ಗಣಂಗೂರು ಬಳಿ ರಾಷ್ಟ್ರೀಯ ಹೆದ್ದಾರಿಯ 2 ನೇ ಟೋಲ್ ಸಂಗ್ರಹ ಕಾರ್ಯ ಆರಂಭ: ಪ್ರತಿಭಟನೆ

Team Newsnap
1 Min Read

ಶ್ರೀರಂಗಪಟ್ಟಣ :
ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಯ ಗಣಂಗೂರು ಬಳಿ ಇರುವ ಟೋಲ್ ಸಂಗ್ರಹ ಕೇಂದ್ರದಲ್ಲಿ
ಇಂದಿನಿಂದ ವಾಹನಗಳಿಗೆ ಟೋಲ್ ಸಂಗ್ರಹ ಮಾಡಲಾಗುತ್ತಿದೆ, ದಶಪಥ ಹೆದ್ದಾರಿಯ 2ನೇ ಟೋಲ್ ಇದಾಗಿದೆ.

ಟೋಲ್ ಸಂಗ್ರಹಕ್ಕೆ ಭಾರಿ ವಿರೋಧದ ನಡುವೆಯೂ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವು 2 ಟೋಲ್​ನಲ್ಲಿ ಶುಲ್ಕ ಸಂಗ್ರಹಕ್ಕೆ ಆರಂಭ ಮಾಡಿದೆ.

ಮಂಡ್ಯ ಭಾಗದ ಶಾಸಕರು ಹಾಗೂ ಸಾರ್ವಜನಿಕರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇಂದು ಕನ್ನಡಪರ ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ.

ಸವಾರರು ಸೇರಿದಂತೆ ಸ್ಥಳೀಯರು ಕಿಡಿ ಕಾರಿದ್ದಾರೆ. ಈಗ ತಾನೆ ರಾಮನಗರದ ಕಣಮಿಣಕಿ ಟೋಲ್ ಆರಂಭ ಮಾಡಲಾಗಿದೆ. ಈಗಾಗಲೇ ಇಲ್ಲಿ ಶುಲ್ಕ ಪಾವತಿ ಮಾಡಲಾಗುತ್ತಿದೆ. ದಶಪಥ ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಆದ್ರೂ ಒಂದು ಟೋಲ್​ನ ಶುಲ್ಕ ಹೊರೆ ಬೀಳುತ್ತಿದೆ. ಈ ಹೊತ್ತಿನಲ್ಲಿ 2 ಟೋಲ್​ ಶುರು ಮಾಡಿ ವಸೂಲಿ ಮಾಡುವುದು ಸರಿಯಲ್ಲ ಎಂದು ಸವಾರರು ಹೇಳುತ್ತಿದ್ದಾರೆ. ಹೀಗಾಗಿ ಇಂದು ಕನ್ನಡಪರ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ.

Share This Article
Leave a comment