ಶೇ 70 ರಷ್ಟು ಜನಪ್ರತಿನಿಧಿಗಳಿಗೆ ಆಸ್ತಿ ವಿವರ ಸಲ್ಲಿಸಲು ಆಸಕ್ತಿ ಇಲ್ಲ – ಲೋಕಾಯುಕ್ತ

Team Newsnap
2 Min Read

ಬೆಂಗಳೂರು : ಚುನಾಯಿತ ಜನಪ್ರತಿನಿಧಿಗಳು ಕಡ್ಡಾಯವಾಗಿ ಆಸ್ತಿ ವಿವರ ಸಲ್ಲಿಸಲು ಸೂಚಿಸಿದ್ದರೂ ಕೇವಲ 70 ಮಂದಿ ಜನಪ್ರತಿನಿಧಿಗಳು ಮಾತ್ರ ತಮ್ಮ ಆಸ್ತಿ ವಿವರ ಸಲ್ಲಿಸಿದ್ದಾರೆ . ಉಳಿದವರು ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದ ಲೋಕಾಯುಕ್ತ ನ್ಯಾ ಬಿ ಎಸ್ ಪಾಟೀಲ್ ಅಸಮಾಧಾನ ಸೂಚಿಸಿದ್ದಾರೆ.

ಪ್ರತಿ ವರ್ಷವೂ ಶೇ.70 ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಆಸ್ತಿ ವಿವರ ಸಲ್ಲಿಸಲು ನಿರ್ಲಕ್ಷ್ಯ ತೋರುತ್ತಿರುವುದು ಕಂಡು ಬಂದಿದೆ.

2022-23ನೇ ಸಾಲಿನಲ್ಲಿ 60 ಶಾಸಕರು ಮತ್ತು 36 ವಿಧಾನ ಪರಿಷತ್ ಸದಸ್ಯರು ವಿವರ ಸಲ್ಲಿಸಿರಲ್ಲ. 2021-22 ಸಾಲಿನಲ್ಲಿ 34 ಶಾಸಕರು ಮತ್ತು 24 ವಿಧಾನಪರಿಷತ್ ಸದಸ್ಯರು ಸೇರಿ ಒಟ್ಟು 58 ಜನಪ್ರತಿನಿಧಿಗಳು ತಮ್ಮಆಸ್ತಿ ವಿವರ ಸಲ್ಲಿಸಿರಲಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 22ರ ಪ್ರಕಾರ, ಪ್ರತಿಯೊಬ್ಬ ಸಾರ್ವಜನಿಕ ಸೇವಕನು ಪ್ರತಿ ವರ್ಷದ ಜೂನ್ 30ರೊಳಗೆ ಆಸ್ತಿ ಮತ್ತು ಬಾಧ್ಯತೆಯ ವಿವರಗಳನ್ನು ಸಲ್ಲಿಸಬೇಕು. ಪ್ರಮಾಣಪತ್ರ ಸಲ್ಲಿಸಲು ವಿಫಲರಾದ ಸಾರ್ವಜನಿಕ ಸೇವಕರಿಗೆ ಸಂಬಂಧಿಸಿದಂತೆ ಲೋಕಾಯುಕ್ತರು ಸಕ್ಷಮ ಪ್ರಾಧಿಕಾರಕ್ಕೆ (ರಾಜ್ಯಪಾಲರು) ವರದಿ ಸಲ್ಲಿಸಬೇಕು. ಅಂತಹ ಶಾಸಕರ ಹೆಸರನ್ನು ರಾಜ್ಯದಾದ್ಯಂತ ಪ್ರಸರಣ ಹೊಂದಿರುವ ಮೂರು ದಿನಪತ್ರಿಕೆಗಳಲ್ಲಿ ಪ್ರಕಟಿಸಬೇಕು ಎಂದು ಹೇಳಲಾಗಿದೆ.

ಐಪಿಸಿ ಸೆಕ್ಷನ್ 176 ಪ್ರಕಾರ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಕೊಡದೇ ಹೋದರೆ ಅದು ಒಂದು ಅಪರಾಧವಾಗುತ್ತದೆ. ಅದಕ್ಕೆ ಎರಡು ತಿಂಗಳ ಶಿಕ್ಷೆ ಆಗುತ್ತದೆ. ಒಂದು ವೇಳೆ ಕೊಟ್ಟಂತಹ ಮಾಹಿತಿ ಸುಳ್ಳಾದರೆ ಅದಕ್ಕೆ 6 ತಿಂಗಳು ಶಿಕ್ಷೆಯಾಗುತ್ತದೆ. ಹೀಗಾಗಿ ಐಪಿಸಿ 176 ಪ್ರಕಾರ ವಿವರ ಸಲ್ಲಿಸದ ಜನಪ್ರತಿನಿಧಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ.ಗಣಂಗೂರು ಬಳಿ ರಾಷ್ಟ್ರೀಯ ಹೆದ್ದಾರಿಯ 2 ನೇ ಟೋಲ್ ಸಂಗ್ರಹ ಕಾರ್ಯ ಆರಂಭ: ಪ್ರತಿಭಟನೆ

ಆಸ್ತಿ ವಿವರ ಸಲ್ಲಿಸದ ಜನಪ್ರತಿನಿಧಿಗಳ ಹೆಸರನ್ನು ಕೇವಲ ಪತ್ರಿಕೆಯಲ್ಲಿ ಪ್ರಕಟಿಸಿ ಸುಮ್ಮನಾಗದೆ. ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ನನ್ನ ಅವಧಿಯಲ್ಲಿ ಆಸ್ತಿ ವಿವರ ಸಲ್ಲಿಸಿದ ಕೆಲವು ಜನಪ್ರತಿನಿಧಿಗಳ ಮೇಲೆ ಐಪಿಸಿ 176 ಪ್ರಕಾರ ಎಫ್​ಐಆರ್ ದಾಖಲಿಸಿ ಕ್ರಿಮಿನಲ್ ಕೇಸ್ ದಾಖಲಿಸಿದ್ದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಹೇಳಿದ್ದಾರೆ

Share This Article
Leave a comment