ ನಿರ್ದೇಶಕ ಕೆ.ಅರುಣ ಸಹಿ ನಕಲು ಮಾಡಿದ್ದಾರೆ. ವಾಣಿಜ್ಯ ವಿಭಾಗದ ಮುಖ್ಯ ಸಂಚಾರ ವ್ಯವಸ್ಥಾಪಕ ಶ್ರೀರಾಮ ಮುಲ್ಕಾವನ್, ವಿಭಾಗೀಯ ಸಂಚಾರ ಅಧಿಕಾರಿ ಶ್ಯಾಮಲಾ, ಸಹಾಯಕ ವ್ಯವಸ್ಥಾಪಕ ಅಧಿಕಾರಿ ಬಿ.ಕೆ.ಮಮತ, ಸಹಾಯಕ ಸಂಚಾರ ಅಧಿಕಕಿ ಟಿ.ಅನಿತಾ, ಸಂಚಾರ ನಿರೀಕ್ಷಕ ಸತೀಶ್, ಕಿರಿಯ ಸಾಹಾಯ ಪ್ರಕಾಶ್ ಕೊಪ್ಪಳ ವಿರುದ್ಧ ಪ್ರಕರಣ ದಾಖಲಾಗಿದೆ.

Share This Article
Leave a comment